ಅನುಷಾ ರೈ ಫ್ಯಾನ್ಸ್ ಗೆ ಗುಡ್ ನ್ಯೂಸ್: ನಟಿಯ ಕೈ ಹಿಡಿಯೋ ಹುಡುಗ ಯಾರು!?

ಡಿಸೆಂಬರ್ 4, 2024 - 16:10
 0  8
ಅನುಷಾ ರೈ ಫ್ಯಾನ್ಸ್ ಗೆ ಗುಡ್ ನ್ಯೂಸ್: ನಟಿಯ ಕೈ ಹಿಡಿಯೋ ಹುಡುಗ ಯಾರು!?

ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿ ಆಗಿದ್ದ ಅನುಷಾ ರೈ ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ಎಲ್ಲರ ಗಮನ ಸೆಳೆದಿದ್ದರು. ಅಲ್ಲದೇ ಧರ್ಮ ಕೀರ್ತಿ ಮತ್ತು ಅನುಷಾ ರೈ ಕ್ಯೂಟ್ ಕಪಲ್ ಆಗಿದ್ದರು. 

ಆದರೆ ಇವರಿಬ್ಬರು ಬಿಗ್ ಮನೆಯಿಂದ ಇಷ್ಟು ಬೇಗ ಹೊರ ನಡೆಯುತ್ತಾರೆ ಎಂದು ಯಾರು ಭಾವಿಸಿರಲಿಲ್ಲ. ಆದರೆ ಹೊರ ಬಂದ ಬಳಿಕ ಮದುವೆಯಾಗುವ ಹುಡುಗನ ಬಗ್ಗೆ ಅನುಷಾ ಮಾತನಾಡಿದ್ದಾರೆ 

ನಟಿ ಅನುಷಾ ರೈ 50 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದರು. ಈಗಾಗಲೇ ಅನುಷಾ ರೈ ಬಿಗ್ ಬಾಸ್ ಮನೆಯಿಂದ ಹೊರ ಬಂದು ಮೂರು ವಾರಗಳು ಕಳೆಯುತ್ತಿದ್ದು, ಅವರ ಹವಾ ಮಾತ್ರ ಕಮ್ಮಿ ಆಗಿಲ್ಲ. ದೊಡ್ಮನೆಯಿಂದ ಹೊರ ಬಂದ ಬಳಿಕ ನಟಿ ಅನುಷಾ ರೈ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದು, ಈ ವೇಳೆ ತಾವು ಮದುವೆಯಾಗುವ ಹುಡುಗನ ಗುಣಗಳ ಬಗ್ಗೆ ಹೇಳಿದ್ದಾರೆ.

ನನ್ನ ಮದುವೆಯಾಗುವ ಹುಡುಗ ಹೇಗೆ ಇರಬೇಕು ಅಂದರೆ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು. ನಮ್ಮ ಮಧ್ಯ ಹೊಂದಾಣಿಕೆ ಇರಬೇಕು. ನನಗೆ ನಾನು ಹೋಗುವ ಮನೆ ತುಂಬಾ ಶ್ರೀಮಂತರಾಗಿರಬೇಕು. ಎಲ್ಲವೂ ಅನುಕೂಲ ಇದ್ದು ಸೆಟೆಲ್‌ ಆಗಿರಬೇಕು ಎನ್ನುವುದೆಲ್ಲಾ ಇಲ್ಲ. ಆದರೆ ನನ್ನನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿರಬೇಕು.

ನನಗೆ ಎಲ್ಲಾದಕ್ಕೂ ಬೆಂಬಲವಾಗಿ ನಿಲ್ಲಬೇಕು. ನಾನು ಮಾಡುವ ಕೆಲಸಗಳಿಗೆ ನನ್ನ ಬೆನ್ನ ಹಿಂದೆ ನಿಂತು ನಿನ್ನ ಕೈಯಲ್ಲಿ ಆಗುತ್ತದೆ. ನೀನು ಮಾಡು ಎಂದು ಬೆಂಬಲ ಕೊಡಬೇಕು. ಜೊತೆಗೆ ನನ್ನ ಕುಟುಂಬವನ್ನು ತುಂಬಾ ಗೌರವದಿಂದ ನೋಡಬೇಕು. ನನ್ನನ್ನು ಕೂಡ ತುಂಬಾ ಗೌರವದಿಂದ ನೋಡಿಕೊಳ್ಳಬೇಕು. ಆ ರೀತಿ ಇರುವ ವ್ಯಕ್ತಿ ನನ್ನ ಜೀವನಕ್ಕೆ ಸಿಗಬೇಕು ಎಂದು ಅನುಷಾ ಹೇಳಿದರು.

ಬರೀ ದುಡ್ಡೇ ಜೀವನ ಅಲ್ಲ. ನಮ್ಮ ವ್ಯಕ್ತಿತ್ವಗಳ ನಡುವೆ ಒಂದು ಹೊಂದಾಣಿಕೆ ಇರುಬೇಕು. ನನ್ನ ಬಗ್ಗೆ ತಪ್ಪು ತಿಳಿಯದೇ ನನ್ನ ಕುಟುಂಬಕ್ಕೆ ಗೌರವ ಕೊಡುವ ವ್ಯಕ್ತಿ ನನ್ನ ಜೀವನಕ್ಕೆ ಬೇಕು. ಅವರು ಯಾರೇ ಆಗಿರಲಿ. ಇನ್ನು ಕೆಲವು ಸಂದರ್ಬದಲ್ಲಿ ನನ್ನನ್ನು ಕಾಪಾಡಿಕೊಳ್ಳಬೇಕು ಕೂಡ. ಆ ರೀತಿಯ ತಾಕತ್ತು ಕೂಡ ಇರಬೇಕು. ತುಂಬಾ ಸುಲಭವಾಗಿ ಬಿಟ್ಟುಕೊಡಬಾರದು.

ಅವರ ಹೆಂಡತಿಯನ್ನು ಕಾಪಾಡಿಕೊಳ್ಳುವ ಎಲ್ಲಾ ರೀತಿ ತಾಕತ್ತು ಆ ವ್ಯಕ್ತಿಗೆ ಇರಬೇಕು. ಯಾರು ಏನೇ ಅಂದರೂ ಅಲ್ಲಿ ನಂಬಂದೇ ನನ್ನ ಹತ್ತಿರ ಬಂದು ಸ್ಪಷ್ಟತೆ ತೆಗೆದುಕೊಳ್ಳಬೇಕು. ಒಟ್ಟಾರೆಯಾಗಿ ನನ್ನ ಜೊತೆ ಒಳ್ಳೆಯ ಹೊಂದಾಣಿಕೆ ಇರಬೇಕು ಎಂದು ನಟಿ ಅನುಷಾ ರೈ ಗ್ಯಾರಂಟಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ತಾವು ಮದುವೆಯಾಗುವ ಹುಡುಗನ ಗುಣ ಹೇಗಿರಬೇಕು ಎಂದು ವಿವರಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow