ನಟ ದರ್ಶನ್ʼಗೆ ಮತ್ತೊಂದು ಶಾಕ್ ಕೊಟ್ಟ ಬೆಂಗಳೂರು ಪೊಲೀಸರು..! ಗನ್ ಲೈಸೆನ್ಸ್ ರದ್ದು

ಜನವರಿ 21, 2025 - 14:35
 0  14
ನಟ ದರ್ಶನ್ʼಗೆ ಮತ್ತೊಂದು ಶಾಕ್ ಕೊಟ್ಟ ಬೆಂಗಳೂರು ಪೊಲೀಸರು..! ಗನ್ ಲೈಸೆನ್ಸ್ ರದ್ದು

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ ಜಾಮೀನಿನ ಮೇಲೆ ರಿಲೀಸ್‌ ಆಗಿದ್ದಾರೆ. ತೀವ್ರವಾದ ಬೆನ್ನುನೋವಿನಿಂದ ಬಳಲುತಿದ್ದ ನಟ ದರ್ಶನ್‌ ಅವರು ಮೆಡಿಕಲ್‌ ಗ್ರೌಂಡ್ಸ್‌ ಮೇಲೆ ಬೇಲ್‌ ಪಡೆದಿದ್ದರು . ಬೇಲ್‌ ಕೊಡಲು ನಟ ದರ್ಶನ್‌ ಗೆ ಸಾಕಷ್ಟು ನಿರ್ಬಂಧಗಳನ್ನ  ಕೋರ್ಟ್‌ ವಿಧಿಸಿತ್ತು. ಅದರಲ್ಲಿ ನಟ ದರ್ಶನ್‌ ಅವರ ಬಳಿ ಇದ್ದ ಗನ್‌ ಕೂಡ ಪೊಲೀಸರಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿತ್ತು.

ರಿಲೀಸ್‌ ಆಗುವ ವೇಳೆ ನ್ಯಾಯಾಲಯ ಹೇಳಿದ್ದ ಎಲ್ಲಾ ನಿಯಮಗಳನ್ನು ಪಾಲಿಸಿದ್ದರು ನಟ ದರ್ಶನ್‌. ಆದರೆ ಇದೀಗ ನಟ ದರ್ಶನ್ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ಅಮಾನತಾಗಿದೆ. ಕೇಸ್ ವಿಚಾರಣೆ ಮುಗಿಯುವ ತನಕ ದರ್ಶನ್​​ಗೆ ಗನ್ ಬಳಸುವ ಭಾಗ್ಯ ಇಲ್ಲ. ದರ್ಶನ್ ಕೊಟ್ಟ ಕಾರಣ ಪರಿಗಣಿಸದೆ ಪೊಲೀಸರು ಸದ್ಯ ನಟನ ಗನ್ ಲೈಸೆನ್ಸ್ ಅಮಾನತ್ತಿನಲ್ಲಿಟ್ಟಿದ್ದಾರೆ. ಕೂಡಲೇ ಗನ್ ಸರೆಂಡರ್ ಮಾಡಲು ಸೂಚನೆ ಕೂಡಾ ನೀಡಲಾಗಿದೆ.

ಆರ್.ಆರ್.ನಗರ ಪೊಲೀಸರಿಗೆ ಗನ್ ಸರೆಂಡರ್ ಮಾಡಲು ಸೂಚನೆ ನೀಡಲಾಗಿದ್ದು ಕೊಲೆ ಕೇಸ್ ನಲ್ಲಿ ಆರೋಪಿಯಾಗಿರೋ ನಟ ದರ್ಶನ್ ಅವರಿಗೆ ಇನ್ನು ಕೇಸ್ ಮುಗಿಯೋ ತನಕ ಗನ್ ಬಳಸೋಕಾಗಲ್ಲ. ರೇಣುಕಾಸ್ವಾಮಿ ಕೇಸ್ ಆರೋಪಿಯಾಗಿರುವುದರಿಂದ ನಟನ ಗನ್ ಲೈಸೆನ್ಸ್ ಕ್ಯಾನ್ಸಲ್​ಗೆ ಪೊಲೀಸರು ಪತ್ರ ಬರೆದಿದ್ದಾರೆ. ಈ ಹಿಂದೆ ಪೊಲೀಸ್ ನೋಟಿಸ್ ಗೆ ಉತ್ತರ ನೀಡಿದ್ದ ನಟ ದರ್ಶನ್ ಅವರು ನನಗೆ ಗನ್ ಬೇಕೆ ಬೇಕು ಎಂದು ಉತ್ತರಿಸಿದ್ದರು. ನಾನೊಬ್ಬ ಸೆಲೆಬ್ರಿಟಿ, ನಾನು ಹೋದ ಕಡೆ ಬಂದ ಕಡೆ ಸಾಕಷ್ಟು ಜನ ಸೇರ್ತಾರೆ‌ ಎಂದು ದರ್ಶನ್ ಕಾರಣ ಕೊಟ್ಟಿದ್ದರು.

ನನ್ನ ಆತ್ಮರಕ್ಷಣೆಗಾಗಿ ಗನ್ ಬೇಕು, ಗನ್ ಅವಶ್ಯಕತೆ ಇದೆ ಅಂತ ಅವರು ಉತ್ತರ ಕೊಟ್ಟಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದ್ದ ಪೊಲೀಸರು ದರ್ಶನ್ ಕೊಲೆ ಕೇಸಲ್ಲಿ ಆರೋಪಿಯಾಗಿರೋ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಅಮಾನತಿನಲ್ಲಿ ಇಡಲು ನಿರ್ಧಾರ ಮಾಡಲಾಗಿದೆ. ಕೊಲೆ ಕೇಸ್ ಮುಗಿದು ಆರೋಪ‌ ಮುಕ್ತವಾಗವವರೆಗೂ ಗನ್ ಲೈಸೆನ್ಸ್ ತಾತ್ಕಾಲಿಕ ಅಮಾನತು ಮಾಡಲಾಗಿದೆ. ನಗರ ಪೊಲೀಸ್ ಇಲಾಖೆ ಆಡಳಿತ ವಿಭಾಗ‌ ಡಿಸಿಪಿಯಿಂದ ಆರ್ ಆರ್ ನಗರ ಪೊಲೀಸರಿಗೆ ಸೂಚನೆ ನೀಡಲಾಗಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow