ಗ್ರಾಹಕರ ಗಮನಕ್ಕೆ: ನವೆಂಬರ್ʼನಲ್ಲಿ 11 ದಿನ ಬ್ಯಾಂಕ್ ರಜೆ; ಕರ್ನಾಟಕದಲ್ಲಿ ಎಷ್ಟು ದಿನ? ಇಲ್ಲಿ ತಿಳಿಯಿರಿ

ಅಕ್ಟೋಬರ್ 31, 2025 - 09:08
ಅಕ್ಟೋಬರ್ 30, 2025 - 17:12
 0  12
ಗ್ರಾಹಕರ ಗಮನಕ್ಕೆ: ನವೆಂಬರ್ʼನಲ್ಲಿ 11 ದಿನ ಬ್ಯಾಂಕ್ ರಜೆ; ಕರ್ನಾಟಕದಲ್ಲಿ ಎಷ್ಟು ದಿನ? ಇಲ್ಲಿ ತಿಳಿಯಿರಿ

 ಅಕ್ಟೋಬರ್‌ನಲ್ಲಿ ಭರ್ಜರಿ ರಜಾದಿನಗಳನ್ನು ಕಂಡ ಬ್ಯಾಂಕುಗಳಿಗೆ ನವೆಂಬರ್‌ನಲ್ಲಿ ಕೇವಲ 11 ದಿನಗಳ ರಜೆ ಇರುತ್ತದೆ. ಇದರಲ್ಲಿ ಶನಿವಾರ ಮತ್ತು ಭಾನುವಾರದ ನಿಯಮಿತ ರಜೆಗಳ ಜೊತೆಗೆ ಕೆಲವು ಪ್ರಾದೇಶಿಕ ಹಬ್ಬ ಹಾಗೂ ಉತ್ಸವಗಳ ವಿಶೇಷ ರಜೆಗಳೂ ಸೇರಿವೆ. ಆರ್‌ಬಿಐ ಕ್ಯಾಲೆಂಡರ್ ಪ್ರಕಾರ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ, ಹರ್ಯಾಣ ದಿನ ಹಾಗೂ ಪುದುಚೇರಿ ದಿನದ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಘೋಷಿಸಲಾಗಿದೆ.

 ನವೆಂಬರ್ 5ರಂದು ಗುರುನಾನಕ್ ಜಯಂತಿ ಹಾಗೂ ಕಾರ್ತಿಕ ಪೂರ್ಣಿಮೆಯ ಕಾರಣ ದೇಶದ ಬಹುತೇಕ ಭಾಗಗಳಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ. ಮೇಘಾಲಯದಲ್ಲಿ ನವೆಂಬರ್ 7ರಂದು ವಂಗಲಾ ಹಬ್ಬದ ರಜೆ, ಸಿಕ್ಕಿಂನಲ್ಲಿ ನವೆಂಬರ್ 11ರಂದು ಲಹಬಾಬ್ ಡುಚೆನ್ ಹಬ್ಬದ ರಜೆ ಇರುತ್ತದೆ. ಈ ತಿಂಗಳಲ್ಲಿ ಐದು ಶನಿವಾರ ಹಾಗೂ ಐದು ಭಾನುವಾರಗಳಿದ್ದು, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಬ್ಯಾಂಕ್ ರಜೆಗೆ ಒಳಪಟ್ಟಿವೆ.

 ಕರ್ನಾಟಕದಲ್ಲಿ ಒಟ್ಟು ಒಂಬತ್ತು ರಜಾದಿನಗಳು ಇರುತ್ತವೆ. ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ, ನವೆಂಬರ್ 5ರಂದು ಗುರುನಾನಕ್ ಜಯಂತಿ ಸೇರಿದಂತೆ ಶನಿವಾರ ಮತ್ತು ಭಾನುವಾರದ ರಜೆಗಳೂ ಸೇರಿವೆ. ಬ್ಯಾಂಕುಗಳ ಕಚೇರಿಗಳು ರಜಾದಿನಗಳಲ್ಲಿ ಮುಚ್ಚಿರುತ್ತಿದ್ದರೂ ಆನ್‌ಲೈನ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಹಾಗೂ ಎಟಿಎಂ ಸೇವೆಗಳು ನಿರಂತರವಾಗಿ ಲಭ್ಯವಿರುತ್ತವೆ. ಗ್ರಾಹಕರು ನಗದು ಠೇವಣಿ, ಖಾತೆ ತೆರೆಯುವುದು, ಆರ್‌ಟಿಜಿಎಸ್‌ ಟ್ರಾನ್ಸ್‌ಫರ್‌ ಮೊದಲಾದ ಕಾರ್ಯಗಳಿಗೆ ಬ್ಯಾಂಕ್ ತೆರೆಯುವವರೆಗೂ ಕಾಯಬೇಕಾಗುತ್ತದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow