ಗೋಲ್ಡ್ ಪ್ರಿಯರಿಗೆ ಬಂಪರ್ ಸುದ್ದಿ: ಕುಸಿದ ಹಳದಿ ಲೋಹದ ಬೆಲೆ! ಗ್ರಾಂ ಎಷ್ಟು!?

ನವೆಂಬರ್ 18, 2024 - 21:09
 0  21
ಗೋಲ್ಡ್ ಪ್ರಿಯರಿಗೆ ಬಂಪರ್ ಸುದ್ದಿ: ಕುಸಿದ ಹಳದಿ ಲೋಹದ ಬೆಲೆ! ಗ್ರಾಂ ಎಷ್ಟು!?

ಗೋಲ್ಡ್ ಪ್ರಿಯರಿಗೆ ಬಂಪರ್ ಸುದ್ದಿ ಸಿಕ್ಕಿದ್ದು, ಹಳದಿ ಲೋಹದ ಬೆಲೆ ತೀವ್ರ ಕುಸಿದಿದೆ. ಈ ಮೂಲಕ ಚಿನ್ನದ ಪ್ರಿಯರು ಚಿನ್ನದಂತಹ ನಗೆ ಬೀರಿದ್ದಾರೆ.

ಮದುವೆಗಳು ನಡೆಯುವ ಕಾಲ ಇದಾಗಿರುವುದರಿಂದ ಬಂಗಾರದ ಬೆಲೆಯಲ್ಲಿ ಆಗುತ್ತಿರುವ ಇಳಿಕೆಯನ್ನು ಕಂಡು ಜನರು ಖುಷ್ ಆಗಿದ್ದಾರೆ. ಸದ್ಯ ಬಂಗಾರದ ಬೆಲೆ 10 ಗ್ರಾಂಗೆ 69,500 ರೂಪಾಯಿಗೆ ಇಳಿಕೆಯಾಗಿದೆ. ಭಾರತದಲ್ಲಿ ಸದ್ಯ 22 ಕ್ಯಾರೆಟ್ ಬಂಗಾರ 69,490 ರೂಪಾಯಿಗೆ ತಲುಪಿದೆ.ಗೋಲ್ಡ್​ ರಿಟರ್ನ್​ ವೆಬ್​​ಸೈಟ್ ಪ್ರಕಾರ 24 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂಗೆ 75,640 ರೂಪಾಯಿಯಷ್ಟು ಇತ್ತು. ಇನ್ನು 18 ಕ್ಯಾರೆಟ್ ಬಂಗಾರ ಪ್ರತಿ 10 ಗ್ರಾಂಗೆ 56, 730 ರೂಪಾಯಿಯಷ್ಟು ಭಾನುವಾರ ದಾಖಲಾಗಿತ್ತು

ಇದು ಬಂಗಾರದ ಬೆಲೆಯ ಬದಲಾವಣೆ ಆದರೆ, ಬೆಳ್ಳಿಯ ಬೆಲೆ ಇಂದು ಕೆಜಿಗೆ 89,400 ರೂಪಾಯಿಗೆ ಇಳಿಕೆಯಾಗಿದೆ.ಇನ್ನು ಯಾವ ಯಾವ ರಾಜ್ಯಗಳಲ್ಲಿ ಬಂಗಾರದ ಬೆಲೆ ಪ್ರತಿ ಗ್ರಾಂಗೆ ಎಷ್ಟು ಇದೆ ಎಂಬುದನ್ನು ನೋಡುವುದಾದ್ರೆ. ದೆಹಲಿಯಲ್ಲಿ ಪ್ರತಿ ಗ್ರಾಂ ಚಿನ್ನದ ದರ 6,949ರಷ್ಟಿದೆ,. ನೊಯ್ಡಾ ಹಾಗೂ ಲಖನೌನಲ್ಲಿ ದೆಹಲಿಯ ದರವೇ ಇದೆ. ಮುಂಬೈ, ಬೆಂಗಳೂರು ಹಾಗೂ ಚೆನ್ನೈನಲ್ಲಿ ದೆಹಲಿಗಿಂತ ಕಡಿಮೆಯಿದೆ. ಇಲ್ಲಿ ಪ್ರತಿ ಗ್ರಾಂ ಬಂಗಾರದ ಬೆಲೆ 6,934 ರೂಪಾಯಿಯಷ್ಟಿದೆ.

ಇನ್ನು ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ದೆಹಲ್ಲಿ 89,400 ರೂಪಾಯಿ ಇದ್ದರೆ ಹೈದ್ರಾಬಾದ್ ಬಿಟ್ಟು ಉಳಿದ ನಗರಗಳಲ್ಲಿ ಇದೇ ದರವಿದೆ. ಹೈದ್ರಾಬಾದ್​ನಲ್ಲಿ ಮಾತ್ರ ಪ್ರತಿ ಕೆಜಿ ಬೆಳ್ಳಿಯ ಬೆಲೆ 98,900 ರೂಪಾಯಿ ಇದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow