ಬೇರೊಂದು ಹುಡುಗಿ ಜೊತೆ ಚಹಲ್ ಡೇಟಿಂಗ್ ವದಂತಿ: ಪತಿ ಜೊತೆಗಿನ ಧನ್ಯಶ್ರೀ ಫೋಟೋ ರಿಸ್ಟೋರ್!

ಮಾರ್ಚ್ 12, 2025 - 10:04
 0  12
ಬೇರೊಂದು ಹುಡುಗಿ ಜೊತೆ ಚಹಲ್ ಡೇಟಿಂಗ್ ವದಂತಿ: ಪತಿ ಜೊತೆಗಿನ ಧನ್ಯಶ್ರೀ ಫೋಟೋ ರಿಸ್ಟೋರ್!

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ವೀಕ್ಷಣೆಗೆ ಬಂದಿದ್ದ ಚಹಲ್ ಅವರು ಬೇರೊಂದು ಹುಡುಗಿ ಜೊತೆ   ಇದ್ದ ಫೋಟೋ ವೈರಲ್ ಆಗುತ್ತಿದ್ದಂತೆ ಪತ್ನಿ ಧನ್ಯಶ್ರೀ ಅಲರ್ಟ್ ಆಗಿದ್ದಾರೆ. 

ಡಿವೋರ್ಸ್​ ವದಂತಿಗೆ ಕೊರಿಯೋಗ್ರಾಫರ್ ಧನಶ್ರೀ ವರ್ಮಾ ಬಿಗ್ ಟ್ವಿಸ್ಟ್ ನೀಡಿದ್ದಾರೆ. ಕ್ರಿಕೆಟಿಗ ಯುಜುವೆಂದ್ರ ಚಹಾಲ್ ಜೊತೆಗಿರುವ ಫೋಟೋ, ವಿಡಿಯೋಗಳನ್ನು ಇನ್​ಸ್ಟಾಗ್ರಾಮ್​​ನಲ್ಲಿ ರಿಸ್ಟೋರ್ ಮಾಡಿದ್ದಾರೆ. 

ಚಾಂಪಿಯನ್ಸ್​ ಟ್ರೋಫಿ ಫೈನಲ್​​ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿ ಆಗಿದ್ದವು. ಚಹಾಲ್ ಅವರು ಆರ್​​ಜೆ ಮಹ್ವಶ್  ಜೊತೆ ಈ ಪಂದ್ಯವನ್ನು ವೀಕ್ಷಣೆ ಮಾಡಿದ್ದರು. ಡಿವೋರ್ಸ್​ ವದಂತಿ ಹಿನ್ನೆಲೆಯಲ್ಲಿ ಚಹಾಲ್​, ಮತ್ತೊಬ್ಬ ಹುಡುಗಿ ಜೊತೆ ಪಂದ್ಯ ವೀಕ್ಷಣೆ ಮಾಡಿರೋ ದೃಶ್ಯ ವೈರಲ್ ಆಗಿತ್ತು. ಬೆನ್ನಲ್ಲೇ ಧನಶ್ರೀ ನಿಗೂಢ ಪೋಸ್ಟ್ ಮಾಡಿದ್ದರು. ಹೆಣ್ಣನ್ನು ದೂಷಿಸಿವುದು ಫ್ಯಾಷನ್ ಆಗಿಬಿಟ್ಟಿದೆ ಅಂತಾ ಇನ್​ಸ್ಟಾದಲ್ಲಿ ಬರೆದುಕೊಂಡಿದ್ದರು.

ಇದೀಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಎಲ್ಲಾ ಫೋಟೋ, ವಿಡಿಯೋಗಳನ್ನು ರಿಸ್ಟೋರ್ ಮಾಡಿದ್ದಾರೆ. ಫೋಟೋಸ್, ಔಟಿಂಗ್ ಹೋಗಿರೋ ದೃಶ್ಯ, ಬ್ರ್ಯಾಂಡ್ ಪ್ರಮೋಷನ್ ವಿಡಿಯೋ, ಫೋಟೋ, ವೆಡಿಂಗ್ ಹಾಗೂ ಚಹಾಲ್ ಜೊತೆಗಿನ ವಿಶೇಷ ಕ್ಷಣಗಳನ್ನು ಮತ್ತೆ ರಿಸ್ಟೋರ್ ಮಾಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow