ಬೆಂಗಳೂರಿನಲ್ಲಿ ಭಾರೀ ಮಳೆ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ವಿಮ್ಮಿಂಗ್ ಮಾಡಿದ RCB ಆಟಗಾರ!

ಐಪಿಎಲ್ 2025ರ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಎಲ್ಲ ತಂಡಗಳು ಮತ್ತೆ ಅಖಾಡಕ್ಕೆ ಧುಮಕಲಿದ್ದು ಈಗಾಗಲೇ ಬಹುತೇಕ ಆಟಗಾರರು ತಮ್ಮ ತಮ್ಮ ತಂಡವನ್ನು ಸೇರಿಕೊಂಡಿದ್ದಾರೆ. ಪುನರಾರಂಭದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಸೆಣಸಾಟ ನಡೆಸಲಿವೆ. ಇದರ ಮಧ್ಯೆ ಚಿನ್ನಸ್ವಾಮಿ ಮೈದಾನದಲ್ಲಿ ಟಿಮ್ ಡೇವಿಡ್ ಈಜಾಡಿದ್ದಾರೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಸಂಜೆ 7:30 ಕ್ಕೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕಾಗಿ ಎರಡೂ ತಂಡಗಳು ಈಗಾಗಲೇ ಬೆಂಗಳೂರಿನಲ್ಲಿವೆ. ಏತನ್ಮಧ್ಯೆ, ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ನಿನ್ನೆ ಸಿಲಿಕಾನ್ ಸಿಟಿಯಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಈ ಮಳೆಯ ನಡುವೆಯೂ ಆರ್ಸಿಬಿಯ ಸ್ಫೋಟಕ ಬ್ಯಾಟ್ಸ್ಮನ್ ಟಿಮ್ ಡೇವಿಡ್ ಮೈದಾನದಲ್ಲಿ ಮೋಜು ಮಾಡುತ್ತಿರುವುದು ಕಂಡುಬಂದಿದೆ. ಇದರ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಭಾರೀ ಮಳೆಯಿಂದಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ನೀರಿನಿಂದ ತುಂಬಿತ್ತು. ಇದರಲ್ಲಿ ಟಿಮ್ ಡೇವಿಡ್ ಈಜುತ್ತಿರುವುದು ಕಂಡುಬಂದಿದೆ. ಮಳೆಯ ಮಧ್ಯೆ ಟಿಮ್ ಸಖತ್ ಎಂಜಾಯ್ ಮಾಡಿದರು. ಸ್ವಿಮ್ ಮಾಡಿ ಆರ್ಸಿಬಿ ಡ್ರೆಸ್ಸಿಂಗ್ ರೂಮ್ಗೆ ಬಂದಾಗ ತಂಡದ ಉಳಿದ ಆಟಗಾರರು ಅವರನ್ನು ಜೋರಾಗಿ ನಗುತ್ತಾ ಮತ್ತು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು. ಟಿಮ್ ಡೇವಿಡ್ ಅವರ ಈ ಮೋಜಿನ ವೀಡಿಯೊವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ.
ಐಪಿಎಲ್ 2025 ರಲ್ಲಿ ಟಿಮ್ ಡೇವಿಡ್ ಆರ್ಸಿಬಿಯ ಭಾಗವಾಗಿದ್ದು, ಇವರನ್ನು ಮೆಗಾ ಹರಾಜಿನಲ್ಲಿ 3 ಕೋಟಿ ರೂ. ಗೆ ಖರೀದಿಸಿತು. ಫಿನಿಶಿಂಗ್ ಜವಾಬ್ದಾರಿ ಹೊತ್ತಿರುವ ಇವರು ಪ್ರತಿ ಪಂದ್ಯದಲ್ಲೂ ತಂಡಕ್ಕೆ ನೆರವಾಗಿದ್ದಾರೆ. ಐಪಿಎಲ್ 2025 ರಲ್ಲಿ ಇಲ್ಲಿಯವರೆಗೆ ಟಿಮ್ ಡೇವಿಡ್, ಅರ್ಧಶತಕ ಸೇರಿದಂತೆ 193.75 ಸ್ಟ್ರೈಕ್ ರೇಟ್ನಲ್ಲಿ 186 ರನ್ ಗಳಿಸಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಅರ್ಧಶತಕ ಗಳಿಸಿದ ಟಿಮ್, ತಂಡಕ್ಕೆ ಅತ್ಯಂತ ಅಗತ್ಯವಿದ್ದ ಸಮಯದಲ್ಲಿ ನೆರವಾದರು.
ನಿಮ್ಮ ಪ್ರತಿಕ್ರಿಯೆ ಏನು?






