ಉದ್ಯೋಗದ ಮಾಹಿತಿ: ಆದಾಯ ತೆರಿಗೆ ಇಲಾಖೆಯಲ್ಲಿದೆ ಭರ್ಜರಿ JOB, ಆಸಕ್ತರು ಅಪ್ಲೈ ಮಾಡಿ!

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಆದಾಯ ತೆರಿಗೆ ಇಲಾಖೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಆದಾಯ ತೆರಿಗೆ ಇಲಾಖೆಯು ಗ್ರೇಡ್-1 ಸ್ಟೆನೋಗ್ರಾಫರ್ ಉದ್ಯೋಗಗಳನ್ನು ಭರ್ತಿ ಮಾಡಲು ಮುಂದಾಗಿದೆ. ಉದ್ಯೋಗ ಆಕಾಂಕ್ಷಿಗಳು ಈ ಕೆಲಸಗಳಿಗೆ ಪ್ರಯತ್ನ ಮಾಡಬಹುದು. ಅರ್ಜಿ ಪ್ರಕ್ರಿಯೆ, ಶುಲ್ಕ, ಕೆಲಸ ಮಾಡುವುದು ಎಲ್ಲಿ, ವಿದ್ಯಾರ್ಹತೆ, ವಯಸ್ಸಿನ ಮಿತಿ ಸೇರಿ ಮುಂತಾದ ಮಾಹಿತಿ ಇಲ್ಲಿ ನೀಡಲಾಗಿದೆ.
ಕೆಲಸ ಮಾಡುವ ಸ್ಥಳ- ಆಂಧ್ರ, ತೆಲಂಗಾಣ
ಸಂಬಳ– 35,400 ರೂಪಾಯಿ ಇಂದ 1,12,400 ರೂಪಾಯಿ
ವಿದ್ಯಾರ್ಹತೆ-
ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ ಇದೆ. ಮೂಲ ಅಧಿಸೂಚನೆ ಪರಿಶೀಲನೆ ಮಾಡಬಹುದು.
ವಯಸ್ಸಿನ ಮಿತಿ
56 ವರ್ಷದ ಒಳಗಿನವರಿಗೆ ಅವಕಾಶ ಇದೆ
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಲಿಖಿತ ಪರೀಕ್ಷೆ
ಸಂದರ್ಶನ
ಇಲಾಖೆಯ ವೆಬ್ಸೈಟ್ನಿಂದ ಅಭ್ಯರ್ಥಿಗಳು ಅರ್ಜಿಯ ಪ್ರತಿ ಡೌನ್ಲೋಡ್ ಮಾಡಿಕೊಳ್ಳಬೇಕು. ಬಳಿಕ ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಕೇಳಿರುವ ಎಲ್ಲ ದಾಖಲೆಗಳನ್ನು (ಜೆರಾಕ್ಸ್) ಲಗತ್ತಿಸಿ. ಇವುಗಳಿಗೆ ಸೆಲ್ಫ್ ಅಟೆಸ್ಟೆಡ್ ಮಾಡುವುದು ಮರೆಯಬೇಡಿ. ಬಳಿಕ ಈ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಿಕೊಡಿ
ವಿಳಾಸ;-
Office of the Principal Chief Commissioner of Income Tax, Andhra Pradesh & Telangana,
Hyderabad ‘C’ Block, 10th Floor, Income Tax Towers,
A C Guards, Masab Tank, Hyderabad- 500004
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ– 23 ಏಪ್ರಿಲ್ 2025
ನಿಮ್ಮ ಪ್ರತಿಕ್ರಿಯೆ ಏನು?






