ಪ್ರಭಾಸ್ ಜೊತೆ ನಟಿಸಲು ವಲ್ಲೆ ಎಂದ ಸ್ಟಾರ್ ನಟಿ: ಕಾರಣ ಏನು ಗೊತ್ತಾ?

ಪ್ರಭಾಸ್. ಈ ನೇಮ್ ನಲ್ಲಿರುವ ಗತ್ತು, ಅವರ ಸ್ಪಿರಿಟು, ಅವರ ಆ್ಯಕ್ಟಿಂಗ್ ನೆಕ್ಸ್ಟ್ ಲೆವೆಲ್ ಗುರು. ಈ ನಟನ ಜೊತೆ ಚಾನ್ಸ್ ಸಿಕ್ಕರೆ ಸಾಕಪ್ಪಾ ಎಂದು ಅದೆಷ್ಟೊ ಬಾಲಿವುಡ್ ಸ್ಟಾರ್ಸ್ ಕಾದು ಕುಳಿತಿದ್ದಾರೆ. ಆದರೆ ಇಲ್ಲೋರ್ವ ಸ್ಟಾರ್ ನಟಿ ಅವರ ಜೊತೆ ನಟಿಸಲು ವಲ್ಲೆ ಎಂದಿದ್ದಾರೆ.
ಪ್ರಭಾಸ್, ‘ಸ್ಪಿರಿಟ್’ ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿನಿಮಾಕ್ಕೆ ‘ಅರ್ಜುನ್ ರೆಡ್ಡಿ’, ‘ಅನಿಮಲ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶಕ. ಸಂದೀಪ್ ಅವರ ನಿರ್ದೇಶನ ಶೈಲಿಯ ಬಗ್ಗೆ ಟೀಕೆಗಳು ಈ ಹಿಂದೆ ವ್ಯಕ್ತವಾಗಿವೆ. ಸಂದೀಪ್, ತಮ್ಮ ಸಿನಿಮಾಗಳಲ್ಲಿ ಅನವಶ್ಯಕ ಹಿಂಸೆಯನ್ನು ಪ್ರದರ್ಶಿಸುತ್ತಾರೆ. ನಾಯಕಿಯರನ್ನು ನಾಯಕನ ಅಡಿಯಾಳಿನಂತೆ, ಸೇವಕಿಯಂತೆ ಚಿತ್ರಿಸುತ್ತಾರೆ ಎಂಬ ದೂರಿದೆ. ‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಪಾತ್ರವನ್ನು ಹೀಗೆಯೇ ತೋರಿಸಿದ್ದರು. ಅದೇ ಕಾರಣಕ್ಕೆ ಈಗ ಮೃಣಾಲ್ ಠಾಕೂರ್, ತಾವು ಸಂದೀಪ್ ರೆಡ್ಡಿ ವಂಗಾ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದಾರೆ.
ಸ್ಪಿರಿಟ್’ ಸಿನಿಮಾಕ್ಕೆ ಮೃಣಾಲ್ ಠಾಕೂರ್ ನಾಯಕಿಯಾಗಿ ಆಯ್ಕೆ ಆಗಿದ್ದರು. ಅನಿವಾರ್ಯ ಕಾರಣಕ್ಕೆ ತನ್ನ ಪೊಲೀಸ್ ಹುದ್ದೆ ಕಳೆದುಕೊಂಡಿರುವ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಕತೆಯನ್ನು ಹೊಂದಿದೆ ‘ಸ್ಪಿರಿಟ್’ ಸಿನಿಮಾ. ಪ್ರಭಾಸ್ ಮಡದಿಯ ಪಾತ್ರಕ್ಕೆ ಮೃಣಾಲ್ ಠಾಕೂರ್ ಅನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸಂದೀಪ್ ರೆಡ್ಡಿ ವಂಗಾ ವಿರುದ್ಧದ ಪ್ರತಿಭಟನಾರ್ಥವಾಗಿ ಮೃಣಾಲ್ ಠಾಕೂರ್ ಈಗ ಸಿನಿಮಾ ಕೈಬಿಟ್ಟಿದ್ದಾರೆ.
ಮೃಣಾಲ್ ಠಾಕೂರ್ ಮೂಲತಃ ಹಿಂದಿ ನಟಿಯಾಗಿದ್ದರೂ ತೆಲುಗು ಚಿತ್ರರಂಗದಲ್ಲಿ ಬಹಳ ಜನಪ್ರಿಯ. ಅವರು ನಟಿಸಿದ್ದ ‘ಸೀತಾ ರಾಮಂ’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಅದಾದ ಬಳಿಕ ಅವರು ನಟಿಸಿದ ‘ಹಾಯ್ ನಾನ್ನ’ ಸಿನಿಮಾ ಸಹ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು.
ನಿಮ್ಮ ಪ್ರತಿಕ್ರಿಯೆ ಏನು?






