ನಾಗರಿಕ ವಿಮಾನಯಾನದಲ್ಲಿದೆ ಬಂಪರ್ ಉದ್ಯೋಗ! ಇಂದೇ ಅರ್ಜಿ ಸಲ್ಲಿಸಿ

ಅಕ್ಟೋಬರ್ 30, 2024 - 08:00
 0  12
ನಾಗರಿಕ ವಿಮಾನಯಾನದಲ್ಲಿದೆ ಬಂಪರ್ ಉದ್ಯೋಗ! ಇಂದೇ ಅರ್ಜಿ ಸಲ್ಲಿಸಿ

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನಾಗರಿಕ ವಿಮಾನಯಾನ ಸಚಿವಾಲಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

ಎಲ್ಲ ಹುದ್ದೆಗಳು ಕಾಂಟ್ರಾಕ್ಟ್ ಬೇಸ್ ಆಗಿದ್ದು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಡಿಜಿಸಿಎ ವೆಬ್​ಸೈಟ್ ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಆನ್​​ಲೈನ್ ಮೂಲಕ ಅಪ್ಲೇ ಮಾಡಿದ ಮೇಲೆ ಅದರ ಒಂದು ಪ್ರತಿಯನ್ನು ಅಭ್ಯರ್ಥಿಗಳು ದೆಹಲಿಗೆ ಕಳುಹಿಸಿಕೊಡಬೇಕು. ತಿಂಗಳ ಸಂಬಳ ಲಕ್ಷ.. ಲಕ್ಷ ರೂಪಾಯಿಗಳಲ್ಲಿ ಇದೆ. ಸಂದರ್ಶನವು ನಾಗರಿಕ ವಿಮಾನಯಾನ ಸಚಿವಾಲಯದ ನೇಮಕಾತಿ 2024ರ ಆಯ್ಕೆ ಪ್ರಕ್ರಿಯೆಯ ಭಾಗವಾಗಿರುತ್ತದೆ.

ಹುದ್ದೆಗಳ ಹೆಸರು, ಎಷ್ಟು ಉದ್ಯೋಗಗಳು?

ಕನ್ಸಲ್ಟೆಂಟ್ (Consultant) ( ವಿಮಾನಯಾನ ಕಾರ್ಯಾಚರಣೆಯ ಹಿರಿಯ ಇನ್​ಸ್ಪೆಕ್ಟರ್ (ವಿಮಾನ))= 2 ಹುದ್ದೆಗಳು
ಕನ್ಸಲ್ಟೆಂಟ್ (ಫ್ಲೈಟ್ ಆಪರೇಶನ್ ಇನ್​ಸ್ಪೆಕ್ಟರ್ (ವಿಮಾನ))= 10
ಕನ್ಸಲ್ಟೆಂಟ್ (ವಿಮಾನಯಾನ ಕಾರ್ಯಾಚರಣೆಯ ಹಿರಿಯ ಇನ್​ಸ್ಪೆಕ್ಟರ್ (ಹೆಲಿಕಾಪ್ಟರ್)= 01
ಕನ್ಸಲ್ಟೆಂಟ್ (ವಿಮಾನಯಾನ ಕಾರ್ಯಾಚರಣೆಯ ಇನ್​ಸ್ಪೆಕ್ಟರ್ (ಹೆಲಿಕಾಪ್ಟರ್)= 05

ಒಟ್ಟು ಹುದ್ದೆಗಳು– 18

ವಯಸ್ಸಿನ ಮಿತಿ- 65 ವರ್ಷದ ಒಳಗಿನವರಿಗೆ ಅವಕಾಶ

ವಿದ್ಯಾರ್ಹತೆ- 10ನೇ ತರಗತಿ ಅಂಕಪಟ್ಟಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತವನ್ನು ಅಭ್ಯಾಸ ಮಾಡಿರಬೇಕು. ಇದರ ಜೊತೆಗೆ ಸಂಸ್ಥೆ ಕೇಳಿದ ಲೈಸೆನ್ಸ್ ಸೇರಿ​ ಇತರೆ ನಿಖರ ದಾಖಲಾತಿಗಳು ಅಭ್ಯರ್ಥಿಗಳ ಅರ್ಜಿ ಜೊತೆ ಸಲ್ಲಿಕೆ ಮಾಡಬೇಕು. ಇದಕ್ಕಾಗಿ ಇಲಾಖೆಯ ವೆಬ್​ಸೈಟ್​ ಅನ್ನು ವೀಕ್ಷಿಸಬೇಕು.

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳ ಹೆಸರು ಶಾರ್ಟ್ ಲಿಸ್ಟ್
ಸಂದರ್ಶನ
ದಾಖಲಾತಿ ಪರಿಶೀಲನೆ
ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- 28 ಅಕ್ಟೋಬರ್ 2024
ಹಾರ್ಡ್​ಕಾಪಿ ಕಳುಹಿಸುವ ದಿನಾಂಕ- 04 ನವೆಂಬರ್ 2024
ಅರ್ಜಿ ಸಲ್ಲಿಸಿದ ಮೇಲೆ ಹಾರ್ಡ್​ ಕಾಪಿಯಲ್ಲಿ ಸೆಲ್ಫ್ ಅಟೆಸ್ಟೆಡ್ ಮಾಡಿ ದೆಹಲಿಗೆ ಕಳುಹಿಸಬೇಕು

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow