BBK11: ಇಂದು ಕಿಚ್ಚನ ಪಂಚಾಯಿತಿ: ಈ ವಾರ ಮನೆಯಿಂದ ಹೋಗೋದು ಇವರೇ!

ಇಂದು ಬಿಗ್ ಬಾಸ್ ಸೀಸನ್ 11ರ ಕಿಚ್ಚನ ಪಂಚಾಯಿತಿ ಇದ್ದು, ಈ ವಾರ ಮನೆಯಿಂದ ಯಾರು ಹೋಗ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಈ ವಾರ ಕಿಚ್ಚ ಸುದೀಪ್, ಯಾವೆಲ್ಲ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಬಿಗ್ಬಾಸ್ ಸ್ಪರ್ಧಿಗಳಿಗೆ ಜೋಡಿಗಳ ಟಾಸ್ಕ್ ನೀಡಿದ್ದರು. ಕೆಲವು ಜೋಡಿಗಳ ನಡುವೆಯೇ ಯುದ್ಧಗಳು ನಡೆದು ಹೋಗಿವೆ. ಹಾಗಾಗಿ ಸುದೀಪ್, ಈ ಎಲ್ಲಾ ಸರಿತಪ್ಪುಗಳ ಬಗ್ಗೆ ಪರಮಾರ್ಶೆ ಮಾಡಲಿದ್ದಾರೆ.
ಈ ವಾರ ಮನೆಯಿಂದ ಹೊರ ಹೋಗಲು 10 ಮಂದಿ ನಾಮಿನೇಟ್ ಆಗಿದ್ದಾರೆ. ಅವರಲ್ಲಿ ಒಬ್ಬರಿಗೆ ಬಿಗ್ಬಾಸ್ ಮನೆಯಿಂದ ಗೇಟ್ಪಾಸ್ ಸಿಗಲಿದೆ. ಧರ್ಮ, ಧನರಾಜ್, ಮೋಕ್ಷಿತಾ, ಶಿಶಿರ್, ಮಂಜು, ಭವ್ಯ, ಗೌತಮಿ, ಹನುಮಂತ, ಗೋಲ್ಡ್ ಸುರೇಶ್, ಅನುಷಾ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರ ಬಿಗ್ಬಾಸ್ ಜರ್ನಿ ನಾಳೆಗೆ ಅಂತ್ಯಗೊಳ್ಳಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






