ಧರ್ಮಸ್ಥಳ ಕೇಸ್́ಗೆ ಟ್ವಿಸ್ಟ್: ಪ್ರಕರಣವನ್ನೇ ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋದ ಬುರುಡೆ ಗ್ಯಾಂಗ್!
ಬೆಂಗಳೂರು: ಧರ್ಮಸ್ಥಳ ವಿರುದ್ಧ ಷಡ್ಯಂತ್ರ ರೂಪಿಸಿ, ನೂರಾರು ಶವ ಹೂತಿಟ್ಟಿದ್ದಾರೆ ಎಂದು ಆರೋಪಮಾಡಿದ್ದ ಬುರುಡೆ ಗ್ಯಾಂಗ್ ಇದೀಗ ಕಂಗಾಲಾಗಿದೆ. ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ಕೊನೆಯ ಪ್ರಯತ್ನವಾಗಿ ಹೈಕೋರ್ಟ್ ಮೆಟ್ಟಿಲೇರಿರುವುದು ಇದೀಗ ಬಹಿರಂಗವಾಗಿದೆ.
ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳು, ಬಾಲಕಿಯರ ಶವಗಳು ಮತ್ತು ಮಹಿಳೆಯರ ಶವಗಳನ್ನು ಚಿನ್ನಯ್ಯ ಹೂತಿದ್ದಾನೆ, ಧರ್ಮಸ್ಥಳದ ಪ್ರಮುಖರ ಸೂಚನೆಯ ಮೇರೆಗೆ ಈ ಕೆಲಸ ನಡೆದಿದೆ ಎಂದು ತಾವೇ ದೂರನ್ನು ನೀಡಿದ್ದ ಬುರುಡೆ ಗ್ಯಾಂಗ್ ಇದೀಗ ಆ ದೂರನ್ನೇ ವಜಾಗೊಳಿಸಲು ಹೈಕೋರ್ಟ್‌ಗೆ ಮನವಿ ಮಾಡಿದೆ.
ತಾವೇ ತೋಡಿಕೊಂಡ ಗುಂಡಿಯಲ್ಲಿ ಬುರುಡೆ ಗ್ಯಾಂಗ್ ಬಿದ್ದಂತಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ತಮ್ಮಿಂದಲೇ ದಾಖಲಾಗಿದ್ದ ಮೂಲ ಪ್ರಕರಣವನ್ನು ರದ್ದುಗೊಳಿಸುವಂತೆ ತಿಮರೋಡಿ, ಜಯಂತ್, ಗಿರೀಶ್ ಮಟ್ಟಣ್ಣವರ್ ಮತ್ತು ವಿಠಲ್ ಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ಎಸ್‌ಐಟಿ ಈ ಪ್ರಕರಣದಲ್ಲಿ ವಿಚಾರಣೆಗೆ ನೋಟಿಸ್ ನೀಡಿತ್ತು. ವಿಚಾರಣೆಗೆ ಹಾಜರಾದಲ್ಲಿ ಬಂಧನ ಸಾಧ್ಯತೆ ಇರುವ ಕಾರಣದಿಂದ, ಬುರುಡೆ ಗ್ಯಾಂಗ್ ಈಗ ಕೇಸನ್ನು ರದ್ದುಗೊಳಿಸುವ ಪ್ರಯತ್ನ ನಡೆಸಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಅರ್ಜಿ ಸಲ್ಲಿಸಿದ ಬುರುಡೆ ಗ್ಯಾಂಗ್ ಸದಸ್ಯರು, “ಎಸ್‌ಐಟಿ ತನಿಖೆ ಕುರಿತು ಅಸಮಾಧಾನವಿದೆ” ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಇದೇ ಬುರುಡೆ ಗ್ಯಾಂಗ್ ಆರಂಭಿಕ ಹಂತದಲ್ಲಿ ಎಸ್‌ಐಟಿ ತನಿಖೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಿತು. ಇದೀಗ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿರುವುದು ಅವರ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಧರ್ಮಸ್ಥಳ ವಿರುದ್ಧ ಭಾರಿ ಷಡ್ಯಂತ್ರ ರೂಪಿಸಿದ್ದ ಆರೋಪಕ್ಕೆ ಒಳಪಟ್ಟಿರುವ ಬುರುಡೆ ಗ್ಯಾಂಗ್ ಈಗ ಪರೋಕ್ಷವಾಗಿ ಎಸ್‌ಐಟಿ ತನಿಖೆಯನ್ನೇ ರದ್ದುಪಡಿಸಲು ಯತ್ನಿಸುತ್ತಿದೆ ಎಂಬ ಶಂಕೆಗಳು ವ್ಯಕ್ತವಾಗುತ್ತಿವೆ. ತನಿಖೆ ತಮ್ಮ ವಿರುದ್ಧ ತಿರುಗುತ್ತಿದ್ದಂತೆಯೇ ಬುರುಡೆ ಗ್ಯಾಂಗ್ ಬಂಧನದಿಂದ ತಪ್ಪಿಸಿಕೊಳ್ಳಲು ನಾಟಕವಾಡುತ್ತಿದೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?