ಖರ್ಗೆಗೆ ಸಿಎಂ ಆಗಲು ಅರ್ಹತೆ ಇದೆ, ರಾಜ್ಯ ರಾಜಕೀಯಕ್ಕೆ ಬಂದ್ರೆ ಸ್ವಾಗತ: ಅಜಯ್ ಸಿಂಗ್

ಬೆಂಗಳೂರು:- ಖರ್ಗೆಗೆ ಸಿಎಂ ಆಗಲು ಅರ್ಹತೆ ಇದೆ, ರಾಜ್ಯ ರಾಜಕೀಯಕ್ಕೆ ಬಂದ್ರೆ ಸ್ವಾಗತ ಎಂದು ಶಾಸಕ ಅಜಯ್ ಸಿಂಗ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕೀಯಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ. ನಾವು ಹೈಕಮಾಂಡ್ ಹೇಳಿದ ಹಾಗೆ ಕೇಳುತ್ತೇವೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಕೇಳಿದ್ದೇನೆ. ಖರ್ಗೆ ಅವರಿಗೆ ಸಿಎಂ ಆಗಲು ಅರ್ಹತೆ ಇದೆ. ಈಗ ಖರ್ಗೆ ಅವರು ಸಿಎಂ ಆಯ್ಕೆ ಮಾಡುವ ಸ್ಥಾನದಲ್ಲಿ ಇದ್ದಾರೆ. ಖರ್ಗೆ ಅವರು ಸಿಎಂ ಆಗುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದು ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದರು.
ಹೈಕಮಾಂಡ್ ಯಾರಿಗೆ ಸಿಎಂ ಅಂತ ಹೇಳುತ್ತೋ ಅವರಿಗೆ ನಾವು ಬೆಂಬಲ ಕೊಡುತ್ತೇವೆ. ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ. ಅವರು ರಾಜ್ಯಕ್ಕೆ ಬರಬೇಕಾ ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






