ಮಾಸ್ ಅವತಾರದಲ್ಲಿ ಸುದೀಪ್: ಮ್ಯಾಕ್ಸ್ ಕಣ್ತುಂಬಿಕೊಳ್ಳುತ್ತಿರುವ ಅಭಿಮಾನಿಗಳು! ಎಲ್ಲೆಲ್ಲೂ ಕಿಚ್ಚನ ಹವಾ!

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ ಮನೆ ಮಾಡಿದೆ. ಒಂದೆಡೆ ಕ್ರಿಸ್ ಮಸ್ ಹಬ್ಬ. ಮತ್ತೊಂದೆಡೆ ಮ್ಯಾಕ್ಸ್ ಚಿತ್ರ ಇಂದು ಅದ್ದೂರಿಯಾಗಿ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ತೆರೆ ಮೇಲೆ ಕಿಚ್ಚನ ಕಣ್ತುಂಬಿಕೊಂಡು ಫ್ಯಾನ್ಸ್ ಖುಷ್ ಆಗಿದ್ದಾರೆ. ಇನ್ನು ಮ್ಯಾಕ್ಸ್ ಸಿನಿಮಾ ಟಿಕೆಟ್ ಕೂಡ ಭಾರೀ ಸಂಖ್ಯೆಯಲ್ಲಿ ಸೋಲ್ಡ್ ಆಗಿದೆ. ಈ ಕುರಿತ ವಿಡಿಯೋ ಶೇರ್ ಮಾಡಿದ ಕಿಚ್ಚ ಸುದೀಪ್, ಥಿಯೇಟರ್ನಲ್ಲಿ ಸಿಗೋಣ ಎಂಬ ವಿಡಿಯೋವನ್ನು ಶೇರ್ ಮಾಡಿದ್ದಾರೆ
ಮ್ಯಾಕ್ಸ್ ಚಿತ್ರದಲ್ಲಿ ಸುದೀಪ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ರಾತ್ರಿಯಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ತನು ಅವರು ನಿರ್ಮಾಣ ಮಾಡಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಮ್ಯಾಕ್ಸ್ ರಿಲೀಸ್ ಆಗಿದೆ. ಬಹುದಿನಗಳ ಬಳಿಕ ತೆರೆ ಮೇಲೆ ಕಾಣಿಸಿಕೊಂಡಿರೋ ಸುದೀಪ್ರ ಮಾಸ್ ಅವತಾರ ನೋಡೋದಕ್ಕೆ ಬೆಳ್ಳಂಬೆಳಿಗ್ಗೆ ಫ್ಯಾನ್ಸ್ ಮುಗಿಬಿದ್ದಿದ್ರು
ನಿಮ್ಮ ಪ್ರತಿಕ್ರಿಯೆ ಏನು?






