ತೊಗರಿ ಬೇಳೆ ಸೇವಿಸುವ ಮುನ್ನ ಎಚ್ಚರ: ಕ್ಯಾನ್ಸರ್ ಕಾರಕ ಅಂಶ ಪತ್ತೆ.!

ಮಾರ್ಚ್ 16, 2025 - 18:36
 0  16
ತೊಗರಿ ಬೇಳೆ ಸೇವಿಸುವ ಮುನ್ನ ಎಚ್ಚರ: ಕ್ಯಾನ್ಸರ್ ಕಾರಕ ಅಂಶ ಪತ್ತೆ.!

ನಾವು ಸೇವಿಸುವ ಎಲ್ಲ ಬಗೆಯ ಆಹಾರ ಪದಾರ್ಥಗಳಲ್ಲಿ ಕಾಳುಗಳಿಗೆ ಹಾಗೂ ಬೇಳೆಗಳಿಗೆ ವಿಶೇಷವಾದ ಸ್ಥಾನಮಾನವಿದೆಮನೆಯಲ್ಲಿ ತಯಾರು ಮಾಡುವ ವಿವಿಧ ಬಗೆಯ ಖಾದ್ಯಗಳಿಗೆ ನಾವು ಬಗೆ ಬಗೆಯ ಬೇಳೆಗಳನ್ನು ಬಳಕೆ ಮಾಡುತ್ತೇವೆ. ಅದರಲ್ಲಿ ಕೆಂಪು ಬಣ್ಣದ ಬೇಳೆ ಕಾಳುಗಳು ಅತಿ ಹೆಚ್ಚಿನ ಪ್ರಮಾಣದ ನಾರಿನ ಅಂಶ ಪ್ರೊಟೀನ್ ಅಂಶ ವಿಟಮಿನ್ ಮತ್ತು ಖನಿಜಾಂಶಗಳನ್ನು ನಮಗೆ ಒದಗಿಸುತ್ತವೆ ಎಂದು ಹೇಳಲಾಗಿತ್ತು, ಆದ್ರೆ ಇದೀಗ ಶಾಕಿಂಗ್ ಮಾಹಿತಿ ಬೆಳಕಿಗೆ ಬಂದಿದೆ.

ಕೇಸರಿ ಬೇಳೆ ಸೇವನೆಯಿಂದ ಲ್ಯಾಥರಿಸಂ ಎಂಬ ಅಂಗವೈಕಲ್ಯತೆಗೆ ಕಾರಣವಾಗಬಲ್ಲ ಗಂಭೀರ ನರರೋಗ ಹಾಗೂ ಕ್ಯಾನ್ಸರ್ಉಂಟಾಗುವ ಸಾಧ್ಯತೆಯಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ಮಹಾರಾಷ್ಟ್ರದ ಗುಡ್ಡಗಾಡು ಪ್ರದೇಶ ಹಾಗೂ ಉತ್ತರ ಭಾರತದ ಕೆಲಕಡೆ ಹೇರಳವಾಗಿ ಬೆಳೆಯುವ ಕೇಸರಿ ಬೇಳೆಯನ್ನು ನಾಟಿ ಬೇಳೆ ಎಂದು ಹೇಳಿ ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ

