ಮಕ್ಕಳ ಜೊತೆ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್ ರಾಜಕುಮಾರ್

ಪುನೀತ್ ರಾಜ್‍ಕುಮಾರ್ 50ನೇ ಹುಟ್ಟುಹಬ್ಬ ಹಿನ್ನೆಲೆ, ಬೆಳ್ಳಂಬೆಳಗ್ಗೆ ಪುನೀತ್ ಸಮಾಧಿ ಬಳಿ ಅಭಿಮಾನಿಗಳ ದಂಡೆ ಹರಿದು ಬಂದಿದೆ. ಹೂವಿನ ಅಲಂಕಾರದಿಂದ ಅಪ್ಪು ಸಮಾಧಿ ಕಂಗೊಳಿಸ್ತಿದ್ದು, ಸಮಾಧಿ ಹೊರಗಡೆ ರಸ್ತೆಯಲ್ಲಿ ಅನ್ನದಾಸೋಹ, ರಕ್ತದಾನ ಶಿಬಿರಕ್ಕೆ ಸಿದ್ಧತೆ ನಡೆಸಲಾಗ್ತಿದೆ. ಇನ್ನು ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕಕ್ಕೆ ಮಕ್ಕಳೊಂದಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ ನೀಡಿದ್ದಾರೆ. ಪುನೀತ್ ಸ್ಮಾರಕಕ್ಕೆ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಾಘಣ್ಣ ಕುಟುಂಬಸ್ಥರು ಹಾಗೂ ಪುತ್ರಿಯರೊಂದಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಗಮಿಸಿ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅಪ್ಪನಿಗಾಗಿ ತಯಾರಿಸಿದ ಕೇಕ್ ಅನ್ನು ಅಪ್ಪು ಪುತ್ರಿಯರು ಸ್ಮಾರಕದ ಮುಂದೆ ಇರಿಸಿದ್ದಾರೆ. ಈ ಮೂಲಕ ತಂದೆ ಹುಟ್ಟುಹಬ್ಬಕ್ಕೆ ಪುತ್ರಿಯರು ಶುಭಕೋರಿದ್ದಾರೆ. ಈ ವೇಳೆ, ಅಶ್ವಿನಿ ಜೊತೆಗಿನ ಸೆಲ್ಫಿಗಾಗಿ ಅನೇಕರು ಮುಗಿಬಿದ್ದಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






