ಚಿನ್ನದ ಮೋಹ: ಗೋಲ್ಡ್ ಸರಕ್ಕಾಗಿ ನೆರೆ ಮನೆಯ ಸ್ನೇಹಿತೆಯನ್ನೇ ಕೊಂದ ಮಹಿಳೆ!

ಮಾರ್ಚ್ 13, 2025 - 21:00
 0  8
ಚಿನ್ನದ ಮೋಹ: ಗೋಲ್ಡ್ ಸರಕ್ಕಾಗಿ ನೆರೆ ಮನೆಯ ಸ್ನೇಹಿತೆಯನ್ನೇ ಕೊಂದ ಮಹಿಳೆ!

ಮೈಸೂರು:- ಮೈಸೂರಿನ ಕೆಸಿ.ಬಡಾವಣೆಯಲ್ಲಿ ನೆರೆಮನೆಯ ಸ್ನೇಹಿತೆಯನ್ನೇ ಮಹಿಳೆ ಕೊಲೆಗೈದ ಘಟನೆ ಜರುಗಿದೆ. ಚಿನ್ನದ ಸರಕ್ಕಾಗಿ ಈ ಕೃತ್ಯ ಎಸಗಿರುವ ಆರೋಪ ಕೇಳಿ ಬಂದಿದೆ. 

62 ವರ್ಷದ ಸುಲೋಚನಾ ಕೊಲೆಯಾದ ದುರ್ದೈವಿ. 42 ವರ್ಷದ ಶಕುಂತಲಾ ಕೊಲೆ ಮಾಡಿದ ಆರೋಪಿ. ಕೊಲೆಯಾದ ಸುಲೋಚನಾ ಪೊಲೀಸ್ ಇಲಾಖೆ ನಿವೃತ್ತ ನೌಕರ ಗಂಗಣ್ಣರ ಪತ್ನಿ ಎನ್ನಲಾಗಿದ್ದು, ಮಾ.5 ರಂದು ನಡೆದ ಘಟನೆ‌ ತಡವಾಗಿ ಬೆಳಕಿಗೆ ಬಂದಿದೆ. 

ಮಾ.5 ರಂದು ಮನೆಗೆ ಬಂದ ಸುಲೋಚನಾರನ್ನು ಉಸಿರುಗಟ್ಟಿಸಿ ಶಕುಂತಲಾ ಕೊಲೆ ಮಾಡಿ ಮೃತದೇಹದ ಮೇಲಿದ್ದ ಚಿನ್ನದ ಸರ ಕಳಚಿ ಕೊಂಡಿದ್ದಳು. ನಂತರ ಪ್ರಜ್ಞೆ ತಪ್ಪಿ ಬಿದ್ದುಹೋದರೆಂದು ಸುತ್ತಲ ಮನೆಯವರನ್ನು ಶಕುಂತಲಾ ನಂಬಿಸಿದ್ದಳು. ನಂತರ ಅನುಮಾನದೊಂದಿಗೆ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. 

ಶಕುಂತಲಾ ಕುಟುಂಬ ಅಡುಗೆ ಕೆಲಸ ಮಾಡಿಕೊಂಡಿತ್ತು. ಸಾಲದ ಸುಳಿಯಲ್ಲಿ ಸಿಲುಕಿತ್ತು. ತೀರಿಸಲು ಇಂತಹ ಕೃತ್ಯವೆಸಗಿದ್ದಾಳೆ. ಸುಲೋಚನಾ ಸರ ಕದ್ದು 1.5 ಲಕ್ಷಕ್ಕೆ ಶಕುಂತಲಾ ಗಿರವಿ ಇಟ್ಟಿದ್ದಳು. ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow