ನಾಗಮಂಗಲ ಕೇಸ್ ಭಯದಿಂದ ಜನರು ಊರು ಬಿಟ್ಟಿದ್ದಾರೆ: ಬಿ ವೈ ವಿಜಯೇಂದ್ರ

ಮಂಡ್ಯ: ನಾಗಮಂಗಲ ಕೇಸ್ ಭಯದಿಂದ ಜನರು ಊರು ಬಿಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ತಿಂಗಳಿನಿಂದ ರಾಜ್ಯದಲ್ಲಿ ಒಂದಾದ ಮೇಲೆ ಒಂದು ಘಟನೆ ನಡೆಯುತ್ತಿದೆ. ನಾಗಮಂಗಲ ಕೇಸ್ ಭಯದಿಂದ ಜನರು ಊರು ಬಿಟ್ಟಿದ್ದಾರೆ. ನಿರಪರಾಧಿಗಳ ಮೇಲೆ ಕೇಸ್ ಹಾಕಲಾಗಿದೆ.
ಕೃತ್ಯ ಮಾಡಿರೋರ ಮೇಲೆ ಕೇಸ್ ಹಾಕಿಲ್ಲ. ಇದರಲ್ಲಿ ಪೊಲೀಸರ ವೈಫಲ್ಯ ಇದೆ. ಸರ್ಕಾರದ ವೈಫಲ್ಯವೂ ಇದೆ. ಇಂತಹ ಕೇಸ್ ಬಂದಾಗ ದರ್ಶನ್ ಪ್ರಕರಣ ತಂದು ಬಿಡುತ್ತಿದ್ದರು. ಈಗ ಮುನಿರತ್ನ ಹಿಡಿದುಕೊಂಡು ಕೂತಿದ್ದಾರೆ. ಸಿಎಂ ಪರಿಹಾರ ಕೊಡೋದಾಗಿ ಹೇಳಿದ್ದಾರೆ. ಈ ಬಗ್ಗೆಯೂ ವರದಿಯಲ್ಲಿ ಉಲ್ಲೇಖ ಮಾಡಿದ್ದೇವೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗಮಂಗಲದಲ್ಲಿ ಇತ್ತೀಚೆಗೆ ಕೋಮುಗಲಭೆ ನಡೆದಿತ್ತು. ಹಿಂದೂ ಯುವಕರು ಗಣೇಶ ವಿಸರ್ಜನೆ ಮಾಡುವ ಸಮಯದಲ್ಲಿ ಏಕಾಏಕಿ ಮೆರವಣಿಗೆ ಮೇಲೆ ಒಂದು ಕೋಮಿನ ಜನರು ದಾಳಿ ಮಾಡಿದ್ದರು. ಅವರೆಲ್ಲ ದೇಶದ್ರೋಹಿಗಳು. ಕತ್ತಿ, ತಲವಾರ್, ಪೆಟ್ರೋಲ್ ಬಾಂಬ್ ಎಸೆದಿದ್ದರು. ಹಿಂದೂಗಳ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದರು. ಇವೆಲ್ಲ ಪೊಲೀಸರ ಕಣ್ಣ ಮುಂದೆಯೇ ನಡೆದಿದೆ.
ಘಟನೆಯಾದ ಮರು ದಿನ ನಾನು, ವಿಪಕ್ಷ ನಾಯಕರು ಭೇಟಿ ನೀಡಿದ್ದೇವೆ. ನಾವು ಎಲ್ಲರನ್ನು ಮಾತಾಡಿಸಿದ್ದೆವು. ಬಳಿಕ ಸತ್ಯಶೋಧನಾ ಸಮಿತಿಯನ್ನು ಅಶ್ವಥ್ ನಾರಾಯಣ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದೇವೆ. ಸಮಿತಿ ಭೇಟಿ ಮಾಡಿ ಸತ್ಯಾಸತ್ಯತೆ ಬಗ್ಗೆ ವರದಿ ಕೊಟ್ಟಿದ್ದಾರೆ. ಇದು ವ್ಯವಸ್ಥಿತವಾದ ಪಿತೂರಿ. ಹೇಗೆ ಘಟನೆ ಆಯ್ತು ಅಂತಾ ವರದಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






