ನಮ್ಮಪ್ಪ ಸಿಎಂ ಆಗಿದ್ರೆ ರಾಜ್ಯಕ್ಕೆ ಒಳ್ಳೇದಾಗುತ್ತೆ: ಯತೀಂದ್ರ ಸಿದ್ದರಾಮಯ್ಯ
ಮೈಸೂರು: “ಸಿದ್ದರಾಮಯ್ಯ ಅವರು 5 ವರ್ಷ ಮುಖ್ಯಮಂತ್ರಿಯಾಗಿಯೇ ಇರಬೇಕು, ರಾಜ್ಯಕ್ಕೆ ಅದು ಒಳ್ಳೆಯದು” ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ನಡೆದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನವೆಂಬರ್ ಕ್ರಾಂತಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನನ್ನ ತಂದೆಯವರು ನೀಡಿದ ಮಾಹಿತಿಯ ಪ್ರಕಾರ, ಹೈಕಮಾಂಡ್ ಅಥವಾ ಬೇರೆ ನಾಯಕರು ನವೆಂಬರ್ ನಂತರ ಅಧಿಕಾರ ಬಿಡಿ ಎಂದು ಹೇಳಿಲ್ಲ,” ಎಂದರು.
“ಯಾವ ಕ್ರಾಂತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ರಾಜಕೀಯದಲ್ಲಿ ಏನೂ ಸಾಧ್ಯ. ಆದರೆ ಇಂದಿನ ಪರಿಸ್ಥಿತಿಯನ್ನು ನೋಡಿದರೆ, ನಮ್ಮಪ್ಪ 5 ವರ್ಷ ಸಿಎಂ ಆಗಿ ಇರುತ್ತಾರೆ ಎನ್ನುವ ವಿಶ್ವಾಸ ನನಗೆ ಇದೆ,” ಎಂದರು ಯತೀಂದ್ರ.
“ಸಿದ್ದರಾಮಯ್ಯ ಅವರಿಗೆ ಶಾಸಕರ ಸಂಪೂರ್ಣ ಬೆಂಬಲ ಇದೆ. ಬೆಂಬಲ ಇಲ್ಲ ಅಂದಿದ್ದರೆ ಶಾಸಕರು ಸುಮ್ಮನೆ ಕುಳಿತಿರಲಿಲ್ಲ, ಹೈಕಮಾಂಡ್‌ಗೆ ದೂರು ನೀಡುತ್ತಿದ್ದರು,” ಎಂದು ಯತೀಂದ್ರ ಸ್ಪಷ್ಟಪಡಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?