ಉದ್ಯೋಗದ ಮಾಹಿತಿ: ಆದಾಯ ತೆರಿಗೆ ಇಲಾಖೆಯಲ್ಲಿದೆ ಭರ್ಜರಿ JOB, ಆಸಕ್ತರು ಅಪ್ಲೈ ಮಾಡಿ!

ಎಪ್ರಿಲ್ 8, 2025 - 08:02
 0  14
ಉದ್ಯೋಗದ ಮಾಹಿತಿ: ಆದಾಯ ತೆರಿಗೆ ಇಲಾಖೆಯಲ್ಲಿದೆ ಭರ್ಜರಿ JOB, ಆಸಕ್ತರು ಅಪ್ಲೈ ಮಾಡಿ!

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಆದಾಯ ತೆರಿಗೆ ಇಲಾಖೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. 

ಆದಾಯ ತೆರಿಗೆ ಇಲಾಖೆಯು ಗ್ರೇಡ್-1 ಸ್ಟೆನೋಗ್ರಾಫರ್ ಉದ್ಯೋಗಗಳನ್ನು ಭರ್ತಿ ಮಾಡಲು ಮುಂದಾಗಿದೆ. ಉದ್ಯೋಗ ಆಕಾಂಕ್ಷಿಗಳು ಈ ಕೆಲಸಗಳಿಗೆ ಪ್ರಯತ್ನ ಮಾಡಬಹುದು. ಅರ್ಜಿ ಪ್ರಕ್ರಿಯೆ, ಶುಲ್ಕ, ಕೆಲಸ ಮಾಡುವುದು ಎಲ್ಲಿ, ವಿದ್ಯಾರ್ಹತೆ, ವಯಸ್ಸಿನ ಮಿತಿ ಸೇರಿ ಮುಂತಾದ ಮಾಹಿತಿ ಇಲ್ಲಿ ನೀಡಲಾಗಿದೆ.

ಕೆಲಸ ಮಾಡುವ ಸ್ಥಳ- ಆಂಧ್ರ, ತೆಲಂಗಾಣ

ಸಂಬಳ– 35,400 ರೂಪಾಯಿ ಇಂದ 1,12,400 ರೂಪಾಯಿ

ವಿದ್ಯಾರ್ಹತೆ-

ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ ಇದೆ. ಮೂಲ ಅಧಿಸೂಚನೆ ಪರಿಶೀಲನೆ ಮಾಡಬಹುದು.

ವಯಸ್ಸಿನ ಮಿತಿ
56 ವರ್ಷದ ಒಳಗಿನವರಿಗೆ ಅವಕಾಶ ಇದೆ

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಲಿಖಿತ ಪರೀಕ್ಷೆ
ಸಂದರ್ಶನ

ಇಲಾಖೆಯ ವೆಬ್​ಸೈಟ್​ನಿಂದ ಅಭ್ಯರ್ಥಿಗಳು ಅರ್ಜಿಯ ಪ್ರತಿ ಡೌನ್​ಲೋಡ್ ಮಾಡಿಕೊಳ್ಳಬೇಕು. ಬಳಿಕ ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಕೇಳಿರುವ ಎಲ್ಲ ದಾಖಲೆಗಳನ್ನು (ಜೆರಾಕ್ಸ್) ಲಗತ್ತಿಸಿ. ಇವುಗಳಿಗೆ ಸೆಲ್ಫ್​ ಅಟೆಸ್ಟೆಡ್ ಮಾಡುವುದು ಮರೆಯಬೇಡಿ. ಬಳಿಕ ಈ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಪೋಸ್ಟ್​ ಮೂಲಕ ಕಳುಹಿಸಿಕೊಡಿ

ವಿಳಾಸ;-

Office of the Principal Chief Commissioner of Income Tax, Andhra Pradesh & Telangana,
Hyderabad ‘C’ Block, 10th Floor, Income Tax Towers,
A C Guards, Masab Tank, Hyderabad- 500004

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ– 23 ಏಪ್ರಿಲ್ 2025

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow