ಕರ್ನಾಟಕ ಗ್ರಾಮೀಣ ಬ್ಯಾಂಕ್' ನಲ್ಲಿ 1425 ಹುದ್ದೆಗಳಿಗೆ ಅರ್ಜಿ ಆಹ್ವಾನ: ಕೂಡಲೇ ಅರ್ಜಿ ಸಲ್ಲಿಸಿ 

ಸೆಪ್ಟೆಂಬರ್ 16, 2025 - 07:59
 0  8
ಕರ್ನಾಟಕ ಗ್ರಾಮೀಣ ಬ್ಯಾಂಕ್' ನಲ್ಲಿ 1425 ಹುದ್ದೆಗಳಿಗೆ ಅರ್ಜಿ ಆಹ್ವಾನ: ಕೂಡಲೇ ಅರ್ಜಿ ಸಲ್ಲಿಸಿ 

ದೇಶದ ವಿವಿಧ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಇನ್ಸ್‌ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೆನಲ್ ಸೆಲೆಕ್ಷನ್ (IBPS) ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಆರ್‌ಆರ್‌ಬಿ (ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌)ಗಳಲ್ಲಿ ಕ್ಲರ್ಕ್ ಹಾಗೂ ಗ್ರೂಪ್ A ಅಧಿಕಾರಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 1,425 ಹುದ್ದೆಗಳು
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಒಟ್ಟು 1,425 ಹುದ್ದೆಗಳ ಭರ್ತಿ ನಡೆಯಲಿದ್ದು, ಅವುಗಳ ವಿವರ ಹೀಗಿದೆ:

  • ಆಫೀಸ್ ಅಸಿಸ್ಟೆಂಟ್ (ಕ್ಲರ್ಕ್): 800

  • ಸಹಾಯಕ ವ್ಯವಸ್ಥಾಪಕ (ಆಫೀಸರ್ ಸ್ಕೇಲ್-I): 500

  • ವ್ಯವಸ್ಥಾಪಕ (ಆಫೀಸರ್ ಸ್ಕೇಲ್-II): 125

ಅರ್ಹತೆ ಮತ್ತು ವಯೋಮಿತಿ:
ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

  • ಕ್ಲರ್ಕ್ ಹುದ್ದೆಗೆ: 18-28 ವರ್ಷ

  • ಆಫೀಸರ್ ಸ್ಕೇಲ್-I ಹುದ್ದೆಗೆ: 18-30 ವರ್ಷ

  • ಆಫೀಸರ್ ಸ್ಕೇಲ್-II ಹುದ್ದೆಗೆ: 21-32 ವರ್ಷ

ಪರಿಶಿಷ್ಟ ಜಾತಿ/ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನರಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಮೂರು ಹಂತಗಳಲ್ಲಿ ಆಯ್ಕೆ ಮಾಡಲಾಗುವುದು – ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ (ಬಹು ಆಯ್ಕೆ) ಮತ್ತು ಸಂದರ್ಶನ. ಜೊತೆಗೆ, ಅಭ್ಯರ್ಥಿಗಳು ಸ್ಥಳೀಯ ಭಾಷೆಯಲ್ಲಿ ಪಾರಂಗತರಾಗಿರಬೇಕು.

ಅರ್ಜಿ ಸಲ್ಲಿಕೆ ಮತ್ತು ಶುಲ್ಕ:
ಅಭ್ಯರ್ಥಿಗಳು ಐಬಿಪಿಎಸ್ ಅಧಿಕೃತ ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಪ.ಜಾ, ಪ.ಪಂ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹175, ಇತರೆ ಅಭ್ಯರ್ಥಿಗಳಿಗೆ ₹850 ನಿಗದಿಪಡಿಸಲಾಗಿದೆ.

ಅಂತಿಮ ದಿನಾಂಕ:
ಈ ಹುದ್ದೆಗಳಿಗೆ ಸೆಪ್ಟೆಂಬರ್ 1ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಸೆಪ್ಟೆಂಬರ್ 21 ಕೊನೆಯ ದಿನಾಂಕವಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow