ಇಂದು ಹುಟ್ಟೂರಿನಲ್ಲಿ ತಾಯಿಯ ಸಮಾಧಿ ಬಳಿಯೇ ಸರೋಜಾದೇವಿ ಅಂತ್ಯಸಂಸ್ಕಾರ!
ನಟ ಶಿವರಾಜಕುಮಾರ್, ರಾಘಣ್ಣ, ಜಗ್ಗೇಶ್, ಉಪೇಂದ್ರ ಸೇರಿದಂತೆ ಹಲವು ನಟರು ಸರೋಜಾದೇವಿಯವರ ಅಂತಿಮ ದರ್ಶನ ಪಡೆದುಕೊಂಡ್ರು. ನಟಿಯರಾದ ತಾರಾ, ಶೃತಿ, ಮಾಲಾಶ್ರೀ ಸೇರಿದಂತೆ ಹಲವು ಹಿರಿಯ ನಟಿಯರು ಸರೋಜಮ್ಮನ ಕೊನೆಯ ಬಾರಿ ಕಣ್ತುಂಬಿಕೊಂಡು ಕಣ್ಣಂಚಲಿ ನೀರು ತುಂಬಿಕೊಂಡ್ರು..
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ದಶವರದಲ್ಲಿ ಇರೋ ಇದೇ ಪ್ರಕೃತಿ ಮಡಿಲಲ್ಲಿ ಬೆಳಗ್ಗೆ 11.30ಕ್ಕೆ ಒಕ್ಕಲಿಗ ಸಂಪ್ರದಾಯದಂತೆ ಕಲಾ ಸರಸ್ವತಿಯ ಅಂತಿಮ ಸಂತ್ಯಕ್ರಿಯೆ ನಡೆಲಿದೆ. ರಾತ್ರಿಪೂರ್ತಿ ಸರೋಜಾ ಅಂತಿಮ ದರ್ಶನ ಮಾಡಲಾಗಿದ್ದು, ಹಲವರು ಬಂದು ಅಭಿನಯ ಶಾರದೆಯನ್ನ ಕೊನೆಯ ಬಾರಿಗೆ ಕಣ್ತುಂಬಿಕೊಂಡ್ರು.
ರಾಮನಗರದ ದಶವರದಲ್ಲಿ ಕುಟುಂಬಸ್ಥರು ಅಂತಿವ ವಿಧಿವಿಧಾನ ನಡೆಯಲಿದೆ. ತಮಿಳಿನಲ್ಲಿ ಜಯಲಲಿತಾರನ್ನೂ ಸೈಡಿಗೆ ಹಾಕಿದ್ದ, ಕನ್ನಡದ ಮೊಟ್ಟ ಮೊದಲ ಮಹಿಳಾ ಸೂಪರ್ಸ್ಟಾರ್ ಸರೋಜಾದೇವಿ ಅನ್ನೋ ಮಾಣಿಕ್ಯ ಕೊಂಡಿಯೊಂದು ಕಳಚಿದ್ದು, ಕನ್ನಡಕ್ಕೆ, ಕರ್ನಾಟಕಕ್ಕೆ ತುಂಬಲಾರದ ನಷ್ಟ ಅನ್ನೋದು ಅಕ್ಷರಶಃ ಸತ್ಯ.
ನಿಮ್ಮ ಪ್ರತಿಕ್ರಿಯೆ ಏನು?