ನಟಿ ಮೃಣಾಲ್ ಠಾಕೂರ್ ಜೊತೆ ಸದ್ದಿಲ್ಲದೇ ಧನುಷ್ ಡೇಟಿಂಗ್?

ನಟ ಧನುಷ್ ಹಾಗೂ ಅವರ ಮಾಜಿ ಪತ್ನಿ ಐಶ್ವರ್ಯಾ ರಜನಿಕಾಂತ್ ವಿಚ್ಛೇದನ ಪಡೆದು ಬೇರೆ ಬೇರೆ ಜೀವನ ನಡೆಸುತ್ತಿರುವ ಸಂದರ್ಭದಲ್ಲಿ, ಧನುಷ್ ಹಾಗೂ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ಸುದ್ದಿ ಸಿನಿಮಾ ವಲಯದಲ್ಲಿ ಹರಿದಾಡುತ್ತಿದೆ.
ಇತ್ತೀಚೆಗೆ ಜುಲೈ 3ರಂದು ಹಾಗೂ ಆಗಸ್ಟ್ 1ರಂದು ನಡೆದ ಮೃಣಾಲ್ ಠಾಕೂರ್ ಅವರ ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಧನುಷ್ ಪಾಲ್ಗೊಂಡಿದ್ದು, ಇಬ್ಬರೂ ಒಟ್ಟಿಗೆ ಸೀನ್ ಆಗಿರುವ ಫೋಟೋಗಳು ಹಾಗೂ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಧನುಷ್ ಅವರು ಪಾರ್ಟಿಯ ವೇಳೆ ಮೃಣಾಲ್ ಅವರ ಕೈ ಹಿಡಿದು ಮಾತನಾಡುತ್ತಿರುವ ದೃಶ್ಯವೂ ಇನ್ನುಷ್ಟು ಊಹೆಗಳಿಗೆ ಕಾರಣವಾಗಿದೆ.
ಇವರಿಬ್ಬರ ಮಧ್ಯೆ ಪ್ರೇಮ ಸಂಬಂಧವಿದೆ ಎಂಬ ಸುದ್ದಿ ಕುರಿತು ಯಾವತ್ತೂ ಧನುಷ್ ಅಥವಾ ಮೃಣಾಲ್ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ, ಕಾರ್ಯಕ್ರಮಗಳಲ್ಲಿ ಇವರ ಒಟ್ಟಾಗಿ ಕಾಣಿಸಿಕೊಂಡುಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