ಜತೆಗೆ ತೊಗರಿ ಬೇಳೆಯಲ್ಲೂ ಮಿಶ್ರಣ ಮಾಡಲಾಗುತ್ತಿದೆ. ವೇಳೆ ಅಸಲಿ ಬೇಳೆಗೂ, ಕಲಬೆರಕೆ ಬೇಳೆಗೂ ಇರುವ ವ್ಯತ್ಯಾಸ ಗೊತ್ತಾಗದಂತೆ ಕೇಸರಿ ಬೇಳೆಗೆ ಹಳದಿ ಬಣ್ಣ ಬರುವಂತೆ ಟಾಟ್ರಾಜಿನ್ (-102) ಬಣ್ಣ ಮಿಶ್ರಣ ಮಾಡಲಾಗುತ್ತಿದೆ. ಬಣ್ಣ ಕ್ಯಾನ್ಸರ್ ಕಾರಕ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಡಿಮೆ ಬೆಲೆಗೆ ಸಿಗುವ ಕೇಸರಿ ಬೇಳೆ ತಂದು ತೊಗರಿ ಬೇಳೆಯಲ್ಲಿ ಬೆರಕೆ ಮಾಡುವ ಅಥವಾ ಕೇಸರಿ ಬೇಳೆಯನ್ನೇ ತೊಗರಿ ಬೇಳೆ ಅಥವಾ ಮಸೂರ್ ಬೇಳೆ ಎಂದು ಮಾರಾಟ ಮಾಡುವ ದಂಧೆ ನಮ್ಮಲ್ಲೂ ಚಾಲ್ತಿಯಲ್ಲಿದೆ ಎಂದು ಹೇಳಲಾಗಿದೆ.

ಏನಿದು ಕೇಸರಿ ಬೇಳೆ?: ಕೇಸರಿ ಬೇಳೆ ಬಣ್ಣ ಹಾಗೂ ಆಕಾರದಲ್ಲಿ ತೊಗರಿ ಬೇಳೆಯನ್ನೇ ಹೋಲುತ್ತದೆ. ಆದರೆ ಅದು ವಿಷಕಾರಿ ಅಂಶಗಳಿಂದ ಕೂಡಿರುತ್ತದೆ. ಇದು ಒಂದು ಕಳೆ ಬೆಳೆಯಾಗಿದ್ದು, ಕಾಡಿನಲ್ಲಿ ಬೆಳೆಯುತ್ತದೆ. ಕೇಸರಿ ಬೇಳೆಯನ್ನು ನಿರಂತರವಾಗಿ ಸೇವಿಸುವುದರಿಂದ ವ್ಯಕ್ತಿಯು ಲ್ಯಾಥರಿಸಂ ಕಾಯಿಲೆಗೆ ತುತ್ತಾಗಬಹುದು. ಎರಡೂ ಕಾಲುಗಳ ನರ ಹಾಗೂ ಮಾಂಸಖಂಡಗಳ ಮೇಲೆ ಸರಿಪಡಿಸಲಾಗದ ನ್ಯೂನತೆ ಉಂಟಾಗುತ್ತದೆ. ಇದು ಶಾಶ್ವತ ಅಂಗವೈಕಲ್ಯಕ್ಕೂ ಕಾರಣವಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಕಲಬೆರಕೆ ಗುರುತಿಸುವ ಬಗೆ ಹೇಗೆ?

ನಾವು ಖರೀದಿಸುವ ಬೇಳೆ ತೊಗರಿ ಬೇಳೆಯಲ್ಲಿ ಕಲಬೆರಕೆ ಆಗಿದೆಯೇ, ಇಲ್ಲವೇ ಎಂಬುದನ್ನು ಪರೀಕ್ಷಿಸಲು ಸುಮಾರು 10 ಗ್ರಾಂ. ಬೇಳೆಯಲ್ಲಿ 25 ಮಿಲಿ ಲೀಟರ್ನಷ್ಟು ಶುದ್ಧ ನೀರು ಹಾಕಬೇಕು. ಅದಕ್ಕೆ 5 ಮಿಲಿ ಲೀಟರ್ನಷ್ಟು ಪ್ರಬಲ ಹೈಡ್ರೊಕ್ಲೋರಿಕ್ ಆಮ್ಲ ಹಾಕಿ ಸಣ್ಣಗೆ ಕುದಿಸಬೇಕು. ಆಗ ನೀರಿನ ಬಣ್ಣ ಬದಲಾದರೆ ಅದು ಕೇಸರಿ ಬೇಳೆ. ಜತೆಗೆ ಕೇಸರಿ ಬೇಳೆ ಇಳಿಜಾರು ತುದಿ ಹೊಂದಿದ್ದು, ಚೌಕಾಕಾರದಲ್ಲಿರುತ್ತದೆ ಎನ್ನುತ್ತಾರೆ ಆಹಾರ ತಜ್ಞರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow