ಡಾಲಿಗೆ ಮದುವೆ ಸಂಭ್ರಮ: ಫ್ಯಾನ್ಸ್, ಗಣ್ಯರಿಗೆ ಒಂದೇ ಭೋಜನ.. ಊಟದ ಮೆನುವಿನಲ್ಲೇನಿದೆ?

ಫೆಬ್ರವರಿ 15, 2025 - 13:58
 0  28
ಡಾಲಿಗೆ ಮದುವೆ ಸಂಭ್ರಮ: ಫ್ಯಾನ್ಸ್, ಗಣ್ಯರಿಗೆ ಒಂದೇ ಭೋಜನ.. ಊಟದ ಮೆನುವಿನಲ್ಲೇನಿದೆ?

ಡಾಲಿ ಧನಂಜಯ್ ಹಾಗೂ ಡಾಕ್ಟರ್ ಧನ್ಯತಾಗೆ ಮದುವೆ ಸಂಭ್ರಮ ಮನೆ ಮಾಡಿದೆ. ಡಾಲಿ ಧನಂಜಯ್ ಮದುವೆ ಬಲು ಅದ್ಧೂರಿಯಾಗಿ ಮೈಸೂರಿನಲ್ಲಿ ನಡೆಯುತ್ತಿದೆ. ನಾಳೆ ಮಾಂಗಲ್ಯ ಧಾರಣೆ ಇದ್ದು, ಇಂದು ವಿವಿಧ ಶಾಸ್ತ್ರಗಳು ಮತ್ತು ಸಂಜೆ ಆರತಕ್ಷತೆ ಸಮಾರಂಭ ಇದೆ. ಹಲವಾರು ಮಂದಿ ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳ ಜೊತೆಗೆ ಡಾಲಿ ಧನಂಜಯ್ ಅಭಿಮಾನಿಗಳು ಸಹ ವಿವಾಹಕ್ಕೆ ಆಗಮಿಸಲಿದ್ದಾರೆ. ಬಂದ ಅತಿಥಿಗಳ ಹೊಟ್ಟೆ ತುಂಬಿಸಲು ಈಗಾಗಲೇ ತಯಾರಿ ಆರಂಭವಾಗಿದೆ. 

ಇಂದು ಸಂಜೆ ನವಜೋಡಿಯ ಆರಕ್ಷತೆ ನಡೆಯುತ್ತಿದ್ದು, ಗಣ್ಯರು, ಕುಟುಂಬಸ್ಥರು, ಅಭಿಮಾನಿಗಳಿಗಾಗಿ ಬಗೆ ಬಗೆಯ ಖಾದ್ಯಗಳನ್ನು ತಯಾರು ಮಾಡಲಾಗುತ್ತಿದೆ.

ಇಂದು ಸಂಜೆ ಆರತಕ್ಷತೆಯಲ್ಲಿ ಭಾಗಿಯಾಗುವ ಅಭಿಮಾನಿಗಳು, ಕುಟುಂಬಸ್ಥರು, ಗಣ್ಯರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಸಂಜೆ 7 ಗಂಟೆಯಿಂದ ರಾತ್ರಿ 11 ಗಂಟೆವರೆಗೂ 30 ಸಾವಿರಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಕುಟುಂಬಸ್ಥರು, ಫ್ಯಾನ್ಸ್, ವಿಐಪಿಗಳಿಗೆ ಪ್ರತ್ಯೇಕ ಊಟ ಕೌಂಟರ್ ತೆರೆಯಲಾಗಿದೆ. ಆದರೆ ಎಲ್ಲರಿಗೂ ಒಂದೇ ಊಟದ ಮೆನು ತಯಾರಾಗುತ್ತಿದೆ.

ಅಭಿಮಾನಿಗಳಿಗೆ ಒಟ್ಟು 6 ಕೌಂಟರ್‌ ಮೂಲಕ ಬಫೆ ಸಿಸ್ಟಂ ಭೋಜನ ತಯಾರು ಮಾಡಲಾಗುತ್ತಿದೆ. ಯಾರಿಗಾದ್ರೂ ನಿಂತೂ ಊಟ ಮಾಡಲು ಆಗದ ವೃದ್ದರಿಗೆ, ಮಹಿಳೆಯರಿಗೆ ಕುಳಿತು ಊಟ ಮಾಡಲು 500 ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಒಂದೇ ಬಾರಿ 4000 ಜನರು ಊಟ ಮಾಡಬಹುದಾಗಿದ್ದು, ಗಣ್ಯರಿಗೆ, ಕುಟುಂಬಸ್ಥರಿಗೆ ಕುಳಿತು ಊಟ ಮಾಡಲು ಪ್ರತ್ಯೇಕ ವ್ಯವಸ್ಥೆ ಇದೆ.

ಹೋಳಿಗೆ, ತುಪ್ಪ, ಪಾಯಸ, ಮಸಾಲೆ ದೋಸೆ, ಚಟ್ನಿ, ರುಮಾಲಿರೋಟಿ, ಪನ್ನೀರ್ ಗ್ರೇವಿ, ಬೇಬಿ ಕಾರ್ನ್ ಮಂಚೂರಿ, ಬೆಂಡೆಕಾಯಿ ಪ್ರೈ , ಅನ್ನಸಾಂಬಾರ್, ರಸಂ, ಮಜ್ಜಿಗೆ, ಪಲ್ಯ, ಬಾಳೆ ಹಣ್ಣು, ಐಸ್ ಕ್ರೀಂ.

ಮದುವೆ ಊಟದ ಮೆನು
ಬೆಳಗ್ಗೆ ತಿಂಡಿ: ಕೇಸರಿ ಬಾತ್, ಇಡ್ಲಿ ಸಾಂಬಾರ್ ವಡೆ, ಖಾರಬಾತ್, ಸಿಹಿ.
ಊಟ: ಕೋಸಂಬರಿ, ಎರಡು ರೀತಿ ಪಲ್ಯ, ಪಾಯಸ, ಚಿರೋಟಿ, ಲಾಡು, ವೆಜ್ ಬೋಂಡಾ. ಅಕ್ಕಿರೊಟ್ಟಿ ಎಣ್ಣೆಗಾಯಿ, ರೈತ, ವೆಜ್ ಪಲಾವ್. ಅನ್ನ ಸಾಂಬಾರ್, ರಸಂ, ಮಜ್ಜಿಗೆ, ಬಾಳೆಹಣ್ಣು, ಐಸ್ ಕ್ರೀಂ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow