ಮಹಿಳೆಯ ದೇಹವನ್ನು ಕತ್ತರಿಸಿ ಬಿಸಾಡಿದ್ದ ಕೇಸ್ʼಗೆ ಬಿಗ್ ಟ್ವಿಸ್ಟ್: ಅಳಿಯನಿಂದಲೇ ನಡೀತು ಅತ್ತೆ ಕೊಲೆ..!
ತುಮಕೂರು: ಕೊರಟಗೆರೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿ ದೇಹವನ್ನು ತುಂಡರಿಸಿದ ಪ್ರಕರಣಕ್ಕೆ ಬೆಚ್ಚಿಬೀಳಿಸುವಂತಹ ಟ್ವಿಸ್ಟ್ ಸಿಕ್ಕಿದೆದೆ. ಮೃತ ಲಕ್ಷ್ಮೀದೇವಮ್ಮಳ ಅಳಿಯನೇ ಈ ಭೀಕರ ಕೃತ್ಯ ನಡೆಸಿದ್ದಾನೆಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
ವೃತ್ತಿಯಲ್ಲಿ ದಂತ ವೈದ್ಯನಾಗಿರುವ ಡಾ. ರಾಮಚಂದ್ರ, ತನ್ನ ಸ್ನೇಹಿತರು ಸತೀಶ್ ಹಾಗೂ ಕಿರಣ ಜೊತೆ ಸೇರಿ ಕೊಲೆ ಮಾಡಿದ್ದಾನೆ. ಲಕ್ಷ್ಮೀದೇವಮ್ಮ ತನ್ನ ಮಗಳನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರಚೋದಿಸುತ್ತಿದ್ದಾಳೆ ಎಂಬ ಆರೋಪವನ್ನು ಸಹಿಸದ ಡಾ. ರಾಮಚಂದ್ರ, ಅತ್ತೆಯನ್ನೇ ಕೊಲೆ ಮಾಡಿದನು.
ಕೋಳಾಲದಲ್ಲಿರುವ ಸ್ನೇಹಿತ ಸತೀಶ್ನ ಫಾರ್ಮ್ ಹೌಸ್ನಲ್ಲಿ ಕೊಲೆ ಮಾಡಿ, ದೇಹವನ್ನು ತುಂಡರಿಸಿ ವಿವಿಧ ಕಡೆ ಎಸೆದಿದ್ದರು. ನಂತರ ಆರೋಪಿ ತಂಡ ಧರ್ಮಸ್ಥಳ ಯಾತ್ರೆಗೆ ತೆರಳಿತ್ತು. ಕೊಲೆ ಸಮಯದಲ್ಲಿ ಅಳಿಯ ಸ್ಥಳದಲ್ಲಿ ಇರದಿರುವುದು ಅನುಮಾನ ಹುಟ್ಟಿಸಿದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿ ಸತ್ಯ ಹೊರತಂದಿದ್ದಾರೆ.ಪ್ರಸ್ತುತ, ಕೊರಟಗೆರೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?