ಗಮನಿಸಿ.. ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗವಕಾಶ..! ಇಂದೇ ಅರ್ಜಿ ಸಲ್ಲಿಸಿ

ಅಕ್ಟೋಬರ್ 14, 2024 - 08:14
 0  10
ಗಮನಿಸಿ.. ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗವಕಾಶ..! ಇಂದೇ ಅರ್ಜಿ ಸಲ್ಲಿಸಿ

ದೇಶಾದ್ಯಂತ ಸಾವಿರಾರು ಟೆಕ್ನೀಷಿಯನ್ನಗಳ ನೇಮಕಾತಿಗಾಗಿ ಭಾರತೀಯ ರೈಲ್ವೆ ಇಲಾಖೆಯ ಅಧೀನದಲ್ಲಿರುವ ನೇಮಕಾತಿ ಮಂಡಳಿಯು ಅಧಿಸೂಚನೆ ಪ್ರಕಟಿಸಿದೆ. ಹೀಗಾಗಿ ಅರ್ಹರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 

ರೈಲ್ವೆ ನೇಮಕಾತಿ ಮಂಡಳಿ ವತಿಯಿಂದ ಈ ನೇಮಕಾತಿ ನಡೆಯಲಿದ್ದು ಒಟ್ಟು 14,298 ಹುದ್ದೆಗಳು ಖಾಲಿ ಇವೆ. ಈ ಹಿಂದೆಯೂ ಈ ನೇಮಕಾತಿಗಾಗಿ 9 ಮಾರ್ಚ್, 2024 ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 2 ಅಕ್ಟೋಬರ್, 2024 ದಿನಾಂಕದಿಂದ ಪುನಃ ಅವಕಾಶ ನೀಡಲಾಗಿದೆ.

16 ಅಕ್ಟೋಬರ್, 2024 ಕೊನೆಯ ದಿನಾಂಕವಾಗಿದೆ. ಪರೀಕ್ಷಾ ಪ್ರವೇಶ ಕಾರ್ಡ್ ನವೆಂಬರ್ ತಿಂಗಳಲ್ಲಿ ನಿರೀಕ್ಷಿಸಲಾಗಿದೆ. ಇನ್ನು ನಿರೀಕ್ಷಿತ ಪರೀಕ್ಷಾ ದಿನಾಂಕ ಡಿಸೆಂಬರ್ ತಿಂಗಳಲ್ಲಿ ಬರುವ ಸಾಧ್ಯತೆಯಿದೆ. 

RRB ತಂತ್ರಜ್ಞರ ಹುದ್ದೆ ನೇಮಕಾತಿಗಾಗಿ ಈ ಹೆಚ್ಚಳ ಅಧಿಸೂಚನೆ ಹೆಚ್ಚಿನ ಮಾಹಿತಿಯು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್‌ಸೈಟ್ rrbapply.gov.in ನಲ್ಲಿ ಲಭ್ಯವಿದೆ. RRB ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ತಂತ್ರಜ್ಞ ಗ್ರೇಡ್ I ಮತ್ತು ಗ್ರೇಡ್ III ಹುದ್ದೆಗಳಿಗೆ 14,298 ಖಾಲಿ ಹುದ್ದೆಗಳನ್ನು ಪ್ರಕಟಿಸಿದೆ. ಈ ಹಿಂದೆ ಅಂದರೆ ಕಳೆದ್ ಮಾರ್ಚ್​​ ತಿಂಗಳಲ್ಲಿ ಘೋಷಿಸಲಾದ 9,144 ಹುದ್ದೆಗಳಿಗಿಂತ ಇದು ಗಮನಾರ್ಹ ಹೆಚ್ಚಳವಾಗಿದೆ. ಅದರಿಂದ ಉದ್ಯೋಗಾವಕಾಶವೂ ಹೆಚ್ಚಳವಾಗಿದೆ ಎಂದು ಭಾವಿಸಬಹುದಾಗಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow