ಕಾಂಗ್ರೆಸ್ ಹೈಕಮಾಂಡ್’ಗೆ ಧಮ್ ಇದ್ರೆ ಸಿಎಂ, ಡಿಸಿಎಂ ವಿರುದ್ಧ ತನಿಖೆಗೆ ಆದೇಶಿಸಿ: ಶೋಭಾ ಕರಂದ್ಲಾಜೆ

ಜೂನ್ 7, 2025 - 14:02
 0  14
ಕಾಂಗ್ರೆಸ್ ಹೈಕಮಾಂಡ್’ಗೆ ಧಮ್ ಇದ್ರೆ ಸಿಎಂ, ಡಿಸಿಎಂ ವಿರುದ್ಧ ತನಿಖೆಗೆ ಆದೇಶಿಸಿ: ಶೋಭಾ ಕರಂದ್ಲಾಜೆ

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್​’ ಗೆ ಧಮ್ಇದ್ರೆ ಸಿಎಂ, ಡಿಸಿಎಂ ವಿರುದ್ಧ ತನಿಖೆಗೆ ಆದೇಶಿಸಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ರು. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ನಿಮ್ಮ ಕೈಗೆ ರಕ್ತ ಅಂಟಿಕೊಂಡಿದೆ ಯಾವುದೇ ಕಾರಣಕ್ಕೂ ಅದನ್ನು ತೊಳೆದುಕೊಳ್ಳೋದಕ್ಕೆ ಸಾಧ್ಯವಿಲ್ಲ.

ಕಾಂಗ್ರೆಸ್ ಹೈಕಮಾಂಡ್ಗೆ ಧಮ್ ತಾಕತ್ ಇದ್ದರೆ ಇವರ ಮೇಲೆ ತನಿಖೆಗೆ ಆದೇಶಿಸಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಿಟ್ಟರೆ ನಿಮಗೆ ಬೇರೆ ಯಾರು ನಾಯಕರು ಇಲ್ವಾ? ವೇಣುಗೋಪಾಲ್, ಸುರ್ಜೇವಾಲಾ ಎಲ್ಲಿ ಅಡಗಿಕೊಂಡಿದ್ದೀರಿ ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದ್ರು.

ಇದಕ್ಕೆಲ್ಲಾ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನೇರ ಹೊಣೆ ಆಗಿದ್ದಾರೆ. ಮೊದಲು ಇವರಿಬ್ಬರು ರಾಜೀನಾಮೆ ಕೊಡಬೇಕುಆರ್ಸಿಬಿ ಮ್ಯಾನೇಜ್ಮೆಂಟ್ ಅವರನ್ನು ಅರೆಸ್ಟ್ ಮಾಡಿದ್ದಾರೆಹಾಗೇ ನಿಮ್ಮನ್ನು ಯಾಕೇ ಅರೆಸ್ಟ್ ಮಾಡಬಾರದು? ಎಲ್ಲದಕ್ಕೂ ಮೂಗು ತೂರಿಸೋ ಕಾಂಗ್ರೆಸ್ ಹೈಕಮಾಂಡ್ ಎಲ್ಲಿದ್ದೀರಪ್ಪಎಂದು ಕೇಂದ್ರ ಸಚಿವೆ ವಾಗ್ದಾಳಿ ನಡೆಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow