ಈ ಮನೆಗೆ ನಾನೇ ಹೀರೋ, ನಾನು ಫುಲ್ ಕರಾಬು: ಬಿಗ್ ಮನೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಅಬ್ಬರ!

ಬಿಗ್ ಬಾಸ್ ಸೀಸನ್ 11ರ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿರುವ ರಜತ್ ಅವರು ಸಖತ್ ಆಗೇ ಆಡುತ್ತಿದ್ದಾರೆ. ಒಂದು ಲೆಕ್ಕದಲ್ಲಿ ಅವರು ಬಂದ ಬಳಿಕ ಮನೆಯ ಜೋಶ್ ಬೇರೆ ಆಗಿದೆ.
ಈ ವಾರ ಒಂದು ಟಾಸ್ಕ್ ಬಿಗ್ ಬಾಸ್ ನೀಡಿತ್ತು. ತಮ್ಮೊಳಗೆ ಚರ್ಚಿಸಿ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡಬೇಕಿತ್ತು. ರಜತ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ ತ್ರಿವಿಕ್ರಮ್ ತಂಡ.
ಇಲ್ಲಿ ಎಲ್ಲರನ್ನು ವೈಯಕ್ತಿಕವಾಗಿ ಆಡಿ ಎಂದು ಪ್ರವೋಕ್ ಮಾಡುತ್ತಾರೆ. ಅವರನ್ನೇ ಅವರು ಮೇಲು ಅಂದುಕೊಂಡಿದ್ದಾರೆ ಎಂದು ತ್ರಿವಿಕ್ರಮ್ ಕಾರಣ ಕೊಟ್ಟರು. ಅದಕ್ಕೆ ರಜತ್ ಅವರು ನಾನೇ ಹೀರೋ, ನಾನೇ ಕರಾಬು, ನಾಮಿನೇಟ್ ಮಾಡಿ ಬಿಟ್ರೆ ಚೇಂಜ್ ಆಗ್ತೀನಾ ನಾನು? ಬೇರೆಯವರನಾ ಹೀರೋ ಅಂತಿನಾ? ನಾನೇ ಹೀರೋ ಎಂದು ಅಬ್ಬರಿಸಿದ್ದಾರೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ಸಂಖ್ಯೆ 10ಕ್ಕೆ ಇಳಿಕೆ ಆಗಿದೆ. ಸ್ಪರ್ಧಿಗಳ ಮಧ್ಯೆ ಆಟ ಜೋರಾಗಿದೆ. ಕಳೆದ ವಾರ ಶಿಶಿರ್ ದೊಡ್ಮನೆಯಿಂದ ಔಟ್ ಆಗಿದ್ದರು.ಇಡೀ ಮನೆಯಲ್ಲಿ ಕ್ಲೀನ್ ಮಾಡುವ ಟಾಸ್ಕ್ ನೀಡಲಾಗಿತ್ತು.
ಟಾಸ್ಕ್ ನಿಭಾಯಿಸುವ ವೇಳೆ ಗೌತಮಿ ಜಾದವ್ ಮತ್ತು ರಜತ್ ನಡುವೆ ಜಗಳ ಆರಂಭ ಆಯಿತುತಾವು ಹಣ್ಣು ತಿನ್ನುವುದನ್ನು ಗೌತಮಿ ಜಾದವ್ ಟೀಕಿಸಿದ್ದಕ್ಕೆ ರಜತ್ ಅವರಿಗೆ ಕೋಪ ಬಂತು. ಆಗ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು.
ಆಗಲೇ ಗೌತಮಿ ಮಾತ್ ಆಡ್ತಾರೆ. ಅದಕ್ಕೇನೆ ರಜತ್ ಒಂದು ಬಕೆಟ್ ಇನ್ನೊಂದು ಬಕೆಟ್ ಹಿಡಿದಿರೋದನ್ನ ನೋಡಿರೋದು ಇವತ್ತೇ ಅಂತ ಟಾಂಗ್ ಕೊಡ್ತಾರೆ.
ನಿಮ್ಮ ಪ್ರತಿಕ್ರಿಯೆ ಏನು?






