ಕನ್ನಡದ ಖ್ಯಾತ ಕಿರುತೆರೆ ನಟಿ ಹಾಗೂ ನಿರೂಪಕಿಗೆ ಗಂಡನಿಂದಲೇ ಚಾಕು ಇರಿತ..!

ಕಿರುತೆರೆ ನಟಿ ಮತ್ತು ಖಾಸಗಿ ವಾಹಿನಿಯ ನಿರೂಪಕಿ ಮಂಜುಳಾ ಅಲಿಯಾಸ್ ಶ್ರುತಿ ಮೇಲೆ ಪತಿ ಅಂಬರೀಶ್ ಚಾಕು ಇರಿಸಿ ಕೊಲೆ ಯತ್ನ ನಡೆಸಿರುವ ಘಟನೆ ಬೆಂಗಳೂರು ನಗರದ ಹನುಮಂತ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ಈಗ ತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಜುಲೈ 4ರಂದು ಮುನೇಶ್ವರ ಲೇಔಟ್‌ನಲ್ಲಿರುವ ತಮ್ಮ ಮನೆದಲ್ಲಿ ಈ ದಾಳಿ ನಡೆದಿದೆ. ಶ್ರುತಿ ಹಾಗೂ ಅಂಬರೀಶ್ 20 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಆದರೆ ನಡವಳಿಕೆಗೆ ಸಂಬಂಧಿಸಿದಾಗಿ ಗಂಡನಿಗೆ ಅಸಮಾಧಾನವಾಗಿದ್ದ ಕಾರಣ, ಕಳೆದ ಏಪ್ರಿಲ್‌ನಿಂದ ಶ್ರುತಿ ಪತಿಯ ಪ್ರತ್ಯೇಕ ವಾಸವಿದ್ದರು.
ಲೀಸ್ ಹಣದ ವಿವಾದವನ್ನು ಕೇಂದ್ರವಾಗಿಸಿಕೊಂಡು ಜಗಳಗಳು ನಡೆದಿದ್ದು, ಈ ಬಗ್ಗೆ ಶ್ರುತಿ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಜುಲೈ 3ರಂದು ಇಬ್ಬರೂ ರಾಜಿ ಮಾಡಿಕೊಂಡು ಒಂದಾದರು. ಆದರೆ ಮರುದಿನವೇ ಅಂಬರೀಶ್ ಪೆಪ್ಪರ್ ಸ್ಪ್ರೇ ಬಳಸಿ, ಪಕ್ಕೆಲುಬು, ತೊಡೆ ಹಾಗೂ ಕುತ್ತಿಗೆಗೆ ಚಾಕು ಇರಿದು ಹಲ್ಲೆ ನಡೆಸಿದ್ದಾನೆ.
ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದು, ಶ್ರುತಿ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹನುಮಂತ ನಗರ ಪೊಲೀಸರು ಪ್ರಕರಣ ದಾಖಲಿಸಿ ಅಂಬರೀಶ್‌ನನ್ನು ಬಂಧಿಸಿದ್ದಾರೆ. ಹಲ್ಲೆಗೆ ಕಾರಣವಾಗಿ ವೈವಾಹಿಕ ಗಲಾಟೆ ಮತ್ತು ಹಣಕಾಸು ವಿವಾದವಾಗಿರಬಹುದು ಎಂದು ಶಂಕಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






