ಅಭಿಮಾನಿ ವರ್ತನೆಗೆ ರಾಂಗ್ ಆದ ರಾಗಿಣಿ: ಬಹಿರಂಗವಾಗಿ ಕಪಾಳಕ್ಕೆ ಬಾರಿಸಿದ್ದೇಕೆ ತುಪ್ಪದ ಬೆಡಗಿ!?

ಅಭಿಮಾನಿ ವರ್ತನೆಗೆ ಕಂಗಾಲಾದ ನಟಿ ರಾಗಿಣಿ ಅವರು ಕಪಾಳಕ್ಕೆ ಬಾರಿಸಿದ್ದಾರೆ. ಎಸ್, ರಾಗಿಣಿ ಅವರು, ಇಂಟರ್ವ್ಯೂ ಒಂದರಲ್ಲಿ ಭಾಗವಹಿಸಿದರು. ಆ ವೇಳೆ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು.
ಇದೇ ವೇಳೆ ಅಭಿಮಾನಿಯೊಬ್ಬ ಏಕಾಏಕಿ ನಟಿ ರಾಗಿಣಿ ದ್ವಿವೇದಿ ಅವರ ಕೈಯನ್ನು ಹಿಡಿದುಕೊಂಡಿದ್ದಾನೆ. ಇದಕ್ಕೆ ಸಿಟ್ಟಾಗಿದ್ದ ನಟಿ ರಾಗಿಣಿ ಆತನ ಕೆನ್ನೆಗೆ ಬಾರಿಸಿದ್ದಾರೆ. ಇದಾದ ಬಳಿಕ ಎಲ್ಲರ ಮುಂದೆ ಆ ಅಭಿಮಾನಿ ಮೇಲೆ ಸಿಟ್ಟಾಗಿ ಬೈದಿದ್ದಾರೆ. ನಂತರ ಅಲ್ಲಿನ ಸಿಬ್ಬಂದಿಗಳು ಆತನನ್ನು ಬೇರೆ ಕಡೆ ಕರೆದುಕೊಂಡು ಹೋಗಿದ್ದಾರೆ.
ನಟಿ ರಾಗಿಣಿ ದ್ವಿವೇದಿ ಅಭಿಮಾನಿಗೆ ಹೊಡೆದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






