ತಲೆಯಲ್ಲಿ ಕೂದಲು ಇಲ್ಲ ಎಂದು ಹೆಂಡತಿಯ ಟಾರ್ಚರ್: ಮನನೊಂದು ಗಂಡ ಆತ್ಮಹತ್ಯೆ

ಮಾರ್ಚ್ 17, 2025 - 21:01
 0  24
ತಲೆಯಲ್ಲಿ ಕೂದಲು ಇಲ್ಲ ಎಂದು ಹೆಂಡತಿಯ ಟಾರ್ಚರ್: ಮನನೊಂದು ಗಂಡ ಆತ್ಮಹತ್ಯೆ

ಚಾಮರಾಜನಗರ: ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆಗಳು ಸಾಕಷ್ಟು ವರದಿಯಾಗಿವೆ. ಆದರೆ ಇತ್ತೀಚೆಗೆ ಇದು ಬದಲಾಗಿತ್ತು. ಹೆಂಡತಿ ಕಾಟ, ಕಿರುಕುಳ ತಾಳಲಾರದ ಗಂಡ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ. ಇದೀಗ ನಿನ್ನ ತಲೆಯಲ್ಲಿ ಕೂದಲು ಇಲ್ಲ ಎಂದು ಪತ್ನಿ ನೀಡುತ್ತಿದ್ದ ಟಾರ್ಚರ್‌ಗೆ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ನಡೆದಿದೆ.

ಪರಶಿವ (32) ಆತ್ಮಹತ್ಯೆ ಮಾಡಿಕೊಂಡ ಪತಿ. ನೀನು ಚನ್ನಾಗಿಲ್ಲ, ನನಗೆ ಸರಿಯಾದ ಜೋಡಿಯಲ್ಲ ಎಂದು ಪತ್ನಿ ಎಲ್ಲರ ಎದುರೇ ಅವಮಾನ ಮಾಡುತ್ತಿದ್ದಳು. ಶೊಕಿವಾಲೆಯಾಗಿದ್ದ ಪತ್ನಿ ಹೈಫೈ ಜೀವನ ಮಾಡಲು ಬಯಸಿದ್ದಳು. ಅಲ್ಲದೇ ರೀಲ್ಸ್ ಗೀಳು ಕೂಡ ಇತ್ತು. ಒಳ್ಳೆ ಬಟ್ಟೆ ಕೊಡಿಸು, ಆಭರಣ ಕೊಡಿಸು, ಬೇರೆಮನೆ ಮಾಡು ಎಂದು ಪತ್ನಿ ಪತಿಗೆ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡುತ್ತಿದ್ದಳು.

ಇಷ್ಟು ಮಾತ್ರವಲ್ಲದೇ ಸುಳ್ಳು ವರದಕ್ಷಿಣೆ ಕೇಸ್ ಹಾಕಿ ಪತಿಯನ್ನು ಒಂದೂವರೆ ತಿಂಗಳು ಜೈಲಿಗೆ ಕೂಡ ಕಳಿಸಿದ್ದಳು. ಪತ್ನಿಯ ಕಿರುಕುಳದಿಂದ ಬೇಸತ್ತು ಪತಿ ಪರಶಿವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow