ಅಪ್ಪಿತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ! ಇಲ್ಲದಿದ್ದರೆ ಕಷ್ಟ ಕಟ್ಟಿಟ್ಟಬುತ್ತಿ
ಎಲ್ಲಾ ಧರ್ಮಗಳಲ್ಲಿ ದಾನವನ್ನು ಶ್ರೇಷ್ಠ ರೂಪದಲ್ಲಿ ಕಾಣಲಾಗುತ್ತೆ. ದಾನಕ್ಕೆ ವಿಶೇಷ ಮಹತ್ವವಿದೆ. ಸನಾತನ ಧರ್ಮದಲ್ಲಿ ನಾಲ್ಕು ಯುಗಗಳಾದ ಸತ್ಯಯುಗದಲ್ಲಿ ತಪಸ್ಸು, ತ್ರೇತಾದಲ್ಲಿ ಜ್ಞಾನ, ದ್ವಾಪರದಲ್ಲಿ ಯಾಗ ಮತ್ತು ಕಲಿಯುಗದಲ್ಲಿ ದಾನ ಮಾತ್ರ ವ್ಯಕ್ತಿಯ ಕಲ್ಯಾಣವನ್ನು ಮಾಡಬಲ್ಲದು. ಅದಕ್ಕಾಗಿಯೇ ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ದಾನ ಮಾಡುತ್ತಲೇ ಇರಬೇಕು. ಆದರೆ ದಾನಕ್ಕೂ ಕೆಲವು ನಿಯಮಗಳಿವೆ.
ದಾನವನ್ನು ಮಾಡುವವರು ಯಾವಾಗಲೂ ಭಕ್ತಿ ಮತ್ತು ವಿನಯದಿಂದ ಮಾಡಬೇಕು. ಅಲ್ಲದೆ, ದಾನವನ್ನು ಸಾಧ್ಯವಾದಷ್ಟು ರಹಸ್ಯವಾಗಿಡಬೇಕು. ರಹಸ್ಯವಾಗಿ ಮಾಡುವ ದಾನವನ್ನು ಅತ್ಯುತ್ತಮ ದಾನವೆಂದು ಪರಿಗಣಿಸಲಾಗಿದೆ.
ಹಿಂದೂ ಧರ್ಮದಲ್ಲಿ ದಾನವು ಒಂದು ಮೂಲಭೂತ ಧಾರ್ಮಿಕ ಕಾರ್ಯವಾಗಿದೆ. ಧರ್ಮಗ್ರಂಥಗಳ ಪ್ರಕಾರ, ದಾನ ಮಾಡೋದ್ರಿಂದ ಸಂಪತ್ತು ಹೆಚ್ಚಾಗುತ್ತದೆ. ಅದು ಸಂತೋಷವನ್ನು ತರುತ್ತದೆ. ಅದು ಮೋಕ್ಷಕ್ಕೆ ದಾರಿ ಮಾಡಿಕೊಡುತ್ತದೆ. ಆದರೂ ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ವಸ್ತುಗಳನ್ನು ತಪ್ಪಾಗಿ ದಾನ ಮಾಡೋದ್ರಿಂದ ಆರ್ಥಿಕ ನಷ್ಟ, ದುಃಖ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಜ್ಯೋತಿಷಿಗಳು ಹೇಳ್ತಾರೆ
ಎಣ್ಣೆ- ಉಪ್ಪು
ಉಪವಾಸ ಅಥವಾ ಹಬ್ಬಗಳ ನಂತರ ದಾನ ಮಾಡಬೇಕೆಂಬ ನಿಯಮವಿದೆ. ವಾಸ್ತು ಪ್ರಕಾರ, ಉಪವಾಸ ಮುಗಿದ ನಂತರ ಎಣ್ಣೆ ಅಥವಾ ಉಪ್ಪನ್ನು ದಾನ ಮಾಡಬಾರದು. ಇದರಿಂದ ನಿಮ್ಮ ದಾನದ ಜೊತೆಗೆ ಉಪವಾಸದ ಸಂಪೂರ್ಣ ಪುಣ್ಯವೂ ಕಳೆದು ಹೋಗುತ್ತದೆ. ಆರ್ಥಿಕ ನಷ್ಟ ಮತ್ತು ಅನಾರೋಗ್ಯದ ಭಯವು ನಿಮ್ಮನ್ನು ಕಾಡುತ್ತದೆ ಎಂದು ಹೇಳಲಾಗುತ್ತದೆ. ದಾನ ಮಾಡುವಾಗ ಮುನ್ನೆಚ್ಚರಿಕೆಗಳು ಕಡ್ಡಾಯ ಎಂದು ಶಾಸ್ತ್ರವು ಹೇಳುತ್ತದೆ. ಎಣ್ಣೆ ಮತ್ತು ಉಪ್ಪಿನ ಬದಲಿಗೆ ಇತರ ಆಹಾರ ಪದಾರ್ಥಗಳನ್ನು ಆರಿಸಿಕೊಳ್ಳಬೇಕು.
ಉಳಿದ ಆಹಾರ
ನಿಮ್ಮ ಮನೆಗೆ ಆಹಾರಕ್ಕಾಗಿ ಬರುವ ಭಿಕ್ಷುಕರಿಗೆ ಎಂದಿಗೂ ಉಳಿದ ಅಥವಾ ಹಾಳಾದ ಆಹಾರ ದಾನ ಮಾಡಬೇಡಿ. ಇದು ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತಡೆಯುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದರಿಂದ ಕುಟುಂಬದಲ್ಲಿ ಬಡತನ, ಅನಾರೋಗ್ಯ ಮತ್ತು ದುಃಖವನ್ನು ಉಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ಯಾರಿಗಾದರೂ ಆಹಾರ ದಾನ ಮಾಡಲು ನಿರ್ಧರಿಸಿದರೆ ತಾಜಾ ಮತ್ತು ಶುದ್ಧ ಆಹಾರವನ್ನು ಮಾತ್ರ ದಾನ ಮಾಡಬೇಕು.
ಪೊರಕೆ
ಪೊರಕೆಯನ್ನು ಯಾರಿಗೂ ದಾನ ಮಾಡಬಾರದು. ಇದನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪೊರಕೆಯನ್ನು ದಾನ ಮಾಡಿದರೆ ಮನೆಯ ಲಕ್ಷ್ಮಿಯೂ ಒಣಗಿ ಹೋಗುತ್ತದೆ ಎಂದು ನಂಬಲಾಗಿದೆ. ಇದು ಆರ್ಥಿಕ ನಷ್ಟ ಮತ್ತು ಸಂಪತ್ತಿನ ಕೊರತೆಗೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಪೊರಕೆಯನ್ನು ಯಾರಿಗೂ ಎಂದಿಗೂ ನೀಡಬಾರದು.
ಧಾರ್ಮಿಕ ಪಠ್ಯಗಳು ಅಥವಾ ಪುಸ್ತಕಗಳು
ನಿಮ್ಮ ಮನೆಗೆ ಬರುವವರಿಗೆ ಧಾರ್ಮಿಕ ಪುಸ್ತಕಗಳು ಅಥವಾ ಧರ್ಮಗ್ರಂಥಗಳನ್ನು ದಾನ ಮಾಡಬೇಡಿ. ಸ್ವೀಕರಿಸುವವರು ಅದನ್ನು ಪವಿತ್ರವಾಗಿ ಇಡದಿದ್ದರೆ ಅಥವಾ ಓದದಿದ್ದರೆ, ದಾನಿ ಪಾಪಕ್ಕೆ ಗುರಿಯಾಗುತ್ತಾನೆ. ಇದು ಜೀವನದಲ್ಲಿ ಅಡೆತಡೆಗಳು, ನಿರಾಶೆಗಳು ಮತ್ತು ಪ್ರಯತ್ನಗಳಲ್ಲಿ ವೈಫಲ್ಯಗಳಿಗೆ ಕಾರಣವಾಗುತ್ತದೆ. ಅಂತಹ ದಾನಗಳನ್ನು ತಪ್ಪಿಸಿ.
ಚೂಪಾದ ವಸ್ತುಗಳು:
ಉಕ್ಕಿನ ಪಾತ್ರೆಗಳು, ಚಾಕುಗಳು, ಕತ್ತರಿಗಳು ಅಥವಾ ಯಾವುದೇ ಆಯುಧಗಳಂತಹ ಹರಿತವಾದ ವಸ್ತುಗಳನ್ನು ದಾನ ಮಾಡಬೇಡಿ. ವಾಸ್ತು ಪ್ರಕಾರ, ಇದು ಕುಟುಂಬದ ಶಾಂತಿ ಮತ್ತು ಸಂತೋಷವನ್ನು ಹಾಳು ಮಾಡುತ್ತದೆ. ಕುಟುಂಬದ ಆದಾಯದ ಮೂಲಗಳು ನಿಂತುಹೋದಂತೆ ತರ್ಕಿಸುವುದು ಕಷ್ಟವಾಗುತ್ತದೆ. ಅಪ್ಪಿ, ತಪ್ಪಿಯೂ ಅಂತಹ ವಸ್ತುಗಳನ್ನು ದಾನ ಮಾಡಬೇಡಿ.
ನಿಮ್ಮ ಪ್ರತಿಕ್ರಿಯೆ ಏನು?