Rashmika Mandanna: ರಶ್ಮಿಕಾ ಹಾಟ್ ಅವತಾರ ನೋಡಿದ ಫ್ಯಾನ್ಸ್ ಫುಲ್ ಥ್ರಿಲ್! “Thama” ಟೀಸರ್ ಔಟ್
ನಟಿ ರಶ್ಮಿಕಾ ಮಂದಣ್ಣ ಅಭಿನಯದ ಹೊಸ ಹಿಂದಿ ಹಾರರ್ ಸಿನಿಮಾ ‘ಥಮ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇದುವರೆಗೂ ಬಬ್ಲಿ ಹಾಗೂ ರೊಮ್ಯಾಂಟಿಕ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ, ಈ ಬಾರಿ ಮೊದಲ ಬಾರಿಗೆ ಪ್ರೇತದ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾದಲ್ಲಿ ರಶ್ಮಿಕಾ ಭಯ ಹುಟ್ಟಿಸುವ ದೆವ್ವವಲ್ಲ, ಬದಲಿಗೆ ಪ್ರೀತಿ ಮೂಡಿಸುವ ಗ್ಲಾಮರಸ್ ದೆವ್ವವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಯುಷ್ಮಾನ್ ಖುರಾನಾ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ, ಜನ್ಮ–ಜನ್ಮಾಂತರದ ಪ್ರೇಮಕತೆಯ ಕಥಾವಸ್ತು ಒಳಗೊಂಡಿದೆ. ವಿಲನ್ ಪಾತ್ರದಲ್ಲಿ ನವಾಜುದ್ದೀನ್ ಸಿದ್ಧಿಖಿ ಕಾಣಿಸಿಕೊಂಡಿದ್ದಾರೆ.
ಆದಿತ್ಯ ಸರ್ಪೋರ್ದಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಮ್ಯಾಡ್ಡಾಕ್ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಶ್ಮಿಕಾ ನಟಿಸಿರುವ ಕಳೆದ ನಾಲ್ಕು ಸಿನಿಮಾಗಳಲ್ಲಿ ಮೂರು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದ್ದು ಸಾವಿರ ಕೋಟಿ ಗಳಿಕೆ ಮಾಡಿವೆ. ರಶ್ಮಿಕಾ ಕೈಯಲ್ಲಿ ಈಹ ಹಲವು ಬಾಲಿವುಡ್ ಸಿನಿಮಾಗಳಿವೆ. ರಶ್ಮಿಕಾಗೆ ಒಂದಕ್ಕಿಂತಲೂ ಒಂದು ಅದ್ಭುತ ಪಾತ್ರಗಳು ಅರಸಿ ಬರುತ್ತಿವೆ.
ನಿಮ್ಮ ಪ್ರತಿಕ್ರಿಯೆ ಏನು?