ಮಧುಮೇಹ ಕಂಟ್ರೋಲ್ ಮಾಡಲು ನಿಮ್ಮಲ್ಲೆ ಇದೆ ಔಷಧಿ! ಹೀಗೆ ಮಾಡಿ.. ಆಮೇಲೆ ನೋಡಿ ಚಮತ್ಕಾರ!

ಸೆಪ್ಟೆಂಬರ್ 3, 2025 - 07:00
 0  19
ಮಧುಮೇಹ ಕಂಟ್ರೋಲ್ ಮಾಡಲು ನಿಮ್ಮಲ್ಲೆ ಇದೆ ಔಷಧಿ! ಹೀಗೆ ಮಾಡಿ.. ಆಮೇಲೆ ನೋಡಿ ಚಮತ್ಕಾರ!

ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಈ ಆರೋಗ್ಯ ಇಲ್ಲದಿದ್ದರೆ ಮನುಷ್ಯನ ಬಳಿ ಎಷ್ಟೇ ಆಸ್ತಿ, ಅಂತಸ್ತಿದ್ದರೂ ಕೂಡ ಅದು ಶೂನ್ಯವಾಗುತ್ತೆ. ಆದರೆ ಇತ್ತೀಚಿನ ದಿನಮಾನದಲ್ಲಿ ಶೇಖಡಾ 100 ಕ್ಕೆ 80 ರಷ್ಟು ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕಾರಣ ಬದಲಾದ ಜೀವನ ಶೈಲಿ. ನಾವು ನಿತ್ಯ ಸೇವಿಸುವ ಆಹಾರದಲ್ಲಿ ಆಗಿರಬಹುದು, ಕೆಲಸದ ಒತ್ತಡವಾಗಿರಬಹುದು ಹಾಗೂ ಇನ್ನಿತರ ಕಾರಣಗಳಿಂದ ನಮ್ಮ ಆರೋಗ್ಯ ಹದಗೆಡುತ್ತಾ ಬರ್ತಿದೆ. 

ಅದರಲ್ಲಿ ಮೊದಲಿಗೆ ಹೇಳೋದಾದ್ರೆ, ಸಾಮಾನ್ಯವಾಗಿ ಇತ್ತೀಚಿನ ಪೀಳಿಗೆಯ ಜನರಲ್ಲಿ ಮಧುಮೇಹದ  ರೋಗ ಹೆಚ್ಚಾಗಿ ಕಂಡು ಬರ್ತಿದೆ. ಹಾಗಿದ್ರೆ ಇದನ್ನು ನಿಯಂತ್ರಿಸಲು ಏನ್ ಮಾಡ್ಬೇಕು!?, ಯಾವ ರೀತಿ ಆಹಾರ ಸೇವಿಸಿದ್ರೆ ಒಳ್ಳೆಯದು ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ... 

ಇತ್ತೀಚಿನ ದಿನಗಳಲ್ಲಿ ಮಧುಮೇಹದ  ಸಮಸ್ಯೆ  ಸಾಮಾನ್ಯವಾಗಿದೆ. ಮಧುಮೇಹದ ಸಂದರ್ಭದಲ್ಲಿ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇನ್ನೂ ಮಧುಮೇಹಿಗಳಿಗೆ ಅನ್ನ ತಿಂದರೆ ತೊಂದರೆಯಾಗುತ್ತದೆ ಎನ್ನುವ ಭಯ ಸಾಮಾನ್ಯವಾಗಿ ಕಾಡುತ್ತಿರುತ್ತದೆ.

ಆದರೆ ಸರಿಯಾದ ಕ್ರಮದಲ್ಲಿ ಅನ್ನವನ್ನು ತಯಾರಿಸಿ ಊಟ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎನ್ನಲಾಗುತ್ತದೆ. ಆದರೆ ಆ ಅನ್ನವನ್ನು ಹೇಗೆ ತಯಾರಿಸಬೇಕು, ಎಷ್ಟು ಹೊತ್ತು ಬೇಯಿಸಬೇಕು? ಕುಕ್ಕರ್ ನಲ್ಲಿ ಬೇಯಿಸಬೇಕೇ? ಬೇಯಿಸಬಾರದೇ? ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಮಧುಮೇಹಿ ರೋಗಿಗಳಿಗೆ ಕುಕ್ಕರ್ ನಲ್ಲಿ ಅನ್ನವನ್ನು ಬೇಯಿಸಬಾರದು.

ಅದಕ್ಕೆ ಬದಲಾಗಿ ನಮ್ಮ ಪೂರ್ವಿಕರು ಅನುಸರಿಸುತ್ತಿದ್ದ ಪಾರಂಪರಿಕ ವಿಧಾನದಿಂದ ತಯಾರಿಸುತ್ತಿದ್ದ ಅನ್ನ ಬಹಳ ಉತ್ತಮ. ಅನ್ನವನ್ನು ಮಾಡಲು ಉಪಯೋಗಿಸುವ ಅಕ್ಕಿಯನ್ನು ನೀರಿನಲ್ಲಿ 15-20 ನಿಮಿಷ ನೆನೆಯಲು ಇಡಬೇಕು. ಒಲೆಯ ಮೇಲೆ ಅನ್ನ ಮಾಡಲು ಬೇಕಾದ ನೀರನ್ನು ಕಾಯಲು ಇಡಬೇಕು. ಈ ನೀರಿನ ಪ್ರಮಾಣ ಅಕ್ಕಿಯ ಪ್ರಮಾಣದ 8 ರಷ್ಟು ಹೆಚ್ಚು ಇರಬೇಕು.

ನೀರು ಚೆನ್ನಾಗಿ ಕಾಯ್ದು ಕುದಿಯಲು ಪ್ರಾರಂಭಿಸಿದಾಗ, ನೆನೆಯಲು ಇಟ್ಟಿರುವ ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರನೆಲ್ಲಾ ಬಸಿದು, ಕುದಿಯುತ್ತಿರುವ ನೀರಿನಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಬೇಕು. ಖಾಯಿಲೆಯಿಂದ ದೂರವಿರಲು ಈ ʼಆಹಾರʼ ಸೇವಿಸಿ ಬೇಯುವಾಗ ಪಾತ್ರೆಯ ಬಾಯನ್ನು ಮುಚ್ಚಬೇಕು ಬಳಿಕ ಅಕ್ಕಿ ತಳಕಟ್ಟದ ಹಾಗೆ ಆಗಾಗ ಸೌಟಿನಿಂದ ತಿರುವುತ್ತಿರಬೇಕು.

ಅಕ್ಕಿ ಹದವಾಗಿ ಬೆಂದು ಮೆತ್ತಗಾದಾಗ ಅದರಲ್ಲಿರುವ ಗಂಜಿಯನ್ನು ಬಸಿದು ಪಾತ್ರೆಯ ಬಾಯಿಯನ್ನು ಮುಚ್ಚಿ ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಬೇಯಿಸಬೇಕು. ಇದರಿಂದ ಅನ್ನ ಚೆನ್ನಾಗಿ ಅರಳಿ, ಮುದ್ದೆಯಾಗದೆ, ಹುಡಿ ಹುಡಿಯಾಗಿ ಸಿದ್ಧವಾಗುತ್ತದೆ. ಈ ಅನ್ನವನ್ನು ಮಧುಮೇಹಿ ರೋಗಿಗಳು ತಮ್ಮ ಪ್ರಮುಖ ಆಹಾರವನ್ನಾಗಿ ಊಟ ಮಾಡಬಹುದು. ಈ ರೀತಿ ಪಾರಂಪರಿಕ ವಿಧಾನದಿಂದ ನಮ್ಮ ದೇಹದ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ತರಬಹುದಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow