ಅದ್ದೂರಿ ಜರುಗಿದ ನಟಿ ಅರ್ಚನಾ-ಕ್ರಿಕೆಟಿಗ ಶರತ್ ಆರತಕ್ಷತೆ: ಯಾರೆಲ್ಲಾ ಭಾಗಿಯಾಗಿದ್ದರು ಗೊತ್ತಾ?

ಕನಕಪುರ ರೋಡ್ ಖಾಸಗಿ ರೆಸಾರ್ಟ್ ವೊಂದರಲ್ಲಿ ನಟಿ ಅರ್ಚನಾ ಹಾಗೂ ಕ್ರಿಕೆಟಿಗ ಶರತ್ ಅವರ ಕಲ್ಯಾಣೋತ್ಸವ ಅದ್ದೂರಿಯಾಗಿ ನಡೆದಿದೆ. ಈ ಮೂಲಕ ಎಂಟು ವರ್ಷದ ಪ್ರೀತಿಗೆ ಈ ಜೋಡಿ ಇಂದು ಮದುವೆ ಮುದ್ರೆ ಒತ್ತಿದೆ. ನಿನ್ನೆ ರಾತ್ರಿ ನಡೆದ ಅದ್ಧೂರಿ ಆರತಕ್ಷತೆಯಲ್ಲಿ ಕನ್ನಡ ಚಿತ್ರರಂಗದ ತಾರೆಯರು ಹಾಗೂ ಕ್ರಿಕೆಟರ್ ಗಳು ಈ ನವ ಜೋಡಿಗೆ ಶುಭ ಹಾರೈಸಿದ್ದಾರೆ.
ರಿಸೆಪ್ಷನ್‌ಗೆ ಸುದೀಪ್ ಪುತ್ರಿ ಸಾನ್ವಿ ಸುದೀಪ್, ನಟಿ ಹಿತಾ ದಂಪತಿ , ಸಾನ್ಯಾ ಅಯ್ಯರ್, ಸಪ್ತಮಿ ಗೌಡ, ಆಶಿಕಾ ರಂಗನಾಥ್, ಅಮೃತಾ ಅಯ್ಯಂಗರ್, ಯುವರಾಜ್ ಕುಮಾರ್ ಸೇರಿದಂತೆ ಅನೇಕ ನಟ, ನಟಿಯರು, ಭಾಗಿಯಾಗಿದ್ದಾರೆ. ಕ್ರಿಕೆಟರ್ ಗಳಾದ ದೇದವತ್ ಪಡಿಕಲ್, ಪ್ರಸಿದ್ಧ್ ಕೃಷ್ಣ ಸೇರಿದಂತೆ ಹಲವರು ಅರ್ಚನಾ ಶರತ್ ಆರತಕ್ಷತೆಯಲ್ಲಿ ಭಾಗಿಯಾಗಿ ನಟ ಜೋಡಿಗೆ ಶುಭ ಹಾರೈಸಿದ್ದಾರೆ.
ಶರತ್ ಅವರು 2018ರಲ್ಲಿ ಕೋಲ್ಕತ್ತಾದಲ್ಲಿ ಜಾರ್ಖಂಡ್ ವಿರುದ್ಧ ಕರ್ನಾಟಕ ಪರ ಟ್ವೆಂಟಿ20 ಪಂದ್ಯಕ್ಕೆ ಶರತ್ ಪಾದಾರ್ಪಣೆ ಮಾಡಿದರು. ಶರತ್ ಬಲಗೈ ಬ್ಯಾಟ್ಸ್‌ಮನ್ ಆಗಿದ್ದು, ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ.
ಇನ್ನೂ ಕನ್ನಡದ ನಟಿ ಅರ್ಚನಾ ಕೊಟ್ಟಿಗೆ ಈಗಾಗಲೇ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದಲ್ಲಿ ಚಿಕ್ಕ ಪಾತ್ರವನ್ನು ಮಾಡಿದರೂ ಸಹ ನಟಿ ಅರ್ಚನಾ ಕೊಟ್ಟಿಗೆ ಪ್ರೇಕ್ಷಕರ ಗಮನ ಸೆಳೆದಿದ್ದರು. ಇದೀಗ ಜೋಡಿಯ ರಿಸೆಪ್ಷನ್‌ನಲ್ಲಿ ಸ್ಯಾಂಡಲ್‌ವುಡ್ ತಾರೆಯರು ಬಂದು ವಿಶ್ ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






