ಟೀಂ ಇಂಡಿಯಾ ಆಟಗಾರನ ದಾಂಪತ್ಯದಲ್ಲಿ ಬಿರುಕು! ಚಹಾಲ್-ಧನಶ್ರೀ ಡಿವೋರ್ಸ್! ಅನುಮಾನಗಳು ನಿಜವಾಯ್ತಾ..?

ಟೀಂ ಇಂಡಿಯಾ ಲೆಗ್ಸ್ಪಿನ್ನರ್ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ, ಸಾಕಷ್ಟು ದಿನಗಳ ಡೇಟಿಂಗ್ ಬಳಿಕ 2020ರ ಡಿಸೆಂಬರ್ 22ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದು ಅಭಿಮಾನಿಗಳನ್ನು ಅಚ್ಚರಿಗೀಡು ಮಾಡಿತ್ತು. ಚಹಲ್ ಹಾಗೂ ಧನಶ್ರೀ ಡೇಟಿಂಗ್ ನಡೆಸುತ್ತಿದ್ದರೂ ಸಹಾ, ಈ ಗುಟ್ಟನ್ನು ಅಷ್ಟು ಸುಲಭವಾಗಿ ಬಿಟ್ಟುಕೊಟ್ಟಿರಲಿಲ್ಲ. ಈ ಇಬ್ಬರು 2020ರ ಆಗಸ್ಟ್ ತಿಂಗಳಿನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡು, ಕೆಲವೇ ತಿಂಗಳ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
2020ರಲ್ಲಿ ಯೂಟ್ಯೂಬರ್, ಡ್ಯಾನ್ಸರ್ ಹಾಗೂ ಕೊರಿಯೋಗ್ರಾಫರ್ ಆಗಿದ್ದ ಧನಶ್ರೀ ವರ್ಮಾ ಅವರನ್ನು ವಿವಾಹವಾದ ಬಳಿಕ ಕೂಡಾ ಒಟ್ಟಾಗಿಯೇ ಸಾಕಷ್ಟು ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದರು. ಯುಜುವೇಂದ್ರ ಚಹಲ್, ಐಪಿಎಲ್ ಟೂರ್ನಿಯಲ್ಲಿ ಹಾಗೂ ಅಂತಾರಾಷ್ಟ್ರೀಯ ಸರಣಿಗಳಲ್ಲಿ ಪಾಲ್ಗೊಂಡಾಗಲೆಲ್ಲಾ ಧನಶ್ರೀ ವರ್ಮಾ, ಮೈದಾನಕ್ಕೆ ತೆರಳಿ ಪತಿ ಚಹಲ್ ಅವರನ್ನು ಹುರಿದುಂಬಿಸುತ್ತಿದ್ದರು.
ಇದೆಲ್ಲದರ ನಡುವೆ ದಾಂಪತ್ಯ ಜೀವನ ಮುರಿದುಬಿತ್ತಾ ಎಂಬ ಅನುಮಾನ ಶುರುವಾಗಿದೆ. ಕಳೆದ ಕೆಲ ವರ್ಷಗಳಿಂದಲೂ ಚಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕುಬಿಟ್ಟಿದೆ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು. ಇದೀಗ ಅಚ್ಚರಿಯ ಎಂಬಂತೆ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಇಬ್ಬರು ಇನ್ಸ್ಟಾಗ್ರಾಂನಲ್ಲಿ ಒಬ್ಬರಿಗೊಬ್ಬರು ಅನ್ಫಾಲೋ ಮಾಡಿದ್ದಾರೆ.
ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಚಹಲ್ ತಮ್ಮ ಪತ್ನಿಯ ಇಬ್ಬರು ಜತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಕೆಲವು ದಿನಗಳಿಂದ ಹರಿದಾಡುತ್ತಿದ್ದ ವಿಚ್ಛೇದನದ ವದಂತಿಗಳಿಗೆ ಮತ್ತಷ್ಟು ಬಲ ಬರುವಂತೆ ಮಾಡಿದೆ. ಆದರೆ ಧನ್ರಶ್ರೀ ವರ್ಮಾ ತಮ್ಮ ಪತಿ ಚಹಲ್ ಜತೆಗಿನ ಫೋಟೋಗಳನ್ನು ಡಿಲೀಟ್ ಮಾಡಿಲ್ಲ.
ಕಳೆದ ವರ್ಷ ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ದಂಪತಿಗಳು ವಿಚ್ಛೇದನ ಪಡೆದಿದ್ದರು. ಮಾಜಿ ಕ್ರಿಕೆಟಿಗ ಶಿಖರ್ ಧವನ್ ಕೂಡ ತಮ್ಮ ಮಡದಿಯಿಂದ ಬೇರೆಯಾಗಿದ್ದರು. ಇವರಲ್ಲದೆ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲ್ಲಿಕ್ ಕೂಡ ವಿಚ್ಛೇದನ ಪಡೆದಿದ್ದರು. ಇದೀಗ ಒಂದು ವೇಳೆ ಈಗ ಹರಿದಾಡುತ್ತಿರುವ ಸುದ್ದಿ ನಿಜವಾದರೆ ಈ ವರ್ಷ ವಿಚ್ಛೇದನ ಪಡೆದ ಮೊದಲ ಸ್ಟಾರ್ ಜೋಡಿ ಇದಾಗಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






