ಏನ್ ಫಿಟ್ನೆಸ್ ಗುರು! 43 ವರ್ಷವಾದರೂ 23ರ ಹುಡುಗಿಯಂತೆ ಕಾಣುವ ʼಅಮೃತಧಾರೆʼ ಛಾಯಾ ಸಿಂಗ್!

ಮಾರ್ಚ್ 17, 2025 - 18:45
 0  8
ಏನ್ ಫಿಟ್ನೆಸ್ ಗುರು! 43 ವರ್ಷವಾದರೂ 23ರ ಹುಡುಗಿಯಂತೆ ಕಾಣುವ ʼಅಮೃತಧಾರೆʼ ಛಾಯಾ ಸಿಂಗ್!

ನಟಿ ಛಾಯಾ ಸಿಂಗ್ ಈ ಹೆಸರು ಬಣ್ಣದ ಲೋಕಕ್ಕೆ ಚಿರ ಪರಿಚಿತ. ಸಧ್ಯ ಅಮೃತಧಾರೆ ಧಾರಾವಾಹಿಯಲ್ಲಿ ಛಾಯಾ ಸಿಂಗ್ ಭೂಮಿಕಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ, ಒಬ್ಬ ಗಟ್ಟಿಗಿತ್ತಿ ಮಹಿಳಾ ಪಾತ್ರದಲ್ಲಿ ನೋಡುಗರಿಗೆ ಸ್ಫೂರ್ತಿಯಾಗಿ ನಟಿಯ ಪಾತ್ರ ಎಲ್ಲರನ್ನೂ ರಂಜಿಸುತ್ತಿದೆ, ಭೂಮಿಕಾ ಅವರ ಸಿಂಪಲ್ ಲುಕ್ ಅಂತೂ ಎಲ್ಲರಿಗೂ ಇಷ್ಟವಾಗುತ್ತಿದೆ. ಆದ್ರೆ ಭೂಮಿಕಾ ಅಲಿಯಾಸ್ ಛಾಯಾ ಸಿಂಗ್ ಅವರ ನಿಜವಾದ ವಯಸ್ಸೆಷ್ಟು ಎಂಬುದನ್ನು ನೀವು ಗೆಸ್ ಮಾಡಿದ್ದಿರಾ?   

ಎಸ್, ʼಅಮೃತಧಾರೆʼ ಧಾರಾವಾಹಿಯಲ್ಲಿ ನಟಿಸುತ್ತಿರುವ ಛಾಯಾ ಸಿಂಗ್‌ ಅವರಿಗೆ ಈಗ 43 ವರ್ಷ ವಯಸ್ಸು. ಇವರಿಗೆ ತಮಿಳು ನಟ ಕೃಷ್ಣ ಜೊತೆ ಮದುವೆಯಾಗಿದೆ. 

ಛಾಯಾ ಸಿಂಗ್‌ ಅವರು ಬ್ಯೂಟಿ ಬಗ್ಗೆ ಹೆಚ್ಚು ಗಮನಕೊಡುವವರಲ್ಲ. ಆದರೆ ಕಲಾವಿದರಾಗಿದ್ದಕ್ಕೆ ಒಂದಷ್ಟು ಗಮನ ಕೊಡಲೇಬೇಕು ಎಂದು ಗಮನಕೊಡುತ್ತಾರಂತೆ. ಛಾಯಾ ಸಿಂಗ್‌ ಅವರು ಎಲ್ಲ ರೀತಿಯ ಆಹಾರವನ್ನು ಸೇವಿಸುತ್ತಾರೆ, ಆದರೆ ಅದು ಮಿತಿಯಲ್ಲಿರುತ್ತದೆ. ಇದೇ ಅವರ ಡಯೆಟ್‌ ಎನ್ನಬಹುದು. 

ಛಾಯಾ ಸಿಂಗ್‌ ಅವರು ಸಿಕ್ಕಾಪಟ್ಟೆ ನೀರು ಕುಡಿಯುತ್ತಾರೆ. ಇದರಿಂದ ದೇಹದ ಕಲ್ಮಶಗಳು ಹೊರಹೋಗುತ್ತವೆ ಎಂದು ಅವರು ನಂಬುತ್ತಾರೆ. "ನೀರು ಜಾಸ್ತಿ ಕುಡಿದರೆ ವಾಶ್‌ ರೂಮ್‌ಗೆ ಹೋಗಬೇಕಾಗುತ್ತದೆ ಅಂತ ಹೇಳ್ತಾರೆ, ಆದರೆ ನಮಗೆ ನೀರು ಕುಡಿಯೋದು ರೂಢಿ ಆದರೆ ಆ ಸಮಸ್ಯೆ ಬರೋದಿಲ್ಲ" ಎಂದು ಛಾಯಾ ಸಿಂಗ್‌ ಹೇಳಿದ್ದಾರೆ. 

ಛಾಯಾ ಸಿಂಗ್‌ ಅವರಿಗೆ ದಪ್ಪನೆಯ, ಕಪ್ಪನೆಯ ತಲೆಕೂದಲಿದೆ. ಛಾಯಾ ಸಿಂಗ್‌ ಅವರು ತಲೆಸ್ನಾನ ಮಾಡುವ ಮುನ್ನ ಎಣ್ಣೆ ಹಚ್ಚಿ ಬಿಡುತ್ತಾರೆ. ಇದು ದೊಡ್ಡ ರಹಸ್ಯ ಅಂತೆ. ಇನ್ನು ಪತಿಯ ಬೆಂಬಲದಿಂದ ವ್ಯಾಯಾಮ ಕೂಡ ಮಾಡುತ್ತಾರೆ. ವ್ಯಾಯಾಮದಿಂದ ನಮ್ಮ ಮೈಯೊಳಗಿನ ಬೆವರು ಕೂಡ ಹೋಗುವುದು, ಇದು ತುಂಬ ಒಳ್ಳೆಯದು ಎನ್ನುತ್ತಾರೆ ಛಾಯಾ ಸಿಂಗ್. 

ಛಾಯಾ ಸಿಂಗ್‌ ಅವರು ರೋಸ್‌ ವಾಟರ್‌ ಜೊತೆಗೆ ಅಥವಾ ನೀರಿನ ಜೊತೆಗೆ ಮುಲ್ತಾನಿ ಮುಟ್ಟಿಯನ್ನು ಮುಖಕ್ಕೆ ಹಚ್ಚುತ್ತಾರೆ. ಇದರಿಂದ ಅವರಿಗೆ ಮುಖದ ಮೇಲಿರುವ ಎಣ್ಣೆ ಹೋಗುತ್ತದೆಯಂತೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow