ಕಾಣದ ಕೈಗಳ ಕೈವಾಡ ಇದೆ, ಸಮಯ ಬರಲಿ ಮತ್ತೆ ಸಚಿವ ಸ್ಥಾನ ಪಡೆಯುತ್ತೇನೆ: ಕೆ.ಎನ್.ರಾಜಣ್ಣ
ತುಮಕೂರು:- ಕಾಣದ ಕೈಗಳ ಕೈವಾಡ ಇದೆ, ಸಮಯ ಬರಲಿ ಮತ್ತೆ ಸಚಿವ ಸ್ಥಾನ ಪಡೆಯುತ್ತೇನೆ ಎಂದು ಕೆ.ಎನ್.ರಾಜಣ್ಣ ಹೇಳಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಮಯ ಬಂದಾಗ ಇದೇ ಅವಧಿಯಲ್ಲಿ ಸಚಿವ ಸ್ಥಾನ ಮತ್ತೆ ಪಡೆಯುತ್ತೇನೆ. ಹೈಕಮಾಂಡ್ ಕನ್ವಿನ್ಸ್ ಆಗುತ್ತಾರೆ ಎಂಬ ವಿಶ್ವಾಸ ಇದೆ. ಕಳೆದ ವಾರ ಸಚಿವನಾಗಿ ಮಧುಗಿರಿಗೆ ಬಂದಿದ್ದೆ. ಈ ವಾರ ಮಾಜಿ ಸಚಿವನಾಗಿ ಬಂದಿದ್ದೇನೆ.
ಇದರಲ್ಲಿ ಯಾವುದೇ ವ್ಯತ್ಯಾಸ ನನಗೆ ಕಾಣುತ್ತಿಲ್ಲ. ಜನರ ಪ್ರೀತಿ-ವಿಶ್ವಾಸ ಒಂದಿದ್ದರೆ ಸಾಕು. ನಿನ್ನೆ ರಾತ್ರಿ ಜಿ ಪರಮೇಶ್ವರ್ ಕೂಡ ನನ್ನ ಮನೆಗೆ ಬಂದು ಕುಶಲೋಪರಿ ವಿಚಾರಿಸಿ ಹೋಗಿದ್ದಾರೆ. ಅಸೆಂಬ್ಲಿ ಮುಗಿದ ಬಳಿಕ ಹೈಕಮಾಂಡ್‌ಗೆ ಭೇಟಿ ಆಗಿ ಸತ್ಯ ವಿವರಿಸುತ್ತೇನೆ. ನನಗೆ ರಾಜಕೀಯ ಏಳು-ಬೀಳು ಹೊಸತಲ್ಲ. ಸಮಯ ಬಂದಾಗ ಮತ್ತೆ ಸಚಿವನಾಗುತ್ತೇನೆ. ಹೈಕಮಾಂಡ್ ಕನ್ವಿನ್ಸ್ ಆಗುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಶೂ ಭಾಗ್ಯ ನನ್ನ ಮನವಿ ಮೇರೆಗೆ ಜಾರಿ ಮಾಡಿದ್ದು. ರಾಹುಲ್ ಗಾಂಧಿ ಮತಗಳ್ಳತನ ವಿರುದ್ಧ ಹೋರಾಟ ಮಾಡುತ್ತಿದ್ದರು. ಸಿಟಿಯಲ್ಲಿ ಮತಗಳ್ಳತನ ಹೆಚ್ಚಾಗುತ್ತದೆ. ಗ್ರಾಮಾಂತರದಲ್ಲಿ ಮತಗಳ್ಳತನ ಆಗಲ್ಲ. ಆರ್‌ಎಸ್‌ಎಸ್ ನವರು ಬಹಳ ಪದ್ಧತಿ ಪೂರ್ವಕವಾಗಿ ಚುನಾವಣೆ ಮಾಡುತ್ತಾರೆ. ನಮ್ಮ ಕಾರ್ಯಕರ್ತರು ಮತಗಳ್ಳತನ ಕುರಿತಂತೆ ಎಚ್ಚರಿಕೆಯಿಂದ ಇರಬೇಕು. ಮತಗಳ್ಳತನದ ವಿರುದ್ಧದ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ಅಸೆಂಬ್ಲಿ ಮುಗಿದ ಬಳಿಕ ನಾನು ಹೈಕಮಾಂಡ್‌ಗೆ ಭೇಟಿಯಾಗಿ ವಿವರಿಸುತ್ತೇನೆ. ಆಗ ನನಗೆ ನೈಜ ಕಾರಣ ಗೊತ್ತಾಗುತ್ತದೆ ಎಂದರು.
ನಿಮ್ಮ ಪ್ರತಿಕ್ರಿಯೆ ಏನು?