ದರ್ಶನ್ ಅರೆಸ್ಟ್ ಬಳಿಕ ಮೌನಕ್ಕೆ ಶರಣಾದ ವಿಜಯಲಕ್ಷ್ಮೀ! ಮೊದಲ ಪೋಸ್ಟ್ ವೈರಲ್
ನಟ ದರ್ಶನ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಮಧ್ಯಂತರ ಜಾಮೀನು ಪಡೆದು ಹಲವು ಷರತ್ತುಗಳನ್ನು ಉಲ್ಲಂಘಿಸಿರೋದು ಇದಕ್ಕೆ ಕಾರಣ. ಬೆನ್ನು ನೋವು ಎಂದು ವಿಚಾರಣೆಗೆ ಗೈರು ಹಾಜರಾಗಿದ್ದರೂ, ಸಿನಿಮಾ ಪ್ರದರ್ಶನದಲ್ಲಿ ಭಾಗಿ ಆಗಿದ್ದರು. ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಂಕಾಗಿ ಕುಳಿತಿದ್ದಾರೆ.
ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಷಿವ್ ಆಗಿರುವ ವಿಜಯಲಕ್ಷ್ಮಿ, ದರ್ಶನ್ ಜೈಲಿಗೆ ಸೇರಿದ ಬಳಿಕ ಮೊದಲ ಪೋಸ್ಟ್ ಶೇರ್ ಮಾಡಿದ್ದಾರೆ. ದರ್ಶನ್ ಫೋಟೋವನ್ನ ಹಂಚಿಕೊಂಡಿದ್ದು, ಈ ಫೋಟೋದಲ್ಲಿ ನಟ ದರ್ಶನ್ ಏಕಾಂಗಿಯಾಗಿ ನಿಂತಿದ್ದಾರೆ. ಇದಕ್ಕೆ ವಿಜಯಲಕ್ಷ್ಮಿ ಹಾರ್ಟ್ ಬ್ರೇಕ್ ಇಮೋಜಿ ಕೂಡ ಹಾಕಿದ್ದಾರೆ.
ಈ ಫೋಟೋ ನೋಡಿದ ದರ್ಶನ್ ಅಭಿಮಾನಿಗಳ ಹಾರ್ಟ್ ಬ್ರೇಕ್ ಆಗಿದೆ. ಅತ್ತಿಗೆ ಕುಗ್ಗದಿರಿ ಅಂತ ದರ್ಶನ್ ಅಭಿಮಾನಿಗಳು ಕಮೆಂಟ್ ಮಾಡ್ತಿದ್ದಾರೆ. ಅಣ್ಣನಿಗೆ ಒಳ್ಳೆಯ ಕಾಲ ಬರುತ್ತೆ ಎಂದು ಫ್ಯಾನ್ಸ್ ವಿಜಯಲಕ್ಷ್ಮಿಗೆ ಧೈರ್ಯ ತುಂಬುವ ಕೆಲಸ ಮಾಡ್ತಿದ್ದಾರೆ. ಪತಿ ದರ್ಶನ್ಗಾಗಿ ವಿಜಯಲಕ್ಷ್ಮಿ ಮಾಡದ ಪೂಜೆ ಇಲ್ಲ.
ಕಟ್ಟದ ಹರಕೆ ಇಲ್ಲ. ದರ್ಶನ್ ಜೈಲು ಸೇರಿದ ಬಳಿಕ ಶಕ್ತಿ ದೇವತೆಗಳ ಮೊರೆ ಹೋಗಿದ್ದ ವಿಜಯಲಕ್ಷ್ಮಿ ನಾನಾ ದೇವರಿಗೆ ಹರಕೆ ಕಟ್ಟಿದ್ರು. ವಿಶೇಷ ಪೂಜೆ ಸಲ್ಲಿಸಿದ್ರು. ಪತಿಯನ್ನ ಸಂಕಷ್ಟದಿಂದ ಪಾರು ಮಾಡಲು ದೇವರ ಮೊರೆ ಹೋಗಿದ್ರು. ಆದ್ರೆ ಕಷ್ಟ ತಪ್ಪಿಲ್ಲ. ಇದೀಗ ಮತ್ತೆ ವಿಜಯಲಕ್ಷ್ಮಿ ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?