ಒಂದೇ ದಿನ ಇಬ್ಬರು ಯುವತಿಯರನ್ನು ಮದುವೆಯಾದ ಭೂಪ! ಪುಲ್ ಜಾಲಿ ಜಾಲಿ

ಅಕ್ಟೋಬರ್ 17, 2025 - 21:00
 0  23
ಒಂದೇ ದಿನ ಇಬ್ಬರು ಯುವತಿಯರನ್ನು ಮದುವೆಯಾದ ಭೂಪ! ಪುಲ್ ಜಾಲಿ ಜಾಲಿ

ಚಿತ್ರದುರ್ಗ: ಸಾಮಾನ್ಯವಾಗಿ ಮದುವೆ ಎಂದರೆ ಒಬ್ಬ ವರ ಹಾಗೂ ಒಬ್ಬ ವಧುವಿನ ಸಂಗಮ. ಆದರೆ ಚಿತ್ರದುರ್ಗದ ಎಂ.ಕೆ ಪ್ಯಾಲೆಸ್‌ನಲ್ಲಿ ನಡೆದ ವಿಚಿತ್ರ ಮದುವೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ. ವಸೀಮ್ ಶೇಖ್ ಎಂಬ ಯುವಕ ಒಂದೇ ದಿನ ಇಬ್ಬರು ಗೆಳತಿಯರಾದ ಶಿಫಾ ಮತ್ತು ಜನ್ನತ್ ಅವರನ್ನು ಏಕಕಾಲಕ್ಕೆ ಮದುವೆಯಾಗಿದ್ದಾನೆ.

ಗೋವಾದಲ್ಲಿ ಕೆಲಸ ಮಾಡುತ್ತಿದ್ದ ವಸೀಮ್ ಇಬ್ಬರಿಗೂ ಪರಿಚಯವಾಗಿ, ಇಬ್ಬರನ್ನೂ ಪ್ರೀತಿಸುತ್ತಿದ್ದ ವಿಚಾರವನ್ನು ಸತ್ಯವಾಗಿ ಹೇಳಿದ್ದಾನೆ. ನಂತರ ತ್ರಯರು ಪರಸ್ಪರ ಒಪ್ಪಿಕೊಂಡು, ಎರಡು ಕುಟುಂಬಗಳ ಅನುಮತಿಯೊಂದಿಗೆ ಮದುವೆಯಾಗಿದ್ದಾರೆ. ಗೋವಾದಲ್ಲಿ ನಿಕಾಹ್ ನಂತರ ಚಿತ್ರದುರ್ಗದಲ್ಲಿ ರಿಸೆಪ್ಷನ್ ಆಯೋಜನೆ ಮಾಡಲಾಗಿದ್ದು, ಈ ಅಪರೂಪದ ಮದುವೆ ಸದ್ದು ಮಾಡುತ್ತಿದೆ.

ಹೌದು ಚಿತ್ರದುರ್ಗದ ಹೊರಪೇಟೆಯಲ್ಲಿ ವಾಸಿಸುವ 28 ವರ್ಷದ ಯುವಕ ವಸೀಮ್ ಶೈಖ್ ಇಬ್ಬರು ಯುವತಿಯರೊಂದಿಗೆ ಚಿಕ್ಕ ವಯಸ್ಸಿನಿಂದ ಸ್ನೇಹಿತನಾಗಿದ್ದ. ಶಿಫಾ ಶೈಖ್ (25 ವರ್ಷ) ಮತ್ತು ಜನ್ನತ್ ಮಖಂದರ್ (24 ವರ್ಷ) ಇಬ್ಬರೂ ಚಿತ್ರದುರ್ಗದಲ್ಲೇ ವಾಸಿಸುತ್ತಾರೆ. ಈ ಮೂವರು ಒಂದೇ ಕಾಲೇಜ್‌ನಲ್ಲಿ ಓದಿದ್ದರು.

ಸ್ನೇಹವು ಕಾಲಾನಂತರವಾಗಿ ಪ್ರೀತಿಯಾಗಿ ಮಾರ್ಪಾಡಾಗಿತ್ತು. ಈ ಮೂವರು ತಮ್ಮ ಸಂಬಂಧವನ್ನು ಒಂದೇ ಮದುವೆಯಲ್ಲಿ ಸ್ಥಿರಪಡಿಸಲು ನಿರ್ಧರಿಸಿದರು. ಈ ನಿರ್ಧಾರವು ಅವರ ಕುಟುಂಬಗಳಿಗೂ ಸ್ವೀಕಾರಾರ್ಹವಾಗಿತ್ತು. ಮದುವೆಯ ದಿನ, ಒಂದೇ ಮಂಟಪದಲ್ಲಿ ಇಬ್ಬರು ಹೆಂಡಿರನ್ನು ವರಿಸಿ, ವಸೀಮ್ ಶೈಖ್ ಅವರು ಕೈ ಹಿಡಿದು ಸುತ್ತಿದರು. ಈ ದೃಶ್ಯವು ವೀಡಿಯೊಯಲ್ಲಿ ಸೆರೆಯಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ.

ಮದುವೆ ಎಂ ಕೆ ಪ್ಯಾಲೇಸ್‌ನಲ್ಲಿ ಸುಮಾರು 200 ಜನರ ಸಮೇತ ಕುಟುಂಬಸ್ಥರು ಭಾಗವಹಿಸಿದ್ದರು. ಇಬ್ಬರು ಹೆಂಡಿರೂ ಒಂದೇ ರೀತಿಯ ವಸ್ತ್ರ ಧರಿಸಿ, ವಸೀಮ್ ಅವರ ಅಕ್ಕಪಕ್ಕ ನಿಂತಿದ್ದರು. ಮದುವೆಗೆ ಬಂದಿದ್ದ ಜನರು ಈ ಮೂವರನ್ನು ಆಶೀರ್ವದಿಸಿದರು. ಮದುವೆಯ ನಂತರ, ಮೂವರು ಒಟ್ಟಾಗಿ ಫೋಟೋಗಳನ್ನು ತೆಗೆದುಕೊಂಡರು. ಈ ವೀಡಿಯೊಗಳು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ನಲ್ಲಿ ಹರಡಿ, ಲಕ್ಷಾಂತರ ವ್ಯೂಗಳನ್ನು ಪಡೆದಿವೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow