ಧರ್ಮಸ್ಥಳ ಕೇಸ್‌ ಬಗ್ಗೆ ವೀರೇಂದ್ರ ಹೆಗ್ಗಡೆ ಫಸ್ಟ್ ರಿಯಾಕ್ಷನ್ ಏನೂ ಗೊತ್ತಾ..?

ಆಗಸ್ಟ್ 19, 2025 - 18:11
 0  20
ಧರ್ಮಸ್ಥಳ ಕೇಸ್‌ ಬಗ್ಗೆ ವೀರೇಂದ್ರ ಹೆಗ್ಗಡೆ ಫಸ್ಟ್ ರಿಯಾಕ್ಷನ್ ಏನೂ ಗೊತ್ತಾ..?

ಧರ್ಮಸ್ಥಳ: ರಾಜ್ಯ ಮಾತ್ರವಲ್ಲ, ದೇಶವನ್ನೇ ಕಂಗೊಳಿಸಿದ ಧರ್ಮಸ್ಥಳ ತಲೆಬುರುಡೆ ಪ್ರಕರಣ ಕುರಿತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

ಇದು ಸಂಪೂರ್ಣವಾಗಿ ವ್ಯವಸ್ಥಿತ ಷಡ್ಯಂತ್ರ. ಕ್ಷೇತ್ರದ ಇತಿಹಾಸ, ಗೌರವವನ್ನು ಹಾಳು ಮಾಡಲು ಅನಾವಶ್ಯಕ ಪ್ರಯತ್ನ ನಡೆದಿದೆ. ಹಿಂದೆಂದೂ ಕ್ಷೇತ್ರದ ಬಗ್ಗೆ ಇಂತಹ ಸಂಚುಗಳು ನಡೆದಿವೆ ಎಂದು ಹೆಗ್ಗಡೆ ಹೇಳಿದರು.

ಎಸ್ಐಟಿ ತನಿಖೆಯನ್ನು ಸ್ವಾಗತಿಸಿರುವ ಅವರು, ಸತ್ಯಾಸತ್ಯತೆ ಹೊರಬರಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಜನರಲ್ಲಿ ಬೇಸರ ಉಂಟಾಗಿದೆ. ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕುಎಂದು ಆಗ್ರಹಿಸಿದರು. ಆರೋಪಗಳು ನಡೆದಿದ್ದರೂ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಇಲ್ಲ. ಭಕ್ತರು ದೇಶದ ನಾನಾ ಭಾಗಗಳಿಂದ ಧರ್ಮಸ್ಥಳಕ್ಕೆ ಬರುತಿದ್ದಾರೆ ಎಂದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow