ನಿರುದ್ಯೋಗಿಗಳ ಗಮನಕ್ಕೆ: ಬೆಂಗಳೂರಿನಲ್ಲಿ 'ಬೃಹತ್ ಉದ್ಯೋಗ ಮೇಳ'! ಯಾವಾಗ? ಇಲ್ಲಿ ತಿಳಿಯಿರಿ!

ವಿದ್ಯಾವಂತ ಮತ್ತು ಪ್ರತಿಭಾವಂತ ಉದ್ಯಾಗಾಕಾಂಕ್ಷಿಗಳಿಗೆ, ಕೆಲಸ ಹುಡುಕಿ ಹುಡುಕಿ ಸುಸ್ತಾದವರಿಗೆಂದೇ 'ಬೆಂಗಳೂರು ಬೃಹತ್ ಉದ್ಯೋಗ ಮೇಳ-2025' ಆಯೋಜಿಸಲಾಗಿದೆ.
ಇದೇ ಫೆಬ್ರವರಿ 15ರಿಂದ ಬೆಂಗಳೂರಿನ ಬೆನ್ಸೆನ್ ಟೌನ್ ಬಳಿ 'ಮೆಗಾ ಉದ್ಯೋಗ ಮೇಳ' ಆಯೋಜನೆ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಯುವ ಉದ್ಯೋಗಾಕಾಂಕ್ಷಿಗಳ ಕನಸು ನನಸುವ ಮಾಡುವ ಮಹಾ ಹಂಬಲದಿಂದ ಈ ಉದ್ಯೋಗ ಮೇಳೆ ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರೀಯ ಕೌಶಲ್ಯಾಭಿವೃದ್ಧೀ ನಿಗಮ, ಕರ್ನಾಟಕ ರಾಜ್ಯ ಉದ್ಯೋಗ ಮತ್ತು ತರಬೇತಿ ಇಲಾಖೆ, ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ, ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಸಹಕಾರದಲ್ಲಿ ಮೆಗಾ ಉದ್ಯೋಗ ಮೇಳ ನಡೆಯುತ್ತಿದೆ. ಲಕ್ಷಾಂತರ ಯುವಕ ಯುವತಿಯರು ಆಗಮಿಸುವ ಸಾಧ್ಯತೆ ಇದೆ. ಕೂಡಲೇ ನೋಂದಣಿ ಮಾಡಿಕೊಳ್ಳಿ.
ಪಾಲ್ಗೊಳ್ಳುವವರು ಉದ್ಯೋಗಾಕಾಂಕ್ಷಿಗಳಿಗೆ ಸಂದರ್ಶನ, ಇಂಟರ್ನ್‌ಶಿಪ್, ಅಪ್ರೆಂಟಿಸ್ ಕೊಡುಗೆಗಳು, ಉದ್ಯೋಗ ಸಲಹೆ ಸೂಚನೆಗಳು ಈ ಮೆಗಾ ಮೇಳದಲ್ಲಿ ಪಡೆಯಲು ಸಾಕಷ್ಟು ಅವಕಾಶಗಳು ಇವೆ. ಯಾವುದೇ ಜಾತಿ, ಸಮುದಾಯ, ಧರ್ಮದವರಾದರೂ ನೀವು ಪಾಲ್ಗೊಳ್ಳಬಹುದು. ಉದ್ಯೋಗ ಮಾಡಬಯಸುವ, ಆಸಕ್ತ 18ರಿಂದ 35 ವರ್ಷ ವಯಸ್ಸಿನ ಅಭ್ಯರ್ಥಿಗಳು ಫೆಬ್ರವರಿ 15ರಂದು ನಡೆಯಲಿರುವ ಬೃಹತ್ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು.
ಮೇಳದಲ್ಲಿ ಸುಮಾರು 200 ಕ್ಕೂ ಹೆಚ್ಚು ಕಾರ್ಪೋರೇಟ್ ಸಂಸ್ಥೆಗಳು, ಸಣ್ಣ ವ್ಯಾಪಾರ, ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳ ಸಂಸ್ಥೆಗಳು ಮೇಳದಲ್ಲಿರಲಿವೆ. ಸ್ವಂತ ಉದ್ಯೋಗ ಪ್ರಾರಂಭಿಸುವವರಿಗೂ ತಿಳುವಳಿಕೆ ಸಿಗಲಿದೆ. ವೃತ್ತಿಪರ ರಂಗದಲ್ಲಿ ಉದ್ಯೋಗ ಮಾಡಲು ಇಚ್ಛಿಸುವವರು, ಉತ್ತಮ ಕಂಪನಿಯಲ್ಲಿ ಕೆಲಸ ಅರಸುವವರಿಗೆ ಇದೊಂದು ಅತ್ಯುತ್ತಮ ಅವಕಾಶ ಎನ್ನಬಹುದು.
ಒಂದು ದಿನದ ಮೆಗಾ ಉದ್ಯೋಗ ಮೇಳ ಇದಾಗಿದ್ದು, ಅಂದು ಶನಿವಾರ ಬೆಳಗ್ಗೆ 10 ಗಂಟೆಗೆ ಮೇಳ ಆರಂಭವಾಗುತ್ತದೆ. ಸಂಜೆ 06ರವರೆಗೆ ಮೇಳ ನಡೆಯಲಿದೆ ಎಂದು 'ಪ್ರೆಸಿಡೆನ್ಸಿ ಫೌಂಡೇಶನ್' ಮಾಹಿತಿ ನೀಡಿದೆ. ಈ ಸಂಸ್ಥೆಯು ಉದ್ಯೋಗ ಅರಸುವವರಿಗೆ ಸರಿಯಾದ ವೇದಿಕೆ ಕಲ್ಪಿಸುವ, ಸ್ವಂತ ಜೀವನ, ಗೌರವಯುತ ಬದುಕು ನಡೆಸಲು ಇಚ್ಛಿಸುವ ಉದ್ಯೋಗಾಕಾಂಕ್ಷಿಗಳಿಗೆ ವೇದಿಕೆ ಕಲ್ಪಿಸಲು ಶ್ರಮಿಸುತ್ತಿರುವ ಫೌಂಡೇಶನ್ ಆಗಿದೆ.
ಮೇಳದಲ್ಲಿ ಆಸಕ್ತ ಎಸ್‌ಎಸ್‌ಎಲ್‌ಸಿ, ದ್ವಿತಿಯ ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರು ಪಾಲ್ಗೊಳ್ಳಬಹುದಾಗಿದೆ. ಹೊಸಬರಿಗೂ ಮತ್ತು ಈಗಾಗಲೇ ಒಂದು ಕಡೆ ಕೆಲಸ ಮಾಡಿ ಬಿಟ್ಟವರಿಗೂ ಇಲ್ಲಿ ಅವಕಾಶ ಇದೆ. ಫಾರ್ಮಲ್ಸ್ ಡ್ರೆಸ್‌ನಲ್ಲಿ ಮೇಳಕ್ಕೆ ಬರುವಾಗಿ ಕೈಲಿ 10 ರೆಸ್ಯೂಮ್‌ಗಳು ತರುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಗರದ 'ಖುದ್ದೂಸ್ ಸಾಹಿಬ್ಸ್ ಈದ್ಗಾ ಮೈದಾನ, ಮಿಲ್ಲರ್ಸ್ ರಸ್ತೆ, ಕಂಟೋನ್ಮೆಂಟ್ ರೈಲ್ವೆ ಕಾರ್ಟ್‌ರ್ಸ್, ಬೆನ್ಸನ್ ಟೌನ್, ಬೆಂಗಳೂರು- 560046 ಇಲ್ಲಿ ನಡೆಯಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






