ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ: 15 ಅಸುರಕ್ಷಿತ ಕಾಂತಿವರ್ಧಕಗಳು ಮತ್ತು ಔಷಧಿಗಳು ನಿಷೇಧ

ಜೂನ್ 26, 2025 - 12:02
 0  22
ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ: 15 ಅಸುರಕ್ಷಿತ ಕಾಂತಿವರ್ಧಕಗಳು ಮತ್ತು ಔಷಧಿಗಳು ನಿಷೇಧ

ಬೆಂಗಳೂರು: ಈ ಹಿಂದೆ ಗೋಬಿ ಮಂಚೂರಿಗೆ ಬಳಸುವ ಬಣ್ಣ, ಬಟಾಣಿ ಹೀಗೆ ಹಲವಾರು ಪದಾರ್ಥಗಳನ್ನು ನಿಷೇಧ ಮಾಡಿತ್ತು. ಇದೀಗ ಆಹಾರ ಪದಾರ್ಥಗಳನ್ನು ಆರೋಗ್ಯ ಇಲಾಖೆ ಸುರಕ್ಷಿತ ಮಟ್ಟದಲ್ಲಿ ಟೆಸ್ಟಿಂಗ್​​​ಗೆ ಒಳಪಡಿಸಲಾಗುತ್ತಿದೆ. ಅದರಂತೆ ಪ್ಯಾರಾಸಿಟಮೋಲ್ ಸೇರಿದಂತೆ 15 ಅಸುರಕ್ಷಿತ ಕಾಂತಿವರ್ಧಕಗಳು ಮತ್ತು ಔಷಧಿಗಳ ಬಳಕೆಗೆ ನಿಷೇಧ ಹೇರಿದೆ.

ಈ ಪಟ್ಟಿಯಲ್ಲಿ ಜ್ವರಕ್ಕೆ ಬಳಕೆ ಮಾಡುವ ಪ್ಯಾರಾಸಿಟಮೋಲ್, ಮೈಸೂರು ಮೂಲದ ಓ ಶಾಂತಿ ಗೋಲ್ಡ್ ಕುಂಕುಮ್ ಸೇರಿದಂತೆ ಹಲವು ಉತ್ಪನ್ನಗಳಿವೆ. ಅಸುರಕ್ಷಿತ ಉತ್ಪನ್ನಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಔಷಧಿ ಮತ್ತು ಕಾಂತಿವರ್ಧಕ ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್​ಹೋಂನವರು ಈ ಪಟ್ಟಿಯಲ್ಲಿರುವ ಅಸುರಕ್ಷಿತ ಕಾಂತಿವರ್ಧಕಗಳು ಮತ್ತು ಔಷಧಿಗಳ ದಾಸ್ತಾನು ಮಾಡುವುದನ್ನು, ಮಾರಾಟ ಮಾಡುವುದು ಅಥವಾ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

  1. ಕಂಪೌಂಡ್​ ಸೋಡಿಯಂ ಲ್ಯಾಕ್ಟೆಟ್​​ ಇನ್​ಜೆಕ್ಷನ್​ ಐಪಿ – ಮೆ. ಅಲ್ಟ್ರಾ ಲ್ಯಾಬೋರೇಟರಿಸ್​ ಪ್ರೈ. ಲಿಮಿಟೆಡ್​.
  2. ಕಂಪೌಂಡ್​ ಸೋಡಿಯಂ ಲ್ಯಾಕ್ಟೆಟ್​ ಇನ್​ಜೆಕ್ಷನ್​ ಐಪಿ – ಮೇ. ಟಾಮ್​ ಬ್ರಾನ್​ ಫಾರ್ಮಾಸ್ಯೂಟಿಕಲ್ಸ್​ ಪ್ರೈ. ಲಿಮಿಟೆಡ್​.
  3. ಪೋಮೋಲ್​-650 (ಪ್ಯಾರಾಸಿಟಮೋಲ್​ ಟ್ಯಾಬ್ಲೆಟಸ್​ ಐ.ಪಿ 650 ಎಂಜಿ)- ಮೇ. ಅಬಾನ್​ ಫಾರ್ಮಾಸ್ಯೂಟಿಕಲ್ಸ್​ ಪ್ರೈ. ಲಿಮಿಟೆಡ್.
  4. ಮಿಟು ಕ್ಯೂ7 ಸಿರಪ್​ – ಮೆ. ಬಯೋನ್​ ಥೆರಾಪ್ಯಾಟಿಕ್ಸ್​ ಇಂಡಿಯಾ ಪ್ರೈ. ಲಿಮಿಟೆಡ್​
  5. ಸ್ಟೈರಲ್​ ಡಿಲ್ಯೈಯಂಟ್​ ಪಾರ್ ರೆಕಾನೋಸ್ಟಿಟಿಶ್ಯೂನ್​ ಆಪ್​ ಎನ್​ಡಿ, ಐಬಿ, ಐಬಿಡಿ ಆ್ಯಂಡ್​ ಕಾಂಬಿನೇಷನ್​ ವ್ಯಾಕ್ಸಿನ್ಸ್​ ಫಾರ್​ ಪೌಲ್ಟ್ರೀ (ವೆಟರ್​ನರಿ) ಮಲ್ಟಿ ಡೋಸ್​ ವಿಲಾ 200 ಎಂಲ್​ – ಮೇ. ಸೇಫ್​ ಪೇರೆಂಟರಲ್ಸ್​ ಪ್ರೈ. ಲಿಮಿಟೆಡ್.
  6. ಸ್ಪಾನ್​ಪ್ಲಾಕ್ಸ್​-ಓಡ್​ ಟ್ಯಾಬ್ಲೆಟ್ಸ್​ (ಓಪ್ಲಾಕ್ಸಸಿನ್​ & ಓರ್ನಿಡಜೋಲ್ ಟ್ಯಾಬ್ಲೆಟ್ಸ್​ ಐಪಿ) – ಮೆ. ಇಂಡೋರಾಮ ಹೇಲ್ತ್​ ಕೇಸ್​ ಪ್ರೈ ಲಿಮಿಟಿಡ್​.
  7. ಪ್ಯಾಂಟೋಕೋಟ್​-ಡಿಎಸ್​ಆರ್​ (ಪ್ಯಾಂಟೋಫ್ರಜೋಲ್​ ಗ್ಯಾಸ್ಟ್ರೋ-ರಿಜಿಸ್ಟೆಂಟ್​ & ಡೋಮ್​ಫೆರಿಡನ್​ ಪ್ರೋಕಾಂಗಡ್​ ರಿಲಿಸ್​​ ಕ್ಯಾಪ್ಸೂಲ್ಸ್​ ಐಪಿ – ಮೇ. ಸ್ವೆಫ್ನೆ ಫಾರ್ಮಾಸ್ಯೂಟಿಕಲ್ಸ್​ ಪ್ರೈ. ಲಿಮಿಟೆಡ್​.
  8. ಸೋಡಿಯಂ ಕ್ಲೋರೈಡ್​ ಇನ್​ಜೆಕ್ಷನ್​ ಐಪಿ 0.9% ಡಬ್ಲ್ಯೂ/ವಿ (ಎನ್​ಎಸ್​) – ಮೆ. ಪುನಿಷ್ಕ ಇನ್​ಜೆಕ್ಟಬಲ್​ ಪ್ರೈ. ಲಿಮಿಟೆಡ್​
  9. ಸೋಡಿಯಂ ಕ್ಲೋರೈಡ್​ ಇನ್​ಜೆಕ್ಷನ್​ ಐಪಿ 0.9% ಡಬ್ಲ್ಯೂ/ವಿ (ಎನ್​ಎಸ್​) – ಮೆ. ಪುನಿಷ್ಕ ಇನ್​ಜೆಕ್ಟಬಲ್​ ಪ್ರೈ. ಲಿಮಿಟೆಡ್​.
  10. ಅಲ್ಪಾ ಲಿಪೋಯಿಕ್​ ಆಸಿಡ್​, ಪೋಲಿಕ್​ ಆಸಿಡ್​, ಮಿಥೈಲ್​ ಕೋಬಾಲಮಿನ್, ವಿಟಮಿನ್​ ಬಿ6 & ವಿಟಮಿನ್​ ಡಿ3ಟ್ಯಾಬ್ಲೆಟ್ಸ್​ – ಮೇ. ಇಸ್ಟ್​ ಆಪ್ರಿಕನ್​ (ಇಂಡಿಯಾ) ಓವರ್​ಸಿಸ್​.
  11. ಓ ಶಾಂತಿ ಗೋಲ್ಡ್ ಕ್ಲಾಸ್​ ಕುಂಕುಮ್​ – ಮೇ. ಎನ್​. ರಂಗರಾವ್​ & ಸನ್ಸ್​ ಪ್ರೈ ಲಿಮಿಟೆಡ್​.
  12. ಪಿರಾಸಿಡ್​-ಓ ಸಸ್​ಪೆನ್​ಶನ್​ (ಸಲ್ಕ್ರಾಲ್ಫೇಟ್​ & ಆಕ್ಸೆಟಾಕೈನ್​ ಸಸ್​ಪೆನ್​ಶನ್​) – ಮೆ. ರೆಡ್ನಕ್ಸ್ ಫಾರ್ಮಾಸ್ಯೂಟಿಕಲ್ಸ್​ ಪ್ರೈ ಲಿಮಿಟೆಡ್​.
  13. ಗ್ಲಿಮಿಜ್​-2 (ಗ್ಲಿಮಿಫೆರೈಡ್​ ಟ್ಯಾಬ್ಲೆಟ್ಸ್​ ಐಪಿ 2ಎಂಜಿ) – ಮೆ. ಕೆಎನ್​ಎಂ ಫಾರ್ಮಾ ಪ್ರೈ. ಲಿಮಿಟೆಡ್​.
  14. ಐರನ್​ ಸುಕ್ರೋಸ್​ ಇನ್​ಜೆಕ್ಷನ್​ ಯುಎಸ್​ಪಿ 100ಎಂಜಿ (ಐರೋಗೈನ್​) – ಮೆ. ರೀಗೈನ್​ ಲ್ಯಾಬೋರೇಟರಿಸ್​
  15. ಕಂಪೌಂಡ್​ ಸೋಡಿಯಂ ಲ್ಯಾಕ್ಟೆಟ್​ ಇನ್​ಜೆಕ್ಷನ್​ ಐಪಿ (ರಿಂರ್ಗ ಲ್ಯಾಕ್ಟೆಟ್ ಸಲೂಷನ್​ ಪಾರ್​ ಇನ್​ಜೆಕ್ಷನ್​ ಆರ್​ಎಲ್​ – ಮೇ. ಒಟ್ಸುಕಾ ಫಾರ್ಮಾಸ್ಯೂಟಿಕಲ್ಸ್​ ಇಂಡಿಯಾ

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow