ಧರ್ಮಸ್ಥಳ ಪ್ರಕರಣ: ಸಿಎಂ ಕ್ಷಮೆ ಕೇಳಿ ರಾಜೀನಾಮೆ ನೀಡಲಿ – ಛಲವಾದಿ ನಾರಾಯಣಸ್ವಾಮಿ

ಆಗಸ್ಟ್ 16, 2025 - 20:04
 0  18
ಧರ್ಮಸ್ಥಳ ಪ್ರಕರಣ: ಸಿಎಂ ಕ್ಷಮೆ ಕೇಳಿ ರಾಜೀನಾಮೆ ನೀಡಲಿ – ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರಿಂದ ಕ್ಷಮೆ ಕೇಳಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, “ಆರ್ಸಿಬಿ ಕಪ್ ಗೆದ್ದಾಗ ಸರ್ಕಾರ ಮುನ್ನೆಚ್ಚರಿಕೆ ವಹಿಸದೇ ಕಾರ್ಯಕ್ರಮ ಹಮ್ಮಿಕೊಂಡ ಪರಿಣಾಮ 11 ಜನರು ಸಾವನ್ನಪ್ಪಿದರು. ಇಂತಹ ತಪ್ಪು ಮಾಡಿದ ಸರ್ಕಾರ ಈಗ ಧರ್ಮಸ್ಥಳದ ವಿಚಾರದಲ್ಲಿಯೂ ಎಡವಟ್ಟನ್ನು ಮಾಡಿಕೊಂಡಿದೆ. ಧರ್ಮಸ್ಥಳ ಧಾರ್ಮಿಕವಾಗಿ ಪವಿತ್ರ ಸ್ಥಳ.

ಸಾಮಾನ್ಯ ಜನರೂ ಭಕ್ತಿಯಿಂದ ಬೇಡಿಕೊಳ್ತಾರೆ. ಆದರೆ ಕೇಸಿನಲ್ಲಿ ಧಾರ್ಮಿಕ ಸ್ಥಳವನ್ನು ಅಪಮಾನ ಮಾಡುವ ರೀತಿಯ ಅಪಪ್ರಚಾರ ನಡೆದಿದೆಎಂದು ಹೇಳಿದರು. ಮೊದಲು ಇದೇ ಗುಂಪು ಶಬರಿಮಲೆಯಲ್ಲಿ ಕೆಲಸ ಮಾಡಿತು. ಆಗ ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಶಬರಿಮಲೆಗೆ ಇನ್ನಷ್ಟು ಭಕ್ತರು ಹೆಚ್ಚಿದರು. ಈಗ ಅದೇ ಗುಂಪು ಧರ್ಮಸ್ಥಳವನ್ನು ಗುರಿಯಾಗಿಸಿದೆಎಂದು ಹೇಳಿದರು

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow