ಕರ್ನಾಟಕದಲ್ಲಿ ಮುಂದುವರಿದ ಮಳೆ: 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಅಕ್ಟೋಬರ್ 23, 2025 - 10:45
 0  15
ಕರ್ನಾಟಕದಲ್ಲಿ ಮುಂದುವರಿದ ಮಳೆ: 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮುಂಗಾರು ಕಡಿಮೆಯಾಗುವ ಲಕ್ಷಣಗಳು ಕಾಣಿಸದೆ, ನಿರಂತರವಾಗಿ ಮಳೆಯು ಸುರಿಯುತ್ತಿದೆ. ಒಂದು ದಿನ ಬಿಡುವು ಕೊಟ್ಟರೆ ಮರುದಿನವೇ ಮಳೆ ಆರಂಭವಾಗುತ್ತಿರುವ ಪರಿಸ್ಥಿತಿ ಮುಂದುವರಿದಿದ್ದು, ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ಭಾರಿ ಮಳೆಯಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಅಕ್ಟೋಬರ್ 29ರವರೆಗೆ ಮಳೆ ಮುಂದುವರೆಯಲಿದೆ.

ಆರೆಂಜ್ ಅಲರ್ಟ್ ಜಿಲ್ಲೆಗಳು:
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌ ಘೋಷಿಸಲಾಗಿದೆ.

ಯೆಲ್ಲೋ ಅಲರ್ಟ್ ಜಿಲ್ಲೆಗಳು:
ವಿಜಯನಗರ, ತುಮಕೂರು, ಶಿವಮೊಗ್ಗ, ಮೈಸೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಹಾವೇರಿ, ಗದಗ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ಸಾಧಾರಣ ಮಳೆ ಇರುವ ಜಿಲ್ಲೆಗಳು:
ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ಯಾದಗಿರಿ, ವಿಜಯಪುರ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಮಳೆಯಾದ ಪ್ರದೇಶಗಳು:
ಕುಮಟಾ, ಮಂಕಿ, ಬಂಟವಾಳ, ಬೆಳ್ತಂಗಡಿ, ಗಂಗಾವತಿ, ಕದ್ರಾ, ಕಾರ್ಕಳ, ಮಂಗಳೂರು, ಮೂಡುಬಿದಿರೆ, ಸೈದಾಪುರ, ತಾವರಗೇರಾ, ಯಗಟಿ, ಬೆಳ್ಳೂರು, ದಾವಣಗೆರೆ, ಧರ್ಮಸ್ಥಳ, ಕೋಟಾ, ಕುಷ್ಟಗಿ, ಪೊನ್ನಂಪೇಟೆ, ಕೋಲಾರ, ಗುಬ್ಬಿ, ಶಕ್ತಿನಗರ, ಸಿದ್ದಾಪುರ, ಭರಮಸಾಗರ ಮತ್ತು ಚನ್ನಗಿರಿ ಭಾಗಗಳಲ್ಲಿ ಮಳೆಯಾಗಿದೆ.

ಚಿಕ್ಕಬಳ್ಳಾಪುರ, ಹಿರಿಯೂರು, ಹೊನ್ನಾವರ, ಹೊಸದುರ್ಗಾ, ಎಚ್‌ಡಿಕೋಟೆ, ಹಗರಿಬೊಮ್ಮನಹಳ್ಳಿ, ಇಂಡಿ, ಕಿಬ್ಬನಹಳ್ಳಿ, ಕುಣಿಗಲ್, ಮಾಗಡಿ, ನಾಗಮಂಗಲ, ಶಿವಮೊಗ್ಗ, ಟಿ.ಜಿ.ಹಳ್ಳಿ, ತಿಪಟೂರು ಮತ್ತು ಯಡ್ರಾಮಿ ಭಾಗಗಳಲ್ಲಿಯೂ ಮಳೆಯಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow