ನೀವು ಪದೇ-ಪದೇ ಈ ರೀತಿ ಕಿರಿಕ್ ಮಾಡಿದ್ರೆ ಜಾಮೀನು ಕಷ್ಟ: ದರ್ಶನ್ ಗೆ ವಕೀಲರ ಎಚ್ಚರಿಕೆ!

ಸೆಪ್ಟೆಂಬರ್ 17, 2024 - 12:13
 0  22
ನೀವು ಪದೇ-ಪದೇ ಈ ರೀತಿ ಕಿರಿಕ್ ಮಾಡಿದ್ರೆ ಜಾಮೀನು ಕಷ್ಟ: ದರ್ಶನ್ ಗೆ ವಕೀಲರ ಎಚ್ಚರಿಕೆ!

ದರ್ಶನ್ ಬಳ್ಳಾರಿ ಜೈಲಿನಲ್ಲಿ ಒಂದಿಲ್ಲೊಂದು ಕಿರಿಕ್ ಮಾಡಿಕೊಳ್ಳುತ್ತಿದ್ದು, ಟಿವಿಗಾಗಿ ಜೈಲು ಹಾಗೂ ಜೈಲಾಧಿಕಾರಿಗಳ ಜೊತೆ ವಾಗ್ವಾದ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದ್ರೆ ಇದೆಲ್ಲದರ ಪರಿಣಾಮ ಏನಾಗಲಿದೆ ಅನ್ನೊದು ದರ್ಶನ್​ಗೆ ಅರಿವಿಲ್ಲ. ಹೀಗಾಗಿ ಈ ರೀತಿಯೆಲ್ಲ ಮಾಡಬೇಡಿ ಇದು ಕೊನೆಗೆ ನಿಮಗೆ ಮುಳುವಾಗುತ್ತದೆ ಎಂದು ದರ್ಶನ್ ಪರ ವಕೀಲರೇ ಹೇಳಬೇಕಾದ ಸ್ಥಿತಿ ಬಂದಿದೆ.

ದರ್ಶನ್ ಮಾಡಿಕೊಳ್ಳುವ ಒಂದೊಂದು ಕಿರಿಕ್ ಒಂದೊಂದು ಯಡವಟ್ಟು ಅವರ ಜಾಮೀನಿನ ಮೇಲೆ ತೀವ್ರ ಪರಿಣಾಮ ಬೀರಲಿವೆ. ಅದನ್ನು ಅರಿತಿರುವ ದರ್ಶನ್ ಪರ ವಕೀಲರು ಈಗ ದರ್ಶನ್​ಗೆ ನೀತಿ ಪಾಠ ಮಾಡಲು ಸಜ್ಜಾಗಿದ್ದಾರೆ. ಜೈಲಿನಲ್ಲಿ ಇಲ್ಲದ ಯಡವಟ್ಟುಗಳನ್ನ ಮಾಡಿಕೊಳ್ಳಬೇಡಿ. ಪದೇ ಪದೇ ಈ ರೀತಿಯಾಗಿ ಕಿರಿಕ್ ಮಾಡಿಕೊಂಡಲ್ಲಿ ಬೇಲ್​ಗೆ ಸಮಸ್ಯೆಯಾಗುವುದರ ಜೊತೆಗೆ ಕಾನೂನು ಹೋರಾಟಕ್ಕೂ ತೊಡಕು ಉಂಟಾಗುತ್ತದೆ ಎಂದು ಹೇಳಿ ಪತ್ರ ಬರೆದು ಎಚ್ಚರಿಸಿದ್ದಾರೆ.  ಬಳ್ಳಾರಿಯ ಜೈಲಿಗೆ ಬಂದ ಪತ್ರವನ್ನು ಜೈಲು ಸಿಬ್ಬಂದಿ ಈಗಾಗಲೇ ದರ್ಶನ್​ಗೆ ತಲುಪಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow