ಪಿಎಂ ನರೇಂದ್ರ ಮೋದಿಗೆ ಸ್ಪೆಷಲ್ ಥ್ಯಾಂಕ್ಯೂ ಹೇಳಿದ ಬಾಲಿವುಡ್ ನಟಿ!

ಎಪ್ರಿಲ್ 12, 2025 - 21:01
 0  11
ಪಿಎಂ ನರೇಂದ್ರ ಮೋದಿಗೆ ಸ್ಪೆಷಲ್ ಥ್ಯಾಂಕ್ಯೂ ಹೇಳಿದ ಬಾಲಿವುಡ್ ನಟಿ!

ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಾಲಿವುಡ್ ನಟಿ ನುಶ್ರತ್ ಭರೂಚಾ ಭೇಟಿ ಮಾಡಿದ್ದಾರೆ. 2023ರಲ್ಲಿ ಹಮಾಸ್ ಭಯೋತ್ಪಾದಕರ ದಾಳಿ ನಿಮಿತ್ತ ಇಸ್ರೇಲ್‌ನಲ್ಲಿ ನುಶ್ರತ್ ಸಿಕ್ಕಿಬಿದ್ದಿದ್ದರು. ಈ ಸಂದಭದಲ್ಲಿ ಇಸ್ರೇಲ್‌ನಿಂದ ರಕ್ಷಿಸಿದ್ದಕ್ಕೆ ಪ್ರಧಾನಿ ಮೋದಿ ಅವರಿಗೆ ನಟಿ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ.

ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ನುಶ್ರತ್ ಸಂತಸ ವ್ಯಕ್ತಪಡಿಸಿದ್ದಾರೆ. ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದ ಸಂದರ್ಭದಲ್ಲಿ ನನ್ನನ್ನು ಸೇರಿ ಇನ್ನುಳಿದ ಭಾರತೀಯರನ್ನು ಕರೆತರಲು ನಿಮ್ಮ ತಂಡ ಮತ್ತು ಸರ್ಕಾರ ಕೈಗೊಂಡ ಕ್ರಮಕ್ಕಾಗಿ ಧನ್ಯವಾದಗಳು. ಮೋದಿಜೀ ಅವರೇ ನಿಮಗೆ ವೈಯಕ್ತಿಕವಾಗಿ ಧನ್ಯವಾದ ಹೇಳಲು ನನಗೆ ಅದ್ಭುತ ಸೌಭಾಗ್ಯ ಸಿಕ್ಕಿದೆ. ನಿಮ್ಮನ್ನು ಭೇಟಿಯಾಗಿ ಧನ್ಯಳಾಗಿದ್ದೇನೆ. ಇದನ್ನೂ ಜೀವನ ಪೂರ್ತಿ ಸ್ಮರಿಸುತ್ತೇನೆ ಎಂದು ನಟಿ ಬರೆದುಕೊಂಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow