ಆ್ಯಕ್ಷನ್​ ಪ್ರಿನ್ಸ್ʼ​ಗೆ ಸಾಥ್​ ಕೊಟ್ಟ ಕಿಚ್ಚ: ‘ಕೆಡಿ’ ಸಿನಿಮಾದಲ್ಲಿ ಸುದೀಪ್!?

ಸೆಪ್ಟೆಂಬರ್ 13, 2025 - 20:07
 0  15
ಆ್ಯಕ್ಷನ್​ ಪ್ರಿನ್ಸ್ʼ​ಗೆ ಸಾಥ್​ ಕೊಟ್ಟ ಕಿಚ್ಚ: ‘ಕೆಡಿ’ ಸಿನಿಮಾದಲ್ಲಿ ಸುದೀಪ್!?

ಧ್ರುವ ಸರ್ಜಾ ನಾಯಕನಾಗಿ, ನಿರ್ದೇಶಕ ಪ್ರೇಮ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಕೆಡಿಶೂಟಿಂಗ್ ಭರದಿಂದ ಸಾಗುತ್ತಿದೆ. ಭರ್ಜರಿ ಆಕ್ಷನ್ ದೃಶ್ಯಗಳೊಂದಿಗೆ ತೆರೆಗೆ ಬರಲಿರುವ ಚಿತ್ರಕ್ಕೆ ಈಗ ಕಿಚ್ಚ ಸುದೀಪ್ ಸೇರಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭಾರಿ ರೈಲು ಸೆಟ್ ಹಾಕಿ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೆಯುತ್ತಿದೆ.

  ವೇಳೆ ಕಿಚ್ಚ ಸುದೀಪ್ ಸೆಟ್ಗೆ ಭೇಟಿ ನೀಡಿದ್ದು, ಅವರು ಸಿನಿಮಾದಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಆದರೆ ಇದರ ಕುರಿತು ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ. ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಪ್ರಮುಖ ಖಳನಾಯಕನಾಗಿ ನಟಿಸುತ್ತಿದ್ದಾರೆ. ಜೊತೆಗೆ ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್, ಅಭಿಜಿತ್, ರೇಷ್ಮಾ ನಾಣಯ್ಯ ಸೇರಿದಂತೆ ಹಲವಾರು ತಾರೆಯರು ಕಾಣಿಸಿಕೊಂಡಿದ್ದಾರೆ.

ಮೋಹನ್ ಲಾಲ್ ಕೂಡ ಪಾತ್ರವಹಿಸುವ ಸಾಧ್ಯತೆ ಇದೆ. ಐಟಂ ಸಾಂಗ್ಗೆ ಬಾಲಿವುಡ್ ನಟಿ ನೋರಾ ಫತೇಹಿ ನೃತ್ಯ ಮಾಡಿದ್ದಾರೆ. ಪ್ರೇಮ್ಸುದೀಪ್ ಜೋಡಿ ಮೊದಲುದಿ ವಿಲನ್ಸಿನಿಮಾದಲ್ಲಿ ಸೇರಿಕೊಂಡಿತ್ತು. ಆದರೆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿರಲಿಲ್ಲ. ಬಾರಿ ಪ್ರೇಮ್ ಮತ್ತೊಂದು ಭರ್ಜರಿ ಮಲ್ಟಿ-ಸ್ಟಾರರ್ ಚಿತ್ರವನ್ನೇ ತೆರೆಗೆ ತರುತ್ತಿದ್ದಾರೆ.80 ದಶಕದ ರೌಡಿಸಂ ಕಥೆಯನ್ನು ಆಧಾರಿಸಿದಕೆಡಿಸಿನಿಮಾ ಇನ್ನೂ ಕೆಲವೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow