ಕೋವಿಡ್ ಲಸಿಕೆ: ಹೃದಯಾಘಾತಕ್ಕೆ ನೇರ ಕಾರಣವಲ್ಲ: ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

ಜುಲೈ 7, 2025 - 16:01
 0  10
ಕೋವಿಡ್ ಲಸಿಕೆ: ಹೃದಯಾಘಾತಕ್ಕೆ ನೇರ ಕಾರಣವಲ್ಲ: ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

ಬೆಂಗಳೂರು: ಕರ್ನಾಟಕದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಜ್ಞರ ಸಮಿತಿಯಿಂದ ವರದಿ ಸ್ವೀಕರಿಸಿ ಮಾತನಾಡಿದರು. ಈ ವೇಳೆ, ಕೋವಿಡ್ ಲಸಿಕೆ ಹೃದಯಾಘಾತಕ್ಕೆ ನೇರ ಕಾರಣವಲ್ಲ ಎಂದು ಸ್ಪಷ್ಟಪಡಿಸಿದರು.

“ಹೃದಯಾಘಾತಕ್ಕೆ ಮಧುಮೇಹ, ರಕ್ತದೊತ್ತಡ, ದಪ್ಪತನ, ದೈಹಿಕ ಚಟುವಟಿಕೆ ಕೊರತೆ, ಹಾಗೂ ಜೀವನ ಶೈಲಿ ಪ್ರಮುಖ ಕಾರಣಗಳಾಗಿವೆ. ಲಸಿಕೆಗಿಂತ ಈ ಅಂಶಗಳು ಹೆಚ್ಚಿನ ಪರಿಣಾಮ ಬೀರುತ್ತಿವೆ,” ಎಂದರು.ಎಂಆರ್‌ಎನ್‌ಎ ವ್ಯಾಕ್ಸಿನ್ ಬಗ್ಗೆ ಕೆಲವು ಅನುಮಾನಗಳಿದ್ದರೂ, “ನಮ್ಮ ದೇಶದಲ್ಲಿ ಈ ಲಸಿಕೆ ಬಳಸಲಾಗಿಲ್ಲ. ಜಾಗತಿಕ ಅಧ್ಯಯನಗಳಲ್ಲಿ ಮಾತ್ರ ಈ ಕುರಿತು ಮಾಹಿತಿ ಲಭ್ಯವಿದೆ,” ಎಂದು ಹೇಳಿದರು.

ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಜಯದೇವ ಆಸ್ಪತ್ರೆ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ, ವರದಿ ನೀಡಲಾಗಿದ್ದು, ಕೋವಿಡ್ ಇತಿಹಾಸವಿದ್ದವರು ಹೃದಯಾಘಾತದ ಅಪಾಯಕ್ಕೆ ಹೆಚ್ಚು ಒಳಪಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow