ಮಠದಲ್ಲಿ ಮಹಿಳೆ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸ್ವಾಮೀಜಿ..! ಮುಂದೇನಾಯ್ತು ಗೊತ್ತಾ..?

ಜೂನ್ 23, 2025 - 12:00
 0  22
ಮಠದಲ್ಲಿ ಮಹಿಳೆ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸ್ವಾಮೀಜಿ..! ಮುಂದೇನಾಯ್ತು ಗೊತ್ತಾ..?

ಸ್ವಾಮೀಜಿಗಳು ಅಂದ್ರೆ ಜನರಿಗೆ ಎಲ್ಲಿಲ್ಲದ ಭಕ್ತಿ. ಸ್ವಾಮೀಜಿಗಳು ಅಂದ್ರೆ ಜನರು ಸಾಕ್ಷಾತ್ದೇವರಂತೆ ಭಾವಿಸ್ತಾರೆ. ಆದ್ರೆ ಇತ್ತೀಚೆಗಂತೂ ಖಾವಿ ಧರಿಸಿದ ಸ್ವಾಮೀಜಿಗಳು ಎಸಗ್ತಿರುವ ಅನಾಚಾರಕ್ಕೆ ಜನರಿಗೆ ಸ್ವಾಮೀಜಿಗಳ ಮೇಲಿನ ನಂಬಿಕೆಯೇ ಸತ್ತು ಹೋಗಿದೆ. ಚಿತ್ರದುರ್ಗದ ಮುರುಘಾ ಶ್ರೀ ಪ್ರಕರಣಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ.

ಅಷ್ಟರಲ್ಲಿಯೇ ಅಡವಿಸಿದ್ದರಾಮಶ್ರೀ ಸ್ವಾಮೀಜಿ ಮಹಿಳೆಯೊಂದಿಗೆ ಇರುವುದನ್ನು ಕಂಡ ಗ್ರಾಮಸ್ಥರು ಏಕಾಏಕಿ ಮಠಕ್ಕೆ ನುಗ್ಗಿ ಸ್ವಾಮೀಜಿಯನ್ನು ತರಾಟೆ ತೆಗೆದುಕೊಂಡರು. ಅಷ್ಟೇ ಅಲ್ಲದೆ ಹಲ್ಲೆ ಮಾಡಿದ್ದಾರೆ. ವೇಳೆ ಕೆಲ ಯುವಕರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಮಹಿಳೆಯ ಮಗಳ ಬಟ್ಟೆ ಹರಿದು ಎಳೆದಾಡಿದ್ದಾರೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾಗಲಕೋಟೆ ಮೂಲದ ಮಹಿಳೆ ಮತ್ತು ಮಗಳು ಮಠಕ್ಕೆ ಬಂದಿದ್ದು, ರಾತ್ರಿ ಮಠದಲ್ಲೇ ತಂಗಿದ್ದಾರೆ. ಮಹಿಳೆಯೊಂದಿಗೆ ಸ್ವಾಮೀಜಿ ಇದ್ದಾರೆಂದು ಯುವಕರು ಮಠಕ್ಕೆ ನುಗಿದ್ದು, ವೇಳೆ ಸ್ವಾಮೀಜಿ, ‌ಮಹಿಳೆ ಮತ್ತು ಬಾಲಕಿ ಒಂದೇ ರೂಮ್ನಲ್ಲಿರುವುದು ಕಂಡುಬಂದಿದೆ.

ಇದೇ ವೇಳೆ ಯುವಕರು ಸ್ವಾಮೀಜಿಯನ್ನು ತಳ್ಳಿ ಮಹಿಳೆ, ಅಪ್ರಾಪ್ತ ಮಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಬಾಲಕಿಯ ಬಟ್ಟೆ ಹರಿದು ಎಳೆದಾಡಿದ್ದಾರೆ. ರಕ್ಷಣೆಗೆ ನಿಂತ ಸ್ವಾಮೀಜಿಗೆ ಯುವಕರು ಕಪಾಳಮೋಕ್ಷ ಮಾಡಿದ್ದಾರೆ.

ಇನ್ನು ಸ್ಥಳಕ್ಕೆ ಭೇಟಿ ನೀಡಿದ ಮೂಡಲಗಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಮಹಿಳೆಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಇತ್ತ ಗ್ರಾಮಸ್ಥರು ರಾತ್ರಿಯೇ ಅಡವಿಸಿದ್ದರಾಮ ಸ್ವಾಮೀಜಿಯನ್ನ ಹೊರಹಾಕಿದ್ದಾರೆ. ಸದ್ಯ ಬೆಳಗಾವಿ ಜಿಲ್ಲೆಯ ಗೋಕಾಕ್ನಲ್ಲಿದ್ದಾರೆ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow