ಮಂಡ್ಯದವರು ಛತ್ರಿಗಳು: DCM ಹೇಳಿಕೆಗೆ ಮಳವಳ್ಳಿ ಮಾಜಿ ಶಾಸಕ ಅನ್ನದಾನಿ ಸಿಡಿಮಿಡಿ!

ಬೆಂಗಳೂರು:- ಮಂಡ್ಯದವರು ಛತ್ರಿಗಳು ಎಂಬ DCM ಡಿಕೆ ಶಿವಕುಮಾರ್ ಹೇಳಿಕೆಗೆ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅನ್ನದಾನಿ ಆಕ್ರೋಶ ಹೊರ ಹಾಕಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಮಂಡ್ಯ ಜನರನ್ನು ಛತ್ರಿಗಳು ಎಂದು ಕರೆದಿರುವ ಡಿಸಿಎಂ ಡಿಕೆ ಶಿವಕುಮಾರ್ ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆದು, ಮಂಡ್ಯ ಜನರ ಕ್ಷಮೆ ಕೇಳಬೇಕು.
ಮಂಡ್ಯ ಜನರು ಛತ್ರಿಗಳು ಎಂಬ ಡಿಕೆ ಶಿವಕುಮಾರ್ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಜನರ ವಿರೋಧ ಡಿಕೆಶಿ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಚೆಲುವರಾಯಸ್ವಾಮಿ ಡಿಕೆಶಿ ಪರವಾಗಿ ಮಾತನಾಡುತ್ತಾರೆ. ಶಾಸಕ ಉದಯ್ ಡಿಕೆಶಿ ಹೇಳಿಕೆಗೆ ಬೇರೆ ಅರ್ಥ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಛತ್ರಿಗಳು ಅನ್ನಬೇಕಿತ್ತು. ಮಂಡ್ಯದ ಜನರಿಗೆ ಛತ್ರಿ ಅನ್ನುತ್ತೀರಾ? ಸಿಎಂ ಆಗುತ್ತಾರೆ ಅಂತ ಜನ 6 ಸೀಟು ಕೊಟ್ಟರು. ಮಂಡ್ಯ ಜನರ ಬಗ್ಗೆ ನಿಮಗೆ ಗೊತ್ತಿಲ್ಲ. ಮಂಡ್ಯಕ್ಕೆ ದೊಡ್ಡ ಇತಿಹಾಸ ಇದೆ ಎಂದು ಡಿಕೆಶಿ ವಿರುದ್ದ ಕಿಡಿಕಾರಿದರು,
ಎಸ್‌ಎಂ ಕೃಷ್ಣ ಮಂಡ್ಯ ಜಿಲ್ಲೆಯವರು, ಸಿಎಂ ಆದವರು. ಎಸ್‌ಎಂ ಕೃಷ್ಣ ಶಿಷ್ಯರಾಗಿ ಕೃಷ್ಣ ಅವರ ಜಿಲ್ಲೆಯನ್ನು ಛತ್ರಿಗಳು ಅಂತೀರಲ್ಲ, ಇದನ್ನು ನಾವು ಖಂಡಿಸುತ್ತಿದ್ದೇವೆ. ಮಂಡ್ಯದ ಜನ ನಿಮಗೆ ಮುಂದಿನ ದಿನಗಳಲ್ಲಿ ಬುದ್ಧಿ ಕಲಿಸುತ್ತಾರೆ ಎಂದರು,
ನಿಮ್ಮ ಪ್ರತಿಕ್ರಿಯೆ ಏನು?






